Property Tax: ಈ ಕಟ್ಟಡಗಳ ಆಸ್ತಿ ತೆರಿಗೆ ಪಾವತಿ ಮತ್ತಷ್ಟು ಸರಳ

ಬೆಂಗಳೂರು, ಮಾರ್ಚ್ 18: ಬೆಂಗಳೂರು ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿದವರಿಂದ ಸಂಗ್ರಹಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (BBMP) ಸಾಕಷ್ಟು ಉಪಕ್ರಮ ಜಾರಿ ಮಾಡಿದೆ. ಇದರಲ್ಲಿ ಒನ್ ಟೈಮ್ ಪೇಮೆಂಟ್ ಸಿಸ್ಟಮ್ (OTS) ಸಹ ಒಂದಾಗಿದೆ. ಇದೀಗ ಈ ಯೋಜನೆಯನ್ನು ವಿಸ್ತರಣೆ ಮಾಡುವ ಮೂಲಕ ತೆರಿಗೆ ಸಂಗ್ರಹ ಗುರಿ ತಲುಪಲು ಪಾಲಿಕೆ ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಸರ್ಕಾರದ ಕಟ್ಟಡಗಳು ಹಾಗೂ ಸರ್ಕಾರದ ಅಂಗ ಸಂಸ್ಥೆ (PSUs) ಗಳಿಗೆ 31ನೇ ಮಾರ್ಚ್ 2025 ರವರೆಗೆ ಒಂದು ಬಾರಿಯ ಪರಿಹಾರ ಯೋಜನೆ (ಓಟಿಎಸ್) ಅಡಿ ತೆರಿಗೆ ಪಾವತಿಗೆ ಅವಕಾಶ ಇದೆ. ಇದೀಗ ಈ ವ್ಯವಸ್ಥೆಯನ್ನು ನಗರದ ಎಲ್ಲಾ ಸರ್ಕಾರಿ ಕಟ್ಟಡಗಳು ಹಾಗೂ ಸರ್ಕಾರಿ ಅಂಗ ಸಂಸ್ಥೆಗಳಿಗೆ ಓಟಿಎಸ್ ಸೌಲಭ್ಯ ವಿಸ್ತರಣೆ ಮಾಡಲಾಗಿದೆ. ಸರ್ಕಾರಿ ಕಟ್ಟಡಗಳು ಈ ಸೌಲಭ್ಯದ ಅಡಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆ ಅನುಸಾರ ಬಾಕಿ ತೆರಿಗೆ ಪಾವತಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

BBMP Has Extension OTS Facility for Government Properties Pay before March 31st

2019-20ನೇ ಸಾಲಿನಿಂದ ಬಾಕಿ ಇದ್ದಲ್ಲಿ ಶೂನ್ಯ ಬಡ್ಡಿ ಹಾಗೂ 100 ರೂಪಾಯಿ ದಂಡ ಶುಲ್ಕ ಪಾವತಿಸುವುದರೊಂದಿಗೆ ಓಟಿಎಸ್ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಎಲ್ಲಾ ಸರ್ಕಾರಿ ಕಟ್ಟಡಗಳು ಹಾಗೂ ಸರ್ಕಾರಿ ಅಂಗ ಸಂಸ್ಥೆಗಳು ಇದರ ಸದುಪಯೋಗವನ್ನು ಪಡೆದುಕೊಂಡು ಮಾರ್ಚ್ 31ರೊಳಗಾಗಿ ಬಾಕಿ ಆಸ್ತಿ ತೆರಿಗೆ ಪಾವತಿಗೆ ಸೂಚನೆ ನೀಡಲಾಗಿದೆ. ಓಟಿಎಸ್ ಸೌಲಭ್ಯ ಪಡೆಯದವರು ಏಪ್ರಿಲ್ 2025 ರಿಂದ ಆಸ್ತಿ ತೆರಿಗೆಯು ದುಪ್ಪಟು ಪಾವತಿಸಬೇಕಾಗುತ್ತದೆ ಎಂದು ಮುಖ್ಯ ಆಯುಕ್ತರು ಹೇಳಿದ್ದಾರೆ.

ಈಗಾಗಲೇ ಕೆಲವು ಬಾರಿ ಬಿಬಿಎಂಪಿ ಆಸ್ತಿ ಮಾಲೀಕರಿಗೆ ನೀಡಿದ್ದ ಓಟಿಎಸ್ ವ್ಯವಸ್ಥೆಯನ್ನು ವಿಸ್ತರಣೆ ಮಾಡಿದ್ದಾರೆ. ಆ ಮೂಲಕ ಬಾಕಿ ತೆರಿಗೆಯನ್ನು ಸಂಗ್ರಹಿಸಲು ಕ್ರಮ ಕೈಗೊಂಡಿದ್ದಾರೆ. ಪರಿಣಾಮ ಓಟಿಎಸ್ ಜಾರಿಯಾದಾಗಿನಿಂದ ಕಳೆದ ವರ್ಷ ನವೆಂಬರ್ ಅಂತ್ಯದವರೆಗೆ ಬರೋಬ್ಬರಿ 3820 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದರಲ್ಲಿ ಮಹಾದೇವಪುರ ದಲ್ಲಿ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ. ಈ ವ್ಯವಸ್ಥೆ ಇದ್ದರೂ ಇನ್ನೂ ಅನೇಕ ಆಸ್ತಿ ಮಾಲೀಕರು, ಸರ್ಕಾರಿ ಕಟ್ಟಡಗಳ ತೆರಿಗೆ ಬಾಕಿ ಉಳಿದಿದೆ. ಅವರಿಗೆ ಇದೇ ಮಾರ್ಚ್ 31ರವರೆಗೆ ಅವಕಾಶ ಇದೆ.

BBMP Has Extension OTS Facility for Government Properties Pay before March 31st

ಅಪಾಯ ಸ್ಥಿತಿಯ ಮರ, ರೆಂಬೆ-ಕೊಂಬೆ ಮಾಹಿತಿ ನೀಡಲು ಸಹಾಯವಾಣಿ

ಬೆಂಗಳೂರು ನಗರದ ಸಾರ್ವಜನಿಕರು ತಮ್ಮ ಪ್ರದೇಶಗಳಲ್ಲಿ ಒಣಗಿರುವ/ಅಪಾಯ ಸ್ಥಿತಿಯ ಮರಗಳು ಹಾಗೂ ಒಣಗಿರುವ ಅಪಾಯ ಸ್ಥಿತಿಯ ರೆಂಬೆ-ಕೊಂಬೆಗಳು ಕಂಡು ಬಂದಲ್ಲಿ ಬಿಬಿಎಂಪಿ ಸಂಪರ್ಕಿಸಬೇಕು. ಅದಕ್ಕೆ ನೆರವಾಗುವಂತೆ ಪಾಲಿಕೆ ಸಹಾಯವಾಣಿ 1533 ಅಥವಾ ಬಿಬಿಎಂಪಿ ಅರಣ್ಯ ಇಲಾಖೆಯ ಅಧಿಕಾರಿಗಳಿಗಳಿಗೆ ದೂರವಾಣಿ (ವಾಟ್ಸ್ ಅಪ್ ಮೂಲಕ/ ಫೋಟೋ) ಮಾಹಿತಿ ಹಂಚಿಕೊಳ್ಳಬಹುದಾಗಿದೆ. ಅದಕ್ಕಾಗಿ ನೀವು ಈ ಎಂಟು ವಲಯಗಳ ಸಂಖ್ಯೆ ಬರೆದುಟ್ಟುಕೊಳ್ಳಿ.

Take a Poll

ವಲಯಯವಾರು ಅಧಿಕಾರಿಗಳ ಸಂಪರ್ಕ, ಸಂಖ್ಯೆ

* ಬೊಮ್ಮನಹಳ್ಳಿ : ನರೇಂದ್ರ ಬಾಬು, ಪ್ರಭಾರ ವಲಯ ಅರಣ್ಯಾಧಿಕಾರಿ - 9480685399

* ಯಲಹಂಕ : ಮಹೇಶ್ ಜೆ.ಆರ್, ಪ್ರಭಾರ ವಲಯ ಅರಣ್ಯಾಧಿಕಾರಿ - 9480685539

* ಪೂರ್ವ ವಲಯ: ತಿಮ್ಮಪ್ಪ, ವಲಯ ಅರಣ್ಯಾಧಿಕಾರಿ - 9380090027

* ಪಶ್ಚಿಮ ವಲಯ: ಸುದರ್ಶನ್, ಪ್ರಭಾರ ವಲಯ ಅರಣ್ಯಾಧಿಕಾರಿ - 9480684431

* ದಕ್ಷಿಣ ವಲಯ: ಚಂದ್ರಪ್ಪ‌ ವಿ, ಪ್ರಭಾರ ವಲಯ ಅರಣ್ಯಾಧಿಕಾರಿ - 9164042566

* ದಾಸರಹಳ್ಳಿ : ರಾಜಪ್ಪ ಕೆ.ಎನ್, ಪ್ರಭಾರ ವಲಯ ಅರಣ್ಯಾಧಿಕಾರಿ - 9448234928

* ಆರ್.ಆರ್ ನಗರ : ರವೀಂದ್ರನಾಥ್, ಪ್ರಭಾರ ವಲಯ ಅರಣ್ಯಾಧಿಕಾರಿ - 6361903330

* ಮಹದೇವಪುರ : ಚಿದಾನಂದ್, ಪ್ರಭಾರ ವಲಯ ಅರಣ್ಯಾಧಿಕಾರಿ - 9480685541

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+