ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಹೈಕೋರ್ಟ್‌ಗೆ ರಾಜಕಾಲುವೆ ಒತ್ತುವರಿ ತೆರವಿನ ಮಾಹಿತಿ ನೀಡಿದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಸೆಪ್ಟಂಬರ್ 16: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಆಗಸ್ಟ್ 30 ರಿಂದ ಸೆಪ್ಟೆಂಬರ್ 13ರವರೆಗೆ ಒಟ್ಟು 69 ರಾಜಕಾಲುವೆ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ ಎಂದು ರಾಜ್ಯ ಹೈಕೋರ್ಟ್‌ಗೆ ಬಿಬಿಎಂಪಿ ಗುರುವಾರದಂದು ಮಾಹಿತಿ ನೀಡಿದೆ.

ಬಿಬಿಎಂಪಿ ನಗರ ವ್ಯಾಪ್ತಿಯಲ್ಲಿ 2016 ಮತ್ತು 2017ನೇ ಸಾಲಿನಲ್ಲಿ ಗುರುತಿಸಲಾಗಿದ್ದ ಒಟ್ಟು 2,626 ರಾಜಕಾಲುವೆ ಒತ್ತುವರಿಗಳ ಪೈಕಿ ಈವರೆಗೆ ಒಟ್ಟು 1,999 ಅತಿಕ್ರಮಣಗಳನ್ನು ತೆರವು ಮಾಡಲಾಗಿದೆ ಎಂದು ಬಿಬಿಎಂಪಿ ತಿಳಿಸಿತು. ಅಲ್ಲದೇ ಈ ಕುರಿತ ವರದಿಯನ್ನು ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠಕ್ಕೆ ಬಿಬಿಎಂಪಿ ಸಲ್ಲಿಸಿತು.

ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ: ಸಿಎಜಿ ವರದಿ ನೀಡಲು ಹೈಕೋರ್ಟ್ ನಿರ್ದೇಶನಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ: ಸಿಎಜಿ ವರದಿ ನೀಡಲು ಹೈಕೋರ್ಟ್ ನಿರ್ದೇಶನ

ಬಿಬಿಎಂಪಿ ಪರ ವಕೀಲರಾದ ವಿ.ಶ್ರೀನಿಧಿ ಅವರು, ರಾಜಕಾಲುವೆ ಒತ್ತುವರಿಗಳನ್ನು ಗುರುತಿಸುವುದು ಇದೊಂದು ನಿರಂತರ ಪ್ರಕ್ರಿಯೆ ಆಗಿದೆ. ಪ್ರತಿದಿನವೂ ಈ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು. 2016-17ರಲ್ಲಿ 2,626 ರಾಜಕಾಲುವೆ ಒತ್ತುವರಿ ಗುರುತಿಸಲಾಗಿತ್ತು. ಅದೇ ವರ್ಷದಲ್ಲಿ ಬಿಬಿಎಂಪಿ ಅಧಿಕಾರಿಗಳು 428 ಅತಿಕ್ರಮಣ ತೆರವು ಮಾಡಿದ್ದರು. ನಂತರ 2018 ಮತ್ತು 2019ರಲ್ಲಿ 1,502 ಹಾಗೂ 2022ರಲ್ಲಿ (ಸೆಪ್ಟಂಬರ್ 13ರವರೆಗೆ) 69 ಅತಿಕ್ರಮಣ ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸೆಪ್ಟಂಬರ್ 13ರ ವರೆಗೆ 627 ಅತಿಕ್ರಮಣ ತೆರವು

ಸೆಪ್ಟಂಬರ್ 13ರ ವರೆಗೆ 627 ಅತಿಕ್ರಮಣ ತೆರವು

ಇನ್ನೂ ಇತ್ತೀಚೆಗೆ ಉಂಟಾದ ಪ್ರವಾಹ ಪರಿಸ್ಥಿತಿ ನಂತರ ಒತ್ತವುರಿ ತೆರವು ಕಾರ್ಯಾಚರಣೆ ನಡೆಸಲಾಗಿದ್ದು, ಮುಂದುವರೆಯುತ್ತಿದೆ. ದಾಸರಹಳ್ಳಿ ವಲಯದಲ್ಲಿ 124, ಬೆಂಗಳೂರು ಪೂರ್ವ 110, ಮಹದೇವಪುರ 88, ಯಲಹಂಕದಲ್ಲಿ 85, ಬೊಮ್ಮನಹಳ್ಳಿ ವ್ಯಾಪ್ತಿಯ ತೆರವು ಸೇರಿದಂತೆ 2022ರ ಸೆಪ್ಟಂಬರ್ 13ರ ವರೆಗೆ ಒಟ್ಟು 627 ರಾಜಕಾಲುವೆ ಅತಿಕ್ರಮಣ ತೆಗೆದು ಹಾಕಿ ಮಳೆ ನೀರು ಹರಿದು ಹೋಗಲು ಆಸ್ಪದ ಮಾಡಿಕೊಡಲಾಗಿದೆ ಎಂದರು.

ರಾಜಕಾಲುವೆ ಒತ್ತುವರಿ ಕಾರ್ಯಾಚರಣೆ ಪ್ರಕ್ರಿಯೆಗೆ ತಡೆ ನೀಡಲಾಗಿದೆಯೇ, ಅಥವಾ ತಡೆ ನೀಡುವ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆಯೇ? ಹೈಕೋರ್ಟ್ ವಿಭಾಗೀಯ ಪೀಠ ಬಿಬಿಎಂಪಿ ಪರ ವಕೀಲರನ್ನು ಪ್ರಶ್ನಿಸಿತು. ಒಂದು ವೇಳೆ ತಡೆ ನೀಡಿದ್ದರೆ ಬಿಬಿಎಂಪಿ ನ್ಯಾಯಾಲಯದ ಮೊರೆ ಹೋಗುತ್ತಿದೆ ಎಂದು ವಕೀಲರು ಉತ್ತರಿಸಿದರು.

ನಲಪಾಡ್ ಅಕಾಡೆಮಿ ಒತ್ತುವರಿ ತೆರವು ಸ್ಥಗಿತ, ಎಪ್ಸಿಲಾನ್ ಒತ್ತುವರಿಯತ್ತ ನೋಡದ ಅಧಿಕಾರಿಗಳುನಲಪಾಡ್ ಅಕಾಡೆಮಿ ಒತ್ತುವರಿ ತೆರವು ಸ್ಥಗಿತ, ಎಪ್ಸಿಲಾನ್ ಒತ್ತುವರಿಯತ್ತ ನೋಡದ ಅಧಿಕಾರಿಗಳು

ಸಿಎಜಿ ವರದಿ ಕೇಳಿದ ಹೈಕೋರ್ಟ್

ಸಿಎಜಿ ವರದಿ ಕೇಳಿದ ಹೈಕೋರ್ಟ್

ನಂತರ ರಾಜಕಾಲುವೆ ಒತ್ತುವರಿಗಳ ಸ್ಥಿತಿಗತಿ ಕುರಿತು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿ ಬಗ್ಗೆ ಬಿಬಿಎಂಪಿ ಉತ್ತರಿಸುವಂತೆ ನ್ಯಾಯಪೀಠ ಸೂಚಿಸಿತು. ಇದಕ್ಕೆ ವಕೀಲರು ಸ್ವಲ್ಪ ಸಮಯಾವಕಾಶ ನೀಡಬೇಕು ಎಂದು ಕೇಳಿದ್ದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

ರಸ್ತೆ ಗುಂಡಿ ಪಿಐಎಲ್ ವಿಚಾರಣೆ

ರಸ್ತೆ ಗುಂಡಿ ಪಿಐಎಲ್ ವಿಚಾರಣೆ

ಇನ್ನು ಇದೇ ವೇಳೆ ವಿಜಯನ್ ಮೆನನ್ ಹಾಗೂ ಇತರರು ಸೇರಿ 2015 ರಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ನಗರದ ರಸ್ತೆ ಗುಂಡಿಗಳ ಕುರಿತಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಯಿತು.

ಈ ಬಗ್ಗೆ ಉತ್ತರಿಸಿದ ಬಿಬಿಎಂಪಿಯು ಮೊದಲ ಹಂತದಲ್ಲಿ ಗುರುತಿಸಲಾಗಿದ್ದ 1,673 ಗುಂಡಿಗಳ ಪೈಕಿ ಕಳೆದ ಜುಲೈ 26ರಿಂದ ಸೆಪ್ಟೆಂಬರ್ 12ರವರೆಗೆ 372 ರಸ್ತೆ ಗುಂಡಿ ಮುಚ್ಚಲಾಗಿದೆ. ನಂತರ ಹಂತದಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿನ 2,231 ರಸ್ತೆಗುಂಡಿಗಳಲ್ಲಿ 2,010 ಗುಂಡಿಗಳನ್ನು ಮುಚ್ಚಲಾಗಿದೆ. ನಂತರ ಹಂತದಲ್ಲಿ ರಸ್ತೆ ಗುಂಡಿ ಗುರುತಿಸುವ ಮತ್ತು ಮುಚ್ಚುವ ಕಾರ್ಯ ನಡೆಯಬೇಕಿದೆ ಎಂದು ಕೋರ್ಟ್‌ಗೆ ತಿಳಿಸಿತು.

ಬಿಬಿಎಂಪಿ ಒತ್ತುವರಿ ತೆರವು ಪಟ್ಟಿ

ಬಿಬಿಎಂಪಿ ಒತ್ತುವರಿ ತೆರವು ಪಟ್ಟಿ

ಕಳೆದ 15ದಿನಗಳಿಂದ ಬೆಂಗಳೂರಿನಲ್ಲಿ ಹಲವೆಡೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ನಡೆಯುತ್ತಲೇ ಇದೆ. ಬಿಬಿಎಂಪಿ ಸೆಪ್ಟಂಬರ್ 1ರಿಂದ 9ರವರೆಗೆ 34ಕಡೆಗಳಲ್ಲಿ ಒತ್ತುವರಿ ತೆರವು ಮಾಡಿದೆ. ಸೆಪ್ಟಂಬರ್ 12ರಂದು 15ಕಡೆಗಳಲ್ಲಿ, ಸೆಪ್ಟಂಬರ್ 13ರಂದು 18ಒತ್ತುವರಿ, ಸೆಪ್ಟಂಬರ್ 14ರಂದು 11ಅತಿಕ್ರಮಣಗಳನ್ನು ಹಾಗೂ ಸೆಪ್ಟಂಬರ್ 15ರಂದು 29ಕಡೆಗಳಲ್ಲಿ ಒತ್ತುವರಿ ತೆರವುಗೊಳಿಸಿದ್ದೇವೆ ಎಂದು ಬಿಬಿಎಂಪಿ ವರದಿ ತಿಳಿಸಿದೆ.

English summary
BBMP informed the High Court about the eviction of Raja kaluve encroachment on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X