ಬಿಬಿಎಂಪಿ ಚುನಾವಣೆ; ಮೇಯರ್ ಪಟ್ಟದ ಹೊಸ್ತಿಲಲ್ಲಿ ಬಿಜೆಪಿ

ಬೆಂಗಳೂರು, ಸೆಪ್ಟೆಂಬರ್ 25 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ದಿನಾಂಕ ನಿಗದಿಯಾಗಿದೆ. ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಪ್ರಯತ್ನ ನಡೆಸುತ್ತಿದ್ದು, 4 ಪಕ್ಷೇತರ ಸದಸ್ಯರ ಬೆಂಬಲ ಸಿಕ್ಕರೆ ಮೇಯರ್ ಹುದ್ದೆ ಮೈತ್ರಿಕೂಟದ ಕೈ ತಪ್ಪಲಿದೆ.

ಅಕ್ಟೋಬರ್ 1ರಂದು ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್, ವಿವಿಧ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲು ಚುನಾವಣೆ ನಡೆಯಲಿದೆ. ಪ್ರಸ್ತುತ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದು, ಈ ಬಾರಿ ಅಧಿಕಾರ ಹಿಡಿಯಲು ಬಿಜೆಪಿ ತಂತ್ರ ರೂಪಿಸಿದೆ.

ಒಟ್ಟು 257 ಸದಸ್ಯರು ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ಪಡೆದಿದ್ದಾರೆ. ಮೇಯರ್ ಹುದ್ದೆಗೇರಲು ಬೇಕಾದ ಮ್ಯಾಜಿಕ್ ನಂಬರ್ 129. 7 ಪಕ್ಷೇತರ ಸದಸ್ಯರ ಬೆಂಬಲ ಪಡೆದವರು ಮೇಯರ್ ಹುದ್ದೆಗೇರಬಹುದು.

ಕಾಂಗ್ರೆಸ್-ಜೆಡಿಎಸ್ ಕಳೆದ ನಾಲ್ಕು ವರ್ಷಗಳಿಂದ ಮೈತ್ರಿ ಮಾಡಿಕೊಂಡು ಮೇಯರ್ ಮತ್ತು ಉಪ ಮೇಯರ್ ಪಟ್ಟವನ್ನು ಹಂಚಿಕೊಂಡಿವೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಂಡಿದ್ದು, ಈ ಬಾರಿಯ ಬಿಬಿಎಂಪಿ ಚುನಾವಣೆಯಲ್ಲಿ ಮೈತ್ರಿ ಮುಂದುವರೆಯುವ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಬಿಬಿಎಂಪಿ ಸದಸ್ಯ ಬಲದ ಸಂಖ್ಯಾ ಚಿತ್ರಣ ಹೀಗಿದೆ.

ಒಟ್ಟು ಮತದಾರರು 257

ಒಟ್ಟು ಮತದಾರರು 257

198 ಬಿಬಿಎಂಪಿ ಸದಸ್ಯರು, 5 ಸಂಸದರು, 9 ರಾಜ್ಯಸಭಾ ಸದಸ್ಯರು, 23 ಶಾಸಕರು, 22 ವಿಧಾನ ಪರಿಷತ್ ಸದಸ್ಯರು ಸೇರಿ 257 ಸದಸ್ಯರು ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ಪಡೆದಿದ್ದಾರೆ. ಮೇಯರ್ ಹುದ್ದೆ ಸಿಗಲು ಬೇಕಾದ ಮ್ಯಾಜಿಕ್ ನಂಬರ್ 129.

ಬಿಜೆಪಿ ಸದಸ್ಯ ಬಲವೆಷ್ಟು?

ಬಿಜೆಪಿ ಸದಸ್ಯ ಬಲವೆಷ್ಟು?

ಬಿಬಿಎಂಪಿ ಚುನಾವಣೆಯಲ್ಲಿ 101 ಸ್ಥಾನಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿ ಪ್ರಸ್ತುತ ವಿರೋಧ ಪಕ್ಷದ ಸ್ಥಾನದಲ್ಲಿದೆ. ಈ ಬಾರಿಯ ಚುನಾವಣೆಯಲ್ಲಿ 101 ಬಿಬಿಎಂಪಿ ಸದಸ್ಯರು, 4 ಸಂಸದರು, 2 ರಾಜ್ಯಸಭಾ ಸದಸ್ಯರು, 11 ಶಾಸಕರು, 7 ವಿಧಾನ ಪರಿಷತ್ ಸದಸ್ಯರು ಸೇರಿ ಬಿಬಿಎಂಪಿ 125 ಸದಸ್ಯ ಬಲವನ್ನು ಹೊಂದಿದೆ.

ಕಾಂಗ್ರೆಸ್ ಸದಸ್ಯರು ಎಷ್ಟು?

ಕಾಂಗ್ರೆಸ್ ಸದಸ್ಯರು ಎಷ್ಟು?

ಬಿಬಿಎಂಪಿಯಲ್ಲಿ ಕಾಂಗ್ರೆಸ್ 76 ಸದಸ್ಯ ಬಲವನ್ನು ಹೊಂದಿದೆ. ಒಬ್ಬರು ಸಂಸದರು, 6 ರಾಜ್ಯಸಭಾ ಸದಸ್ಯರು, 11 ಶಾಸಕರು, 10 ವಿಧಾನ ಪರಿಷತ್ ಸದಸ್ಯರು ಸೇರಿ 104 ಸದಸ್ಯ ಬಲವನ್ನು ಪಕ್ಷ ಹೊಂದಿದೆ.

ಜೆಡಿಎಸ್ ಸಂಖ್ಯಾ ಬಲ

ಜೆಡಿಎಸ್ ಸಂಖ್ಯಾ ಬಲ

14 ಜೆಡಿಎಸ್‌ನ ಬಿಬಿಎಂಪಿ ಸದಸ್ಯರಿದ್ದಾರೆ. 1 ರಾಜ್ಯಸಭಾ ಸದಸ್ಯ, 5 ವಿಧಾನ ಪರಿಷತ್ ಸದಸ್ಯ, 1 ಶಾಸಕ ಸೇರಿ 21 ಸದಸ್ಯರ ಬಲವನ್ನು ಜೆಡಿಎಸ್ ಹೊಂದಿದೆ. 4 ವರ್ಷದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಮೇಯರ್, ಉಪ ಮೇಯರ್ ಪಟ್ಟವನ್ನು ಹಂಚಿಕೊಂಡಿವೆ.

7 ಪಕ್ಷೇತರ ಸದಸ್ಯರು

7 ಪಕ್ಷೇತರ ಸದಸ್ಯರು

ಬಿಬಿಎಂಪಿಯಲ್ಲಿ 7 ಪಕ್ಷೇತರ ಸದಸ್ಯರು ಇದ್ದಾರೆ. ಯಾರೇ ಮೇಯರ್ ಆಗಲು ಇವರು ಬೆಂಬಲ ನೀಡುವುದು ಅನಿವಾರ್ಯ. ಈ ಬಾರಿ 4 ಸದಸ್ಯರು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಬಿಜೆಪಿ 125 ಸದಸ್ಯ ಬಲ ಹೊಂದಿದ್ದು, 4 ಪಕ್ಷೇತರ ಸದಸ್ಯರು ಬೆಂಬಲ ಕೊಟ್ಟರೆ ಮೇಯರ್ ಹುದ್ದೆ ಪಕ್ಷದ ಪಾಲಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+