Get Updates
Get notified of breaking news, exclusive insights, and must-see stories!

Award for Bengaluru: ಉದ್ಯಾನ ನಗರಿಗೆ ಮೆರಗು ತಂದ 'ಆರೋಗ್ಯಕರ ನಗರಗಳ ಪಾಲುದಾರಿಕೆ ಪ್ರಶಸ್ತಿ-2023', ಬಿಬಿಎಂಪಿ ಹರ್ಷ

ಹೆಚ್ಚುತ್ತಿರುವ ಜನಸಂಖ್ಯೆಗನುಗುಣವಾಗಿ ವಾಹನದಟ್ಟಣೆ ಮತ್ತು ವಾಯು ಮಾಲಿನ್ಯ ವಿಚಾರವಾಗಿ ಚರ್ಚೆಗೆ ಬರುತ್ತಿದ್ದ ಬೆಂಗಳೂರು ಪ್ರತಿಷ್ಠಿತ ಪ್ರಶಸ್ತಿಯೊಂದನ್ನು ಬಾಚಿಕೊಂಡಿದೆ. ಅದರ ವಿವರ ನಿಮ್ಮ ಮುಂದೆ.

ಬೆಂಗಳೂರು, ಮಾರ್ಚ್ 16: ಹೆಚ್ಚುತ್ತಿರುವ ಜನಸಂಖ್ಯೆಗನುಗುಣವಾಗಿ ವಾಹನದಟ್ಟಣೆ ಮತ್ತು ವಾಯು ಮಾಲಿನ್ಯ ವಿಚಾರವಾಗಿ ಚರ್ಚೆಗೆ ಬರುತ್ತಿದ್ದ ಬೆಂಗಳೂರು ಪ್ರತಿಷ್ಠಿತ ಪ್ರಶಸ್ತಿಯೊಂದನ್ನು ಬಾಚಿಕೊಂಡಿದೆ. ಇದಕ್ಕೆ ಬೆಂಗಳೂರಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಉದ್ಯಾನ ನಗರಿ, ಐಟಿ ಹಬ್ ಆಗಿರುವ ಬೆಂಗಳೂರು, ಧೂಮಪಾನ-ಮುಕ್ತ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಉದ್ದೇಶದಿಂದ ಜಾಗತಿಕ ಮಟ್ಟದಲ್ಲಿ ನೀಡಲ್ಪಡುವ 'ಆರೋಗ್ಯಕರ ನಗರಗಳ ಪಾಲುದಾರಿಕೆ ಪ್ರಶಸ್ತಿ-2023' ಭಾಜನವಾಗಿದೆ. ಈ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಖ್ಯ ಆಯುಕ್ತ ಶ್ರೀ ತುಷಾರ್ ಗಿರಿ ನಾಥ್ ತಿಳಿಸಿದರು.

ಸಾಂಕ್ರಾಮಿಕವಲ್ಲದ ರೋಗಗಳು (NCDs) ಮತ್ತು ಗಾಯಗಳನ್ನು ತಡೆಗಟ್ಟುವ ಮೂಲಕ ಜೀವ ಉಳಿಸಲು ಬದ್ಧವಾಗಿರುವ ವಿಶ್ವದ ಪ್ರಮುಖ 70 ನಗರಗಳ ಜಾಗತಿಕ ಪಾಲುದಾರಿಕೆಯ ಸಹಭಾಗಿತ್ವದಲ್ಲಿ, ಮಾರ್ಚ್ 15, 2023 ರಂದು ಲಂಡನ್‌ನಲ್ಲಿ ನಡೆದ 'ಆರೋಗ್ಯಕರ ನಗರಗಳ ಶೃಂಗಸಭೆ' ಬೆಂಗಳೂರಿನ ನಿಯೋಗ ಪ್ರಶಸ್ತಿ ಸ್ವೀಕರಿಸಿದೆ.

ಈ ಶೃಂಗಸಭೆಯಲ್ಲಿ ವಿಶ್ವದಾದ್ಯಂತ 50 ಕ್ಕೂ ಹೆಚ್ಚು ನಗರಗಳ ಮೇಯರ್‌ಗಳು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು.

ಜಗತ್ತಿನಾದ್ಯಂತ ತುರ್ತು ಸಾರ್ವಜನಿಕ ಆರೋಗ್ಯ ಕಾಳಜಿ ಮತ್ತು ಆರೋಗ್ಯಕರ ನಗರಗಳನ್ನು ರೂಪಿಸುವ ಕುರಿತ ವಿಚಾರಗಳು ಇಲ್ಲಿ ಚರ್ಚಿಸಲ್ಪಟ್ಟವು.

ಬಿಬಿಎಂಪಿ ಬದ್ಧತೆಗೆ ಪ್ರಶಸ್ತಿಯ ಗರಿ

ಬಿಬಿಎಂಪಿ ಬದ್ಧತೆಗೆ ಪ್ರಶಸ್ತಿಯ ಗರಿ

ಲಂಡನ್‌ನಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ. ತ್ರಿಲೋಕ್ ಚಂದ್ರ ಕೆ.ವಿ, "ಧೂಮಪಾನ ಮುಕ್ತ ಕಾನೂನು ಜಾರಿಗೊಳಿಸಲು ಮತ್ತು ಧೂಮಪಾನಿಗಳು ಅಲ್ಲದವರನ್ನು (ಸೆಕೆಂಡ್‌ ಹ್ಯಾಂಡ್‌ ಸ್ಮೋಕರ್ಸ್‌) ಹೊಗೆಯಿಂದಾಗುವ ಹಾನಿಯಿಂದ ರಕ್ಷಿಸಲು ನಮಗಿರುವ ಬದ್ಧತೆಗಾಗಿ ಈ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ಪರವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಲು ಹೆಮ್ಮೆ ಎನಿಸುತ್ತಿದೆ ಎಂದು ಸಂತಸ ಹಂಚಿಕೊಂಡರು.

ಧೂಮಪಾನದ ಪ್ರಮಾಣ ಶೇ.5.2 ಇಳಿಕೆ

ಧೂಮಪಾನದ ಪ್ರಮಾಣ ಶೇ.5.2 ಇಳಿಕೆ

ಈ ಪ್ರಶಸ್ತಿ ನಮ್ಮ ಬಿಬಿಎಂಪಿ ಆರೋಗ್ಯ ವಿಭಾಗದ ತಂಡ, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ನಿವಾಸಿಗಳ ಶ್ರಮ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಧೂಮಪಾನ-ಮುಕ್ತ ಬೆಂಗಳೂರಿನ ಕೇಂದ್ರೀಕೃತ ಪ್ರಯತ್ನದ ಫಲವಾಗಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನದ ಪ್ರಮಾಣ ಶೇ. 5.2 ರಷ್ಟು ಕಡಿಮೆ ಮಾಡಿದೆ (2017 ರಲ್ಲಿ ಶೇ,18.18, 2021 ರಲ್ಲಿ ಶೇ.13.30 ರಷ್ಟು ಕಡಿಮೆಯಾಗಿತ್ತು) ಇದಷ್ಟೇ ಅಲ್ಲದೆ, ನೋ ಸ್ಮೋಕಿಂಗ್‌ ಬೋರ್ಡ್‌ ಪ್ರದರ್ಶನವು ಶೇ. 51.9 ರಷ್ಟು ಹೆಚ್ಚಳವಾಗಿದೆ.

ಸಿಲಿಕಾನ್ ಸಿಟಿ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವಲ್ಲಿ ಮತ್ತು ನಮ್ಮ ಸಮುದಾಯದ ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸುವಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಭವಿಷ್ಯದಲ್ಲಿ ಇನ್ನಷ್ಟು ಆರೋಗ್ಯ ಮತ್ತು ಕ್ಷೇಮ ಉಪಕ್ರಮಗಳಿಗೆ ಆದ್ಯತೆ ನೀಡಲಿದ್ದೇವೆ ಎಂದು ಅವರು ವಿವರಿಸಿದರು.

ಹೊಗೆ ಮುಕ್ತ ಪರಿಸರ ಉತ್ತೇಜನ ಮುಂದುವರಿಕೆ

ಹೊಗೆ ಮುಕ್ತ ಪರಿಸರ ಉತ್ತೇಜನ ಮುಂದುವರಿಕೆ

ಬಿಬಿಎಂಪಿಯ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್ ಅವರು, ಬೆಂಗಳೂರು ಈ ಪ್ರಶಸ್ತಿಯನ್ನು ಪಡೆದಿರುವುದಕ್ಕೆ ನನಗೆ ಸಂತೋಷವಾಗಿದೆ. ಧೂಮಪಾನ ಹೊಗೆ ಮುಕ್ತ ಪರಿಸರವನ್ನು ಉತ್ತೇಜಿಸುವ ಪ್ರಯತ್ನ ನಾವು ಮುಂದುವರಿಸುತ್ತೇವೆ. ಈ ಪ್ರಶಸ್ತಿಯು ಒಂದು ದೊಡ್ಡ ಗೌರವವಾಗಿದೆ. ತಂಬಾಕು ನಿಯಂತ್ರಣ ಕಾನೂನುಗಳನ್ನು ಜಾರಿಗೊಳಿಸುವಲ್ಲಿ ಬೆಂಗಳೂರು ಮತ್ತೊಮ್ಮೆ ನಾಯಕತ್ವದ ಸ್ಥಾನ ಹೊಂದಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

'ಸ್ಮೋಕ್-ಫ್ರೀ ಬೆಂಗಳೂರು' ಅಭಿಯಾನ, ಏನಿದು?

'ಸ್ಮೋಕ್-ಫ್ರೀ ಬೆಂಗಳೂರು' ಅಭಿಯಾನ, ಏನಿದು?

ಸಾಂಕ್ರಾಮಿಕವಲ್ಲದ ರೋಗಗಳು (NCD) ಹಾಗೂ ಗಾಯಗಳನ್ನು ಕಡಿಮೆ ಮಾಡಲು ಬದ್ಧವಾಗಿರುವ 70 ನಗರಗಳ ಜಾಗತಿಕ ನೆಟ್‌ವರ್ಕ್‌ನ ಈ ಪಾಲುದಾರಿಕೆಯ ಭಾಗವಾಗಿರುವ ಬೆಂಗಳೂರು 'ಸ್ಮೋಕ್-ಫ್ರೀ ಬೆಂಗಳೂರು' ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. ಇದು ಸೆಕೆಂಡ್ ಹ್ಯಾಂಡ್ ಹೊಗೆಯ ಮೇಲೆ ಕೇಂದ್ರೀಕರಿಸಿ ಧೂಮಪಾನಿಗಳು ಅಲ್ಲದವರನ್ನು ನಿಷ್ಕ್ರಿಯ ಧೂಮಪಾನದ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸಲು ಸಹಾಯ ಮಾಡಲಿದೆ. ಧೂಮಪಾನ-ಮುಕ್ತ ಬೆಂಗಳೂರು ಚಟುವಟಿಕೆಗಳು ಸೆಕೆಂಡ್‌ಹ್ಯಾಂಡ್ ಧೂಮಪಾನದ ಅಪಾಯಗಳ ಕುರಿತು ಜಾಗೃತಿ ಅಭಿಯಾನಗಳು, ಜಾಹೀರಾತು ಫಲಕಗಳು ಮತ್ತು ಆನ್‌ಲೈನ್ ಮಾಧ್ಯಮ ಪ್ರಚಾರಗಳನ್ನು ಮತ್ತು ಬೆಂಬಲವನ್ನು ಒಳಗೊಂಡಿವೆ ಎಂದು ಅವರು ತಿಳಿಸಿದರು.

ನಗರದಲ್ಲಿ ಸಾರ್ವಜನಿಕ ಸ್ಥಳದ ಧೂಮಪಾನವನ್ನು 5.2% ರಷ್ಟು ಕಡಿಮೆಗೊಳಿಸಿದ್ದೇವೆ. 2017 ರಲ್ಲಿ ಶೇಕಡಾ 18.18ರಷ್ಟಿತ್ತು ಅದು 2021 ರಲ್ಲಿ ಶೇಕಡಾ 13.30ರಷ್ಟು ಕಡಿಮೆಯಾಗಿದೆ. ಧೂಮಪಾನ ನಿಷೇಧ ಚಿಹ್ನೆಯ ಪ್ರದರ್ಶನದಲ್ಲಿ 51.9% ಹೆಚ್ಚಳವಾಗಿದೆ ಅಂದರೆ 2017 ರಲ್ಲಿ ಶೇಕಡಾ 23.1ರಷ್ಟಿತ್ತು, ಅದು 2021ರವರೆಗೆ ಶೇಕಡಾ 75 ಹೆಚ್ಚಾಗಿದೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+