• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೀವು ಕಸ ಹಾಕುವ ಜಾಗಗಳೆಲ್ಲಾ ಡಸ್ಟ್‌ಬಿನ್ ಗಳಲ್ಲ ಬೀಳುತ್ತೆ ಕೇಸ್

|

ಬೆಂಗಳೂರು, ನವೆಂಬರ್ 2: ನೀವು ಕಸ ಹಾಕಿದ್ದೀರಾ ಅಂದರೆ ಎಲ್ಲರೂ ಅದನ್ನು ಡಸ್ಟ್‌ ಬಿನ್ ಎಂದುಕೊಳ್ಳಬೇಕೆ, ಮರುದಿನ ನೂರಾರು ಮಂದಿ ಅಲ್ಲಿಯೇ ಬಂದು ಕಸ ಹಾಕುತ್ತಾರೆ, ಒಬ್ಬರ ತಪ್ಪಿನಿಂದ ಆ ಪ್ರದೇಶ ಸಂಪೂರ್ಣವಾಗಿ ತ್ಯಾಜ್ಯಯುಕ್ತವಾಗುತ್ತಿದೆ.

ಆದರೆ ಇನ್ನುಮುಂದೆ ಹೀಗಾಗುವುದಿಲ್ಲ, ಕಚೇರಿಗೆ ಹೋಗುತ್ತಾ ದಾರಿಯಲ್ಲಿ ತ್ಯಾಜ್ಯದ ಕವರ್ ಎಸೆಯುವುದು, ಬೈಕ್‌ನಲ್ಲಿ ಹೋಗುತ್ತಾ ಯಾವುದೋ ಒಂದು ಜಾಗದಲ್ಲಿ ಕಸ ಬಿಸಾಡುವುದು ಈ ರೀತಿ ಮಾಡಿದರೆ ದಂಡ ಹಾಕುವುದರ ಜತೆಗೆ ಜೈಲಿಗೂ ಹೋಗುವ ಸಾಧ್ಯತೆಗಳಿರುತ್ತದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.

ಕಸ ನಿರ್ವಹಣೆ ಇನ್ನು ಜಂಟಿ ಆಯುಕ್ತರ ಹೆಗಲಿಗೆ: ಬಿಬಿಎಂಪಿ ನಿರ್ಧಾರ

ರಾತ್ರಿ ವೇಳೆ ಕಸ ಬಿಸಾಡುವವರ ಬಗ್ಗೆ ಬಿಬಿಎಂಪಿಯು ತೀವ್ರ ನಿಗಾ ಇಡಲಿದೆ. ದಂಡದ ಶಿಕ್ಷೆಗೆ ನಿವೃತ್ತ ಸೈನಿಕರನ್ನು ನೇಮಿಸಿಕೊಂಡಿದೆ. ಪಾಲಿಕೆಯ ಪ್ರತಿ ವಲಯಕ್ಕೆ 3-4 ಮಂದಿಯಂತೆ ಒಟ್ಟು 8 ವಲಯಗಳಿಗೆ 32 ಮಾರ್ಷಲ್‌ಗಳನ್ನು ನಿಯೋಜಿಸಿದೆ. ಬಿಬಿಎಂಪಿಯ ಕಣ್ಣಿನಿಂದ ತಪ್ಪಿಸಿಕೊಂಡರೂ ಯೋಧರ ಕಣ್ಣಿಂದ ತಪ್ಪಿಸಿಕೊಳ್ಳಲಾದೀತೆ.

ರಾತ್ರಿ 10ರಿಂದ ಮುಂಜಾನೆವರೆಗೂ ಗಸ್ತು

ರಾತ್ರಿ 10ರಿಂದ ಮುಂಜಾನೆವರೆಗೂ ಗಸ್ತು

ಮಾರ್ಷಲ್ ಗಳು ರಾತ್ರಿ 10 ಗಂಟೆಯಿಂದ ಬೆಳಗ್ಗೆಯವರೆಗೂ ಗಸ್ತು ತಿರುಗುತ್ತಿರುತ್ತಾರೆ, ಕಳೆದ ಕೆಲ ದಿನಗಳಿಂದ 100ಕ್ಕೂ ಅಧಿಕ ವಾಹನಗಳನ್ನು ವಶಕ್ಕೆ ಪಡೆದುಕೊಂಡು ದಂಡ ವಿಧಿಸಿದ್ದಾರೆ. ಈವರೆಗೆ ಸುಮಾರು 60ದ್ವಿಚಕ್ರ ವಾಹನಗಳು, 40ಕ್ಕೂ ಅಧಿಕ ಟ್ರ್ಯಾಕ್ಟರ್, ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದುಕೊಂಡು ದಂಡ ವಿಧಿಸಲಾಗಿದೆ.

ಕಸ ಎಸೆಯುವ ಕಾರು, ಬೈಕ್ ಜಪ್ತಿ

ಕಸ ಎಸೆಯುವ ಕಾರು, ಬೈಕ್ ಜಪ್ತಿ

ಕಸ ತುಂಬಿದ ಕವರ್‌ಗಳನ್ನು ಕಾರು, ಬೈಕ್ ಗಳಲ್ಲಿ ಬರುವ ಸಾರ್ವಜನಿಕರು ಕಾಲುವೆ, ಖಾಲಿ ನಿವೇಶನ ಮತ್ತು ಚರಂಡಿಯಲ್ಲಿ ಬಿಸಾಡುತ್ತಾರೆ. ಮಾಂಸದ ಅಂಗಡಿಗಳು, ವಾಣಿಜ್ಯ ಮಳಿಗೆಗಳು ಸಹ ವ್ಯಾಪಾರ-ವಹಿವಾಟು ಮುಗಿದ ಬಳಿಕ ತ್ಯಾಜ್ಯ ತುಂಬಿದ ಮೂಟೆಗಳನ್ನು ಎಸೆದು ಹೋಗುತ್ತಾರೆ ಇಂತಹ ವಾಹನಗಳನ್ನು ಜಪ್ತಿ ಮಾಡಲಾಗುತ್ತಿದೆ.

ಹಸಿ ಕಸ ನಿರ್ವಹಣೆ ಉತ್ತೇಜನಕ್ಕೆ ತೆರಿಗೆ ವಿನಾಯ್ತಿಗಾಗಿ ಅಭಿಯಾನ

ವಾರ್ಡ್ ವಾರು ಮಾರ್ಷಲ್ ನೇಮಕ

ವಾರ್ಡ್ ವಾರು ಮಾರ್ಷಲ್ ನೇಮಕ

ತ್ಯಾಜ್ಯ ಸಂಸ್ಕರಣಾ ಘಟಕಗಳ ಕಾವಲಿಗಾಗಿ ನೇಮಿಸಿಕೊಂಡಿದ್ದ ಮಾರ್ಷಲ್ ಗಳನ್ನೇ ರಾತ್ರಿ ಗಸ್ತಿಗೆ ಬಳಸಿಕೊಳ್ಳಲಾಗುತ್ತಿದೆ.ಇವರು ರಾಜಕಾಲುವೆ, ರಸ್ತೆ ಬದಿ, ಖಾಲಿ ನಿವೇಶನಗಳಲ್ಲಿ ಕಸ ಸುರಿಯುವ ವಾಹನಗಳನ್ನು ಜಪ್ತಿ ಮಾಡಿ, ದಂಡ ವಿಧಿಸುತ್ತಿದ್ದಾರೆ.

ಕಸದ ಜಾಗದಲ್ಲಿ ರಂಗೋಲಿ

ಕಸದ ಜಾಗದಲ್ಲಿ ರಂಗೋಲಿ

ಕಸವನ್ನು ರಾಶಿ ಮಾಡಿರುವ ಜಾಗಗಳನ್ನು ಸ್ವಚ್ಛಗೊಳಿಸಿ ಬಳಿಕ ಅಲ್ಲಿ ಪೌರಕಾರ್ಮಿಕರು ರಂಗೋಲಿ ಬಿಡಿಸುತ್ತಿದ್ದಾರೆ, ಕಾಂಪೌಂಡ್‌ಗಳನ್ನು ಸ್ವಚ್ಛಮಾಡಿ ಬಣ್ಣ ಬಳಿಯಲಾಗುತ್ತಿದೆ. ಅಗತ್ಯವಿರುವ ಬಣ್ಣದ ಡಬ್ಬಿಗಳು, ಬ್ರಶ್, ಬಕೆಟ್ ಮತ್ತು ಇನ್ನಿತರೆ ಸಲಕರೆಣೆಗಳನ್ನು ಆರೋಗ್ಯ ಪರಿವೀಕ್ಷಕರಿಗೆ ಒದಗಿಸಲಾಗಿದೆ.

ಎಲ್ಲೆಂದರಲ್ಲಿ ಕಸ ಹಾಕೋರಿಗೆ ಪಾಠ ಕಲಿಸಲು ಈತ ಮಾಡಿದ ಉಪಾಯಕ್ಕೆ ಸಿಕ್ಕಿತು ಫಲ

English summary
BBMP made an exstensive campaign through its special Marshals to find out waste pelters. Those who throw waste by car and bikes were booked under law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X