ಹೊಸ 15 ಸ್ಕೈವಾಕ್‌ಗೆ ಬಿಬಿಎಂಪಿ ಟೆಂಡರ್, ಎಲ್ಲೆಲ್ಲಿ ನಿರ್ಮಾಣ?
ಬೆಂಗಳೂರು, ಜುಲೈ 18: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 44 ಕೋಟಿ ವೆಚ್ಚದಲ್ಲಿ ಬೆಂಗಳೂರಲ್ಲಿ 15 ಸ್ಕೈವಾಕ್ ನಿರ್ಮಿಸುತ್ತಿದೆ.
ಔಟರ್ ರಿಂಗ್ ರೋಡ್ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಸ್ಕೈವಾಕ್ ನಿರ್ಮಿಸಲಾಗುತ್ತಿದೆ. ನಗರದಲ್ಲಿ ನಿರ್ಮಿತವಾಗಿರುವ ಜುಲೈ ಅಂತ್ಯದೊಳಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ.
ಮತ್ತೊಂದು ಸ್ಕೈ ವಾಕ್ ನಿರ್ಮಾಣಕ್ಕೆ ಸಿದ್ಧತೆ ಆರಂಭಿಸಿದ ಬಿಬಿಎಂಪಿ
ಹೊಸ 15 ಸ್ಕೈವಾಕ್‌ಗಳನ್ನು ಎರಡು ಹಂತಗಳಲ್ಲಿ ನಿರ್ಮಿಸಲಿದೆ. ಮೆಟ್ರೋ ನಿಲ್ದಾಣದಿಂದ ಕುಷ್ಠರೋಗಿಗಳ ಆಸ್ಪತ್ರೆ ಸಂಪರ್ಕಿಸುವಂತೆ ಮಾಗಡಿ ರಸ್ತೆಯಲ್ಲಿ ಸ್ಕೈವಾಕ್ ನಿರ್ಮಿಸಲಾಗುತ್ತಿದೆ.
ಬಿಬಿಎಂಪಿಯು ನಗರದಲ್ಲಿ 120 ಸ್ಕೈವಾಕ್ ನಿರ್ಮಿಸುವುದಾಗಿ ತಿಳಿಸಿತ್ತು. ಅದರಲ್ಲಿ 33 ಸ್ಕೈವಾಕ್ ಕಾರ್ಯ ಪೂರ್ಣಗೊಂಡಿದೆ. ಆರು ಸ್ಕೈವಾಕ್‌ಗಳು ಜುಲೈ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
ಈಗ ಟೆಂಡರ್ ಕರೆಯಲಾಗಿರುವ 15 ಸ್ಕೈವಾಕ್‌ಗಳು ಕೂಡ 120 ಸ್ಕೈವಾಕ್ ನಿರ್ಮಾಣ ಯೋಜನೆಯ ಭಾಗವೇ ಆಗಿದೆ. ಈ ಸ್ಕೈವಾಕ್‌ಗಳು ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಿತವಾಗುತ್ತಿದೆ.
ಬೆಂಗಳೂರು ಅಭಿವೃದ್ಧಿಗೆ 2491 ಕೋಟಿ ವೆಚ್ಚ ಮಾಡಲಿರುವ ಬಿಬಿಎಂಪಿ
ಇನ್ನೂ20 ಸ್ಕೈವಾಕ್‌ಗಳನ್ನು ನಿರ್ಮಿಸಲು ಟೆಂಡರ್ ಕರೆಯಲಾಗುತ್ತಿದ್ದು ಅದನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿತ್ತದೆ.
ಮೊದಲ ಹಂತದಲ್ಲಿ ಎಲ್ಲೆಲ್ಲಿ?
-ಭದ್ರಪ್ಪ ಲೇಔಟ್, ಬಿಗ್ ಬಜಾರ್ ಬಳಿ
-ದೇವಿನಗರ ಬಸ್‌ನಿಲ್ದಾಣ , ಲೊಟ್ಟೆಗೊಲ್ಲಹಳ್ಳಿ
-ಲಗ್ಗೆರೆ ಬ್ರಿಡ್ಜ್ ಬಸ್ ನಿಲ್ದಾಣ ಬಳಿ
-ಸುಮನಹಳ್ಳಿ ಜಂಕ್ಷನ್ ಬಳಿ
- ರಾಕ್‌ಲೈನ್ ಮಾಲ್ ಎದುರು, ಜಾಲಹಳ್ಳಿ ಕ್ರಾಸ್
-ಹೌಸಿಂಗ್ ಬೋರ್ಡ್ ಬಸ್ ನಿಲ್ದಾಣ, ಮಾಗಡಿ ರಸ್ತೆ
- ಹರಿಶ್ಚಂದ್ರ ಘಾಟ್ ಬಳಿ, ಮಹಾಕವಿ ಕುವೆಂಪು ರಸ್ತೆ
ಎರಡನೇ ಹಂತದಲ್ಲಿ ಎಲ್ಲೆಲ್ಲಿ?
-ಯಡಿಯೂರು ಮಾರ್ಕೆಟ್-ಕನಕಪುರ ರಸ್ತೆ
-ಎಸ್‌ಎಲ್‌ವಿ ವೈನ್ಸ್‌ನಿಂದ ಸರ್ಕಾರಿ ಪಿಯು ಕಾಲೇಜು ಮಾರ್ಗ, ಎನ್‌ಆರ್ ಕಾಲೊನಿ
-ಸರ್ಕಾರಿ ಆಸ್ಪತ್ರೆಯಿಂದ ಮಾಂಟೆಸರಿ ಮಾರ್ಗ- ಸುಬ್ಬರಾಮಶೆಟ್ಟಿ ರಸ್ತೆ
-ಲಿಟ್ಟಲ್ ಫ್ಲವರ್ ಶಾಲೆಯಿಂದ ಪೋಸ್ಟ್ ಆಫೀಸ್ , ಬನಶಂಕರಿ
-ಪಂತರಪಾಳ್ಯ ಬಸ್ ನಿಲ್ದಾಣ, ಮೈಸೂರು ರಸ್ತೆ
-ಕೆಂಗೇರಿ ಟಿಟಿಎಂಸಿ ಬಸ್ ನಿಲ್ದಾಣ
-ಅಂಗಳಪರಮೇಶ್ವರಿ ದೇವಸ್ಥಾನ ಬಿನ್ನಿ ಮಿಲ್ ರಸ್ತೆ