ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರ್ಪೊರೇಟರ್‌ ಕೈಯಲ್ಲೇ ಉಳಿದ ಜನರ ತೆರಿಗೆ ಹಣದ ಐ-ಪಾಡ್!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 09: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಅವಧಿ ಸೆಪ್ಟೆಂಬರ್ 10ಕ್ಕೆ ಪೂರ್ಣಗೊಂಡಿದೆ. ಪಾಲಿಕೆಯ ಕಾರ್ಪೊರೇಟರ್‌ಗಳ ಅವಧಿ ಪೂರ್ಣಗೊಂಡರೂ ಜನರ ತೆರಿಗೆ ಹಣದಲ್ಲಿ ಅವರಿಗೆ ನೀಡಿದ್ದ ಐ-ಪಾಡ್‌ಗಳು ಇನ್ನೂ ಅವರ ಕೈಯಲ್ಲಿಯೇ ಇವೆ.

ಬಿಬಿಎಂಪಿ ಕೌನ್ಸಿಲ್ ಅವಧಿ ಪೂರ್ಣಗೊಂಡು ಆಡಳಿತಾಧಿಕಾರಿ ನೇಮಕವಾದರೂ ಯಾವ ಕಾರ್ಪೊರೇಟರ್ ಸಹ ಐ-ಪಾಡ್ ವಾಪಸ್ ನೀಡಿಲ್ಲ. ಬೆಂಗಳೂರು ಜನರ ತೆರಿಗೆ ಹಣದಲ್ಲಿ ಪ್ರತಿ ಕಾರ್ಪೊರೇಟರ್‌ಗೆ 45 ಸಾವಿರ ರೂ. ಮೌಲ್ಯದ ಐ-ಪಾಡ್ ಬಿಬಿಎಂಪಿಯಿಂದ ನೀಡಲಾಗಿತ್ತು.

ಬಿಬಿಎಂಪಿ ಚುನಾವಣೆ ಸದ್ಯಕ್ಕಿಲ್ಲ; ಆಡಳಿತಾಧಿಕಾರಿ ನೇಮಕ ಬಿಬಿಎಂಪಿ ಚುನಾವಣೆ ಸದ್ಯಕ್ಕಿಲ್ಲ; ಆಡಳಿತಾಧಿಕಾರಿ ನೇಮಕ

ಕೌನ್ಸಿಲ್ ಸಭೆಯನ್ನು ಕಾಗದ ರಹಿತವಾಗಿ ನಡೆಸುವ ಉದ್ದೇಶದಿಂದ ಐ-ಪಾಡ್ ನೀಡಲಾಗಿತ್ತು. ಹಲವರು ಅದನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿದ್ದಾರೆ. ಆದರೆ, ಕೌನ್ಸಿಲ್ ಅವಧಿ ಮುಗಿದರೂ ಅದನ್ನು ಬಿಬಿಎಂಪಿಗೆ ವಾಪಸ್ ಕೊಡದೇ ಕಾರ್ಪೊರೇಟರ್‌ಗಳೇ ಇಟ್ಟುಕೊಂಡಿದ್ದಾರೆ.

ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಗೌರವ್‌ ಗುಪ್ತ ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಗೌರವ್‌ ಗುಪ್ತ

BBMP Issues Notices to Former Corporators to Return iPad

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಐ-ಪಾಡ್ ವಾಪಸ್ ಕೊಡುವಂತೆ ಮಾಜಿ ಕಾರ್ಪೊರೇಟರ್‌ಗಳಿಗೆ ನೋಟಿಸ್ ನೀಡಲಿದೆ. ವಾಪಸ್ ಕೊಡುವುದಕ್ಕೆ ಸಹ ಹಲವಾರ ಕಾರ್ಪೊರೇಟರ್‌ಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ಮೀಸಲಾತಿ ಪಟ್ಟಿ; ಮಾಜಿ ಮೇಯರ್‌ಗಳ ಕೈ ತಪ್ಪಿದ ವಾರ್ಡ್! ಬಿಬಿಎಂಪಿ ಮೀಸಲಾತಿ ಪಟ್ಟಿ; ಮಾಜಿ ಮೇಯರ್‌ಗಳ ಕೈ ತಪ್ಪಿದ ವಾರ್ಡ್!

ಮಾಸ್ಕ್ ವಾಪಸ್ ಪಡೆಯುತ್ತಾರಾ?: ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಅಬ್ದುಲ್ ವಾಜೀದ್ ಐ-ಪಾಡ್ ವಾಪಸ್ ಪಡೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. "ಪಾಲಿಕೆಯಿಂದ ನಮಗೆ ಮಾಸ್ಕ್, ಸ್ಯಾನಿಟೈಸರ್ ನೀಡಲಾಗಿತ್ತು. ಅದನ್ನು ಸಹ ವಾಪಸ್ ನೀಡಬೇಕೆ?" ಎಂದು ಪ್ರಶ್ನಸಿದ್ದಾರೆ.

"ಐದು ವರ್ಷಗಳಲ್ಲಿ ಕೆಲವು ಕಾರ್ಪೊರೇಟರ್‌ಗಳು ಮರಣ ಹೊಂದಿದ್ದಾರೆ. ಪಾಲಿಕೆ ಅವರಿಂದ ಹೇಗೆ ಐ-ಪಾಡ್ ವಾಪಸ್ ಪಡೆಯಲಿದೆ?. ಅಧಿಕಾರಿಗಳು ಆಸ್ತಿ ತೆರಿಗೆ ಸಂಗ್ರಹ ಮಾಡುವ ಕಡೆ ಗಮನ ಕೊಡಲಿ" ಎಂದು ಅಬ್ದುಲ್ ವಾಜೀದ್ ಸಲಹೆ ನೀಡಿದ್ದಾರೆ.

2015ರ ಪಾಲಿಕೆ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದ ಎಲ್ಲಾ ಸದಸ್ಯರ ಅವಧಿ ಸೆಪ್ಟೆಂಬರ್ 10ಕ್ಕೆ ಅಂತ್ಯಗೊಂಡಿದೆ. ಪಾಲಿಕೆಯ ಕೌನ್ಸಿಲ್ ಅವಧಿ ಪೂರ್ಣಗೊಂಡು ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ.

ಹೊಸದಾಗಿ ಚುನಾವಣೆ ನಡೆದು ಮೇಯರ್ ಮತ್ತು ಉಪ ಮೇಯರ್ ಆಯ್ಕೆ ನಡೆಯುವ ತನಕ ಆಡಳಿತಾಧಿಕಾರಿಯೇ ಬಿಬಿಎಂಪಿ ಆಡಳಿತವನ್ನು ನೋಡಿಕೊಳ್ಳಲಿದ್ದಾರೆ. ಡಿಸೆಂಬರ್ ವೇಳೆಗೆ ಚುನಾವಣೆ ನಡೆಯುವ ನಿರೀಕ್ಷೆ ಇದೆ.

Recommended Video

Rain Alert : ರಾಜ್ಯದಂತ ಭಾರಿ ಮಳೆ ಸಾಧ್ಯತೆ | Oneindia Kannada

ಕರ್ನಾಟಕ ಸರ್ಕಾರ ಬಿಬಿಎಂಪಿಯ ಈಗಿರುವ 198 ವಾರ್ಡ್‌ಗಳನ್ನು 225ಕ್ಕೆ ಹೆಚ್ಚಿಸಲಿದೆ ಬಳಿಕ ಹೊಸ ಮೀಸಲಾತಿ ಪಟ್ಟಿ ಪ್ರಕಟಗೊಂಡು ಚುನಾವಣೆ ನಡೆಯಲಿದೆ.

English summary
Bruhat Bengaluru Mahanagara Palike (BBMP) formers corporators not returned the Ipads given to them by the public money. Rs 45,000 Ipad give to them to make council proceedings paperless.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X