ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಜಯ
ಬೆಂಗಳೂರು, ಸೆಪ್ಟೆಂಬರ್, 11 : ಉದ್ಯಾನ ನಗರಿ ಬೆಂಗಳೂರಿನ ಪ್ರಥಮ ಪ್ರಜೆ ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಾಲಿಕೆಯಲ್ಲಿ ಯಶಸ್ವಿಯಾಗಿದ್ದು, ಬಿ.ಎನ್.ಮಂಜುನಾಥ ರೆಡ್ಡಿ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. 259 ಸದಸ್ಯರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಅವರನ್ನು ಆಯ್ಕೆ ಮಾಡಿದ್ದಾರೆ.
ಮೇಯರ್ ಆಯ್ಕೆಯಿಂದಾಗಿ ಸುಮಾರು 15 ದಿನಗಳಿಗೂ ಹೆಚ್ಚು ಕಾಲ ನಡೆದ ರಾಜಕೀಯ ಹಗ್ಗಜಗ್ಗಾಟ ಅಂತ್ಯಗೊಂಡಿದೆ. ಬಿಬಿಎಂಪಿ ಮೇಯರ್ ಹುದ್ದೆಗೇರಲು 131 ಮತಗಳ ಅಗತ್ಯವಿತ್ತು. ಮಡಿವಾಳ ವಾರ್ಡ್ ಕಾಂಗ್ರೆಸ್ ಸದಸ್ಯ ಮಂಜುನಾಥ ರೆಡ್ಡಿ ಅವರು ಸರಳ ಬಹುಮತ ಪಡೆದು ಜಯಗಳಿಸಿದರು. ಬಿಜೆಪಿ ಪರವಾಗಿ ಮೇಯರ್ ಚುನಾವಣೆಗೆ ಸ್ಪರ್ಧಿಸಿದ್ದ ಮಂಜುನಾಥ ರಾಜು ಅವರು 128 ಮತಗಳನ್ನು ಪಡೆದರು. [ಮೇಯರ್ ಆಯ್ಕೆ ಚುನಾವಣೆ ಹೇಗೆ ನಡೆಯಲಿದೆ?]
ಬಿಬಿಎಂಪಿ ಮೇಯರ್ ಹುದ್ದೆ ಸಾಮಾನ್ಯ ವರ್ಗದ ಪುರುಷ ಮತ್ತು ಉಪ ಮೇಯರ್ ಹುದ್ದೆ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿತ್ತು. ಉಪ ಮೇಯರ್ ಆಗಿ ಎಜೆಡಿಎಸ್‌ನ ಎಸ್.ಪಿ.ಹೇಮಲತಾ ಅವರು ಆಯ್ಕೆಯಾದರು. 2015ರ ಬಿಬಿಎಂಪಿ ಚುನಾವಣೆಯಲ್ಲಿ 100ಸ್ಥಾನಗಳಲ್ಲಿ ಜಯಗಳಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಮೇಯರ್ ಮತ್ತು ಉಪ ಮೇಯರ್ ಪಟ್ಟ ಕೈತಪ್ಪಿತು. ಮೇಯರ್ ಆಯ್ಕೆಯ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ...[ಬಿಜೆಪಿ ಮೇಯರ್, ಉಪ ಮೇಯರ್ ಅಭ್ಯರ್ಥಿಗಳು ಅಂತಿಮ]

ಸಮಯ 2 ಗಂಟೆ : ಬಿಬಿಎಂಪಿಯ ಉಪ ಮೇಯರ್ ಆಗಿ ವೃಷಭಾವತಿ ವಾರ್ಡ್ ಜೆಡಿಎಸ್ ಸದಸ್ಯೆ ಎಸ್.ಪಿ.ಹೇಮಲತಾ ಆಯ್ಕೆಯಾಗಿದ್ದಾರೆ
ಸಮಯ 12.55 : ಬಿಬಿಎಂಪಿ ಮೇಯರ್ ಆಗಿ ಮಡಿವಾಳ ವಾರ್ಡ್ ಕಾಂಗ್ರೆಸ್ ಸದಸ್ಯ ಬಿ.ಎನ್.ಮಂಜುನಾಥ ರೆಡ್ಡಿ ಆಯ್ಕೆ. ಒಟ್ಟು 131 ಮತಗಳು [ಮಂಜುನಾಥ್ ರೆಡ್ಡಿ ಪರಿಚಯ]
ಸಮಯ 12.50 : ಮಂಜುನಾಥ ರೆಡ್ಡಿ ಅವರ ಪರವಾಗಿ ಮತ ಹಾಕಿದವರ ಹೆಸರು ಹೇಳುತ್ತಿರುವ ಪ್ರಾದೇಶಿಕ ಆಯುಕ್ತರು
ಸಮಯ 12.44 : ಮತ ಎಣಿಕೆ ಆರಂಭ
ಸಮಯ 12.37 : ಮಂಜುನಾಥ ರೆಡ್ಡಿ ಬೆಂಬಲಿಸುವವರು ಕೈ ಎತ್ತಿ ಮತ ಹಾಕುವಂತೆ ಸೂಚನೆ
ಸಮಯ 12.33 : ಮೇಯರ್ ಸ್ಥಾನಕ್ಕೆ ಸಲ್ಲಿಕೆಯಾದ ಮಂಜುನಾಥ ರೆಡ್ಡಿ ಮತ್ತು ಮಂಜುನಾಥ ರಾಜು ಅವರ ನಾಮಪತ್ರ ಅಂಗೀಕಾರ, ನಾಮಪತ್ರ ವಾಪಸ್ ಪಡೆಯಲು 5 ನಿಮಿಷದ ಕಾಲಾವಕಾಶ
ಸಮಯ 12.30 : ಮೇಯರ್ ಮತ್ತು ಉಪ ಮೇಯರ್ ಚುನಾವಣಾ ಪ್ರಕ್ರಿಯೆ ಆರಂಭ
ಸಮಯ 12.25 : ಪಕ್ಷೇತರ ವಿಧಾನಪರಿಷತ್ ಸದಸ್ಯ ಡಿ.ಯು.ಮಲ್ಲಿಕಾರ್ಜುನ್ ಅವರಿಗೆ ಕಾಂಗ್ರೆಸ್ ಶಾಲು ಪ್ರಯತ್ನ ನಡೆಸಲಾಯಿತು. ಆದರೆ, ಶಾಲು ತೆಗೆದು ಅವರು ಟೇಬಲ್ ಮೇಲಿಟ್ಟರು. ಮಲ್ಲಿಕಾರ್ಜುನ್ ಅವರು ಬಿಜೆಪಿಗೆ ಬೆಂಬಲ ನೀಡುವುದಾಗಿ ಹಿಂದೆಯೇ ಹೇಳಿದ್ದರು.
ಸಮಯ 12.03 : ಚುನಾವಣೆ ಪ್ರಕ್ರಿಯೆಯಲ್ಲಿ ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ, ಬಿಬಿಎಂಪಿ ಆಯುಕ್ತ ಕುಮಾರ್ ನಾಯಕ್, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಪಾಲ್ಗೊಂಡಿದ್ದಾರೆ
ಸಮಯ 11.56 : ನೂತನ ಪಾಲಿಕೆ ಸದಸ್ಯರ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆ ಆರಂಭ, 10 ಸದಸ್ಯರು ಒಟ್ಟಿಗೆ ಪ್ರಮಾಣ ವಚನ ಸ್ವೀಕರಿಸಬೇಕು. ಪ್ರಮಾಣ ವಚನದ ನಂತರ ಮೇಯರ್ ಚುನಾವಣೆ ನಡೆಯಲಿದೆ
ಸಮಯ 11.52 : ಮೂವರು ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು, ಡಿ.ವಿ.ಸದಾನಂದ ಗೌಡ, ಅನಂತ್ ಕುಮಾರ್ ಬಿಬಿಎಂಪಿ ಕಚೇರಿಗೆ ಆಗಮನ
ಸಮಯ 11.40 : ಬಿ.ಜಯಶ್ರೀ, ರಾಜೀವ್ ಚಂದ್ರಶೇಖರ್, ಜಗ್ಗೇಶ್, ತಾರಾ, ವಿ.ಸೋಮಣ್ಣ, ವೀರಪ್ಪ ಮೊಯ್ಲಿ ಮುಂತಾದವರು ಬಿಬಿಎಂಪಿ ಕಚೇರಿಗೆ ಆಗಮಿಸಿದ್ದಾರೆ.
ಸಮಯ 11.30 : ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ ಅವರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬಿಬಿಎಂಪಿ ಕಚೇರಿಗೆ ಆಗಮಿಸುತ್ತಿದ್ದಾರೆ. ಅವರನ್ನು ಕರೆತರಲು ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ.
ಸಮಯ 11.15 : ನೂತನ ಸದಸ್ಯರ ಪ್ರಮಾಣ ವಚನ ಪ್ರಕ್ರಿಯೆಗಳು ಆರಂಭ. ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ.

ಸಮಯ 11.12 : ಜೆಡಿಎಸ್-ಕಾಂಗ್ರೆಸ್ ಮೈತ್ರಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಸಮಯ 11 ಗಂಟೆ : ಕಾಂಗ್ರೆಸ್‍ನ ಎಲ್ಲಾ 76 ಸದಸ್ಯರ ಆಗಮನ. ಜೆಡಿಎಸ್‍ನ ಎಲ್ಲಾ 14 ಸದಸ್ಯರು ಬಿಬಿಎಂಪಿ ಕಚೇರಿಯಲ್ಲಿದ್ದಾರೆ. ಬಿಜೆಪಿಯ 10 ಸದಸ್ಯರು ಇನ್ನೂ ಆಗಮಿಸಬೇಕಾಗಿದೆ.
ಸಮಯ 10.55 : 'ಬಿಜೆಪಿ ನಾಯಕರ ತಲೆಯಲ್ಲಿ ಬುದ್ಧಿ ಇಲ್ಲ, ಅವರು ಜನಾಭಿಪ್ರಾಯವೆಂದು ಓಡಾಡುತ್ತಿದ್ದಾರೆ. ಕಾಂಗ್ರೆಸ್‌ನವರೇ ಮೇಯರ್ ಆಗಲಿದ್ದಾರೆ' ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಬಿಬಿಎಂಪಿ ಕಚೇರಿಯಲ್ಲಿ ಹೇಳಿದರು.
ಸಮಯ 10.50 : ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರಿಗೆ ಮತದಾನದ ಹಕ್ಕು ನೀಡಿದ ವಿರುದ್ಧ ಕಾನೂನು ಹೋರಾಟ ಮಾಡುತ್ತಿರುವ ಬಿಜೆಪಿಯವರೇ ಸಂಸದರನ್ನು ಕರೆಸಿ ಮತ ಹಾಕಿಸುತ್ತಿದ್ದಾರೆ. ಬಿಜೆಪಿಗೆ ಮತದಾನದ ಹಕ್ಕು ವಿರೋಧಿಸುವ ನೈತಿಕತೆ ಇಲ್ಲ ಎಂದು ಬಿಬಿಎಂಪಿ ಕಚೇರಿ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಕೆಪಿಸಿಸಿ ಕಾನೂನು ಘಟಕದ ವಕೀಲರನ್ನು ಪೊಲೀಸರು ಬಂಧಿಸಿದ್ದಾರೆ.
ಸಮಯ 10.44 : ಡೆಂಗ್ಯೂನಿಂದ ಬಳಲುತ್ತಿರುವ ಕೊಡಿಗೇಹಳ್ಳಿ ವಾರ್ಡ್ ಕಾಂಗ್ರೆಸ್ ಸದಸ್ಯ ಚೇತನ್ ಅವರು, ಆಸ್ಪತ್ರೆಯಿಂದ ನೇರವಾಗಿ ಬಿಬಿಎಂಪಿ ಕಚೇರಿಗೆ ಮತದಾನ ಮಾಡಲು ಆಗಮಿಸಿದ್ದಾರೆ.
ಸಮಯ 10.37 : ರಾಜ್ಯಸಭಾ ಸದಸ್ಯ ವಿಜಯ್ ಮಲ್ಯ ಅವರು ಮೇಯರ್ ಚುನಾವಣೆಯಲ್ಲಿ ಪಾಲ್ಗೊಳ್ಳುವುದಿಲ್ಲ. ವಿಜಯ್ ಮಲ್ಯ ಅವರಿಗೆ ಮತದಾನದ ಹಕ್ಕಿದೆ. ಆದರೆ, ಅವರು ಲಂಡನ್‌ನಗರದಲ್ಲಿದ್ದಾರೆ.
ಸಮಯ 10.35 : 'ಕಾಂಗ್ರೆಸ್ ಬೆಂಗಳೂರಿನ ಜನರಿಗೆ ದ್ರೋಹ ಮಾಡಿದೆ. ಬಿಜೆಪಿ ಆಪರೇಷನ್ ಕಮಲದಂತಹ ಕೆಲಸ ಮಾಡುವುದಿಲ್ಲ. ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರಿಗೆ ಮತದಾನದ ಹಕ್ಕು ನೀಡಿದ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಸುಪ್ರೀಂಕೋರ್ಟ್‌ಗೆ ಹೋಗಲು ನಾವು ಸಿದ್ಧರಿದ್ದೇವೆ' ಎಂದು ಬಿಜೆಪಿ ನಾಯಕ ಆರ್.ಅಶೋಕ್ ಹೇಳಿದರು.
ಸಮಯ 10.30 : ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಬೆಂಬಲ ನೀಡುವ ಪಕ್ಷೇತರರಿಗೆ ಸಾರ್ವಜನಿಕ ಆರೋಗ್ಯ, ನಗರ ಯೋಜನೆ ಮತ್ತು ಅಭಿವೃದ್ಧಿ, ವಾರ್ಡ್ ಮಟ್ಟದ ಸಾರ್ವಜನಿಕ ಕಾಮಗಾರಿ, ಲೆಕ್ಕಪತ್ರ, ಸಾಮಾಜಿಕ ನ್ಯಾಯ, ಅಪೀಲುಗಳು, ಮಾರುಕಟ್ಟೆ ಸ್ಥಾಯಿ ಸಮಿತಿಗಳು ಸಿಗಲಿವೆ.
ಸಮಯ 10.14 : ಮೈತ್ರಿ ಕೂಟದ ಅಧಿಕಾರ ಹಂಚಿಕೆಯಂತೆ ಕಾಂಗ್ರೆಸ್ ತೆರಿಗೆ ಮತ್ತು ಆರ್ಥಿಕ ಸಮಿತಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಶಿಕ್ಷಣ ಸ್ಥಾಯಿ ಸಮಿತಿಯನ್ನು ತನ್ನ ಬಳಿ ಇಟ್ಟುಕೊಳ್ಳಲಿದೆ. ಜೆಡಿಎಸ್ ಪಕ್ಷಕ್ಕೆ ಬೃಹತ್ ಸಾರ್ವಜನಿಕ ಕಾಮಗಾರಿ, ತೋಟಗಾರಿಕೆ ಸ್ಥಾಯಿ ಸಮಿತಿಗಳನ್ನು ನೀಡಲಿದೆ. [ಮೇಯರ್ ಚುನಾವಣೆಗೆ ಯಾರು ಮತ ಹಾಕುತ್ತಾರೆ?]
ಸಮಯ 10 ಗಂಟೆ : ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೂ ಮೊದಲು ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಅವರು ನೂತನವಾಗಿ ಆಯ್ಕೆಯಾದ 198 ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. 10 ಸದಸ್ಯರು ಒಮ್ಮೆ ಪ್ರಮಾಣ ವಚನ ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿದೆ.
ಸಮಯ 9.50 : ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳು : ತೆರಿಗೆ ಮತ್ತು ಆರ್ಥಿಕ, ಸಾರ್ವಜನಿಕ ಆರೋಗ್ಯ, ನಗರ ಯೋಜನೆ ಮತ್ತು ಅಭಿವೃದ್ಧಿ, ಬೃಹತ್ ಸಾರ್ವಜನಿಕ ಕಾಮಗಾರಿ, ವಾರ್ಡ್ ಮಟ್ಟದ ಸಾರ್ವಜನಿಕ ಕಾಮಗಾರಿ, ಲೆಕ್ಕಪತ್ರ, ಶಿಕ್ಷಣ, ಸಾಮಾಜಿಕ ನ್ಯಾಯ, ಅಪೀಲುಗಳ ಸಮಿತಿ, ತೋಟಗಾರಿಕೆ, ಮಾರುಕಟ್ಟೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
ಸಮಯ 9.40 : 'ಮೊದಲು ಜೆಡಿಎಸ್ ಬೇಷರತ್ ಬೆಂಬಲ ಕೊಡುವುದಾಗಿ ಹೇಳಿತ್ತು. ಮೈತ್ರಿ ಮಾಡಿಕೊಂಡರೆ ಕಾಂಗ್ರೆಸ್ ನಮಗೆ ಅಧಿಕಾರ ಹಂಚಿಕೆ ಮಾಡುವಾಗಿ ಹೇಳಿತ್ತು. ಅದರಂತೆ ಅವರು ತೀರ್ಮಾನ ಕೈಗೊಂಡು, ಉಪ ಮೇಯರ್ ಹುದ್ದೆ ಮತ್ತು 2 ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ಪಕ್ಷಕ್ಕೆ ನೀಡಿದ್ದಾರೆ' ಎಂದು ಚಾಮರಾಜಪೇಟೆ ಜೆಡಿಎಸ್ ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ಸಮಯ 9.30 : ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪರವಾಗಿ ಮಂಜುನಾಥ್ ರೆಡ್ಡಿ, ಉಪ ಮೇಯರ್ ಸ್ಥಾನಕ್ಕೆ ಜೆಡಿಎಸ್ ಪರವಾಗಿ ಎಸ್.ಪಿ.ಹೇಮಲತಾ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಸಮಯ 9.25 : 'ಕಾಂಗ್ರೆಸ್ ಪಕ್ಷದವರೇ ಮೇಯರ್ ಆಗುತ್ತಾರೆ ಎಂದು ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು. ಬಿಬಿಎಂಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೇಯರ್ ಚುನಾವಣೆ ಸಂದರ್ಭದಲ್ಲಿ ಹೇಗೆ ಕೈ ಮೇಲೆತ್ತಿಸಬೇಕು ಎಂದು ನಮಗೆ ಗೊತ್ತಿದೆ. 6 ಪಕ್ಷೇತರ ಅಭ್ಯರ್ಥಿಗಳು ನಮ್ಮ ಜೊತೆ ಇದ್ದಾರೆ. ಬಿಜೆಪಿ ಅವರು ಅವರ ಕಾರ್ಯತಂತ್ರ ಮಾಡಲಿ' ಎಂದರು.
ಸಮಯ 9.10 : ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿರೋಧಿಸಿ ಪ್ರತಿಭಟನೆ ನಡೆಸಲು ಬಿಜೆಪಿ ಸಜ್ಜಾಗಿದೆ. ಕೌನ್ಸಿಲ್ ಸಭೆಯ ಒಳಗೆ ಹಾಗೂ ಹೊರಗೆ ಪ್ರತಿಭಟನೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಬಿಬಿಎಂಪಿ ಕಚೇರಿ ಸುತ್ತ-ಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಸಮಯ 9 ಗಂಟೆ : ಮೇಯರ್ ಮತ್ತು ಉಪ ಮೇಯರ್ ಪಟ್ಟ ಕೈತಪ್ಪಿದರೂ 12 ಸ್ಥಾಯಿ ಸಮಿತಿಗಳ ಪೈಕಿ 5 ಪ್ರಭಾವಿ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಹಿಡಿಯಲು ಬಿಜೆಪಿ ತಂತ್ರ ರೂಪಿಸಿದೆ. ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಶಾಸಕರು, ಸಂಸದರಿಗೆ ಮತದಾನದ ಹಕ್ಕನ್ನು ನೀಡಿರುವುದನ್ನು ವಿರೋಧಿಸಿ ಕಾನೂನು ಹೋರಾಟವನ್ನು ಮುಂದುವರೆಸಲಿದೆ.
ಸಮಯ 8.50 : ಕಾಡು ಮಲ್ಲೇಶ್ವರ ವಾರ್ಡ್ ಸದಸ್ಯ ಮಂಜುನಾಥ ರಾಜು ಅವರು ಮೇಯರ್ ಸ್ಥಾನಕ್ಕೆ ಮತ್ತು ಎಚ್.ಸಿ.ನಾಗರತ್ನ ಅವರು ಉಪ ಮೇಯರ್ ಸ್ಥಾನಕ್ಕೆ ಬಿಜೆಪಿ ಪರವಾಗಿ ನಾಮಪತ್ರ ಸಲ್ಲಿಸಿದರು.
ಸಮಯ 8.45 : ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಶಾಸಕ ಕೆ. ಗೋಪಾಲಯ್ಯ ಅವರ ಪತ್ನಿ ಎಸ್.ಪಿ.ಹೇಮಲತಾ ಅವರು ಜೆಡಿಎಸ್ ಉಪ ಮೇಯರ್ ಅಭ್ಯರ್ಥಿ. ವೃಷಭಾವತಿ ವಾರ್ಡ್‌ನಿಂದ ಅವರು ಗೆಲುವು ಸಾಧಿಸಿದ್ದಾರೆ.
ಸಮಯ 8.40 : 198 ಬಿಬಿಎಂಪಿ ಸದಸ್ಯರ ಜೊತೆಗೆ ಬೆಂಗಳೂರು ನಗರದ ವ್ಯಾಪ್ತಿಗೆ ಸೇರಿದ ಲೋಕಸಭೆ, ರಾಜ್ಯಸಭೆ ಸದಸ್ಯರು, ವಿಧಾನಸಭೆ, ವಿಧಾನ ಪರಿಷತ್ ಸದಸ್ಯರು ಮೇಯರ್ ಆಯ್ಕೆಗೆ ಮತದಾನ ಮಾಡಲಿದ್ದಾರೆ. ಮೂವರು ಕೇಂದ್ರ ಮತ್ತು ಐವರು ರಾಜ್ಯದ ಸಚಿವರು ಇಂದು ಮತಚಲಾಯಿಸಲಿದ್ದಾರೆ.
ಸಮಯ 8.30 : ಕಾಡು ಮಲ್ಲೇಶ್ವರ ವಾರ್ಡ್ ಬಿಜೆಪಿ ಸದಸ್ಯ ಮಂಜುನಾಥ ರಾಜು ಅವರನ್ನು ಮೇಯರ್ ಹುದ್ದೆಗೆ, ಪಟ್ಟಾಭಿರಾಮನಗರ ವಾರ್ಡ್‌ನ ಎಚ್.ಸಿ.ನಾಗರತ್ನ ಅವರನ್ನು ಉಪ ಮೇಯರ್ ಹುದ್ದೆಗೆ ಆಯ್ಕೆ ಮಾಡಿದೆ.
ಸಮಯ 8 ಗಂಟೆ : ಬಿಬಿಎಂಪಿ ಮೇಯರ್ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಮಡಿವಾಳ ವಾರ್ಡ್‌ನ ಮಂಜುನಾಥ್ ರೆಡ್ಡಿ ಆಯ್ಕೆಯಾಗಿರುವುದು ಬಹುತೇಕ ಖಚಿತವಾಗಿದೆ. ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ನಿವಾಸದಲ್ಲಿ ಗುರುವಾರ ರಾತ್ರಿ ನಡೆದ ಸಭೆಯಲ್ಲಿ ಮಂಜುನಾಥ್ ರೆಡ್ಡಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.
-
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ












Click it and Unblock the Notifications