ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಪಾ ವೈರಸ್ ಆತಂಕ:ರಸ್ತೆಬದಿ ವ್ಯಾಪಾರಿಗಳ ಮೇಲೆ ಬಿಬಿಎಂಪಿ ಕಣ್ಣು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 09: ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದರ ಜತೆಗೆ ನಿಪಾ ವೈರಸ್ ಇನ್ನಿತರೆ ಸೋಂಕುಗಳ ಭಯದಿಂದಾಗಿ ರಸ್ತೆಬದಿಯ ತಿನಿಸುಗಳ ಬಳಿ ಇರುವ ಜನಸಂದಣಿಯನ್ನು ಗಮನಿಸಲಾಗುತ್ತಿದೆ.

ಬೀದಿ ಬದಿ ವ್ಯಾಪಾರಿಗಳ ಮೇಲೆ ನಿಗಾ ಇಡಲು ನಿರ್ದೇಶನ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.

100% ಜನರಿಗೆ ಕೊರೊನಾ ಲಸಿಕೆ ಮೊದಲ ಡೋಸ್ ನೀಡಲು ಬಿಬಿಎಂಪಿ ಯೋಜನೆ100% ಜನರಿಗೆ ಕೊರೊನಾ ಲಸಿಕೆ ಮೊದಲ ಡೋಸ್ ನೀಡಲು ಬಿಬಿಎಂಪಿ ಯೋಜನೆ

ಆದರೆ, ಹೋಟೆಲ್, ರೆಸ್ಟೋರೆಂಟ್‌ಗಳ ಜತೆ ಮೃದುವಾಗಿ ವರ್ತಿಸುತ್ತಿರುವಾಗ ರಸ್ತೆಬದಿ ವ್ಯಾಪಾರಿಗಳ ಮೇಲೆ ಕಣ್ಣೇಕೆ, ಇದು ನಮ್ಮ ಆದಾಯದ ಮೂಲವಾಗಿದೆ , ಇದನ್ನು ಮುಚ್ಚಿದರೆ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಮಾರಾಟಗಾರರ ಅಳಲಾಗಿದೆ.

BBMP Eye On Road Side Eateries

ತರಕಾರಿ ಹಾಗೂ ಹಣ್ಣುಗಳ ಮಾರಾಟಗಾರರು, ಚಾಟ್ ಸ್ಟಾಲ್‌ಗಳು ಹಾಗೂ ಮಾಂಸಾಹಾರಿ ಪದಾರ್ಥಗಳ ಮಾರಾಟಗಾರರ ಬಗ್ಗೆ ಸರ್ಕಾರಕ್ಕೆ ಆತಂಕವಿದೆ.

ಸರ್ಕಾರವು ಈ ಮಳಿಗೆಗಳನ್ನು ಮುಚ್ಚುವಂತೆ ಯಾವುದೇ ಆದೇಶ ಮಾಡಿಲ್ಲ. ಆದರೆ ಕೊರೊನಾ ನಿಯಮಗಳನ್ನು ಪಾಲಿಸುತ್ತಿದ್ದಾರೋ ಇಲ್ಲವೋ ಎಂಬುದರ ಮೇಲೆ ನಿಗಾ ಇಡುವಂತೆ ತಿಳಿಸಲಾಗಿದೆ.

ಕೊರೊನಾ ಸೋಂಕು ಹರಡುವಿಕೆ ನಿಯಂತ್ರಣ ದೃಷ್ಟಿಯಿಂದ ಬಿಬಿಎಂಪಿ ಕೊರೊನಾ ಲಸಿಕೆ ನೀಡುವ ಸಂಬಂಧ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಲಸಿಕಾ ಕಾರ್ಯವನ್ನು ಚುರುಕುಗೊಳಿಸಿದೆ. ಲಸಿಕಾ ಕಾರ್ಯಾಚರಣೆ ಕುರಿತು ವಿಶ್ಲೇಷಣೆ ನಡೆಸಲು ಈಚೆಗೆ ಸಮೀಕ್ಷೆಯೊಂದನ್ನು ಹಮ್ಮಿಕೊಂಡಿದ್ದು, ಅದರ ಫಲಿತಾಂಶವನ್ನು ಪ್ರಕಟಿಸಿದೆ.

ಬೆಂಗಳೂರು ನಗರದಲ್ಲಿ ಸಮೀಕ್ಷೆ ಕೈಗೊಂಡಿದ್ದ ಬಿಬಿಎಂಪಿ, ಸುಮಾರು ಏಳು ಲಕ್ಷ ಮಂದಿಯಲ್ಲಿ 21% ಮಂದಿ ಎರಡೂ ಡೋಸ್‌ಗಳ ಕೊರೊನಾ ಲಸಿಕೆಯನ್ನು ಪಡೆದುಕೊಂಡಿರುವುದಾಗಿ ತಿಳಿಸಿದೆ.

ಬೆಂಗಳೂರಿನಲ್ಲಿ ಶೇ.50.86ರಷ್ಟು ಮಂದಿಯನ್ನು ಕಾಡುತ್ತಿದೆ ಮಧುಮೇಹಬೆಂಗಳೂರಿನಲ್ಲಿ ಶೇ.50.86ರಷ್ಟು ಮಂದಿಯನ್ನು ಕಾಡುತ್ತಿದೆ ಮಧುಮೇಹ ಸೆಪ್ಟೆಂಬರ್ 5ರವರೆಗೆ, ಸಮೀಕ್ಷೆಗೆ ಒಳಪಟ್ಟ ಏಳು ಲಕ್ಷ ಮಂದಿಯಲ್ಲಿ 21% ಮಂದಿ ಎರಡೂ ಡೋಸ್‌ಗಳ ಲಸಿಕೆ ಪಡೆದಿದ್ದಾರೆ. 62% ಮಂದಿ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದೆ.

ಬಿಬಿಎಂಪಿಯ ಮನೆ ಬಾಗಿಲಿಗೆ ವೈದ್ಯರು ಕಾರ್ಯಕ್ರಮದಡಿಯಲ್ಲಿ, ಕಳೆದ ಮೂರು ವಾರಗಳಲ್ಲಿ 2,48,280 ಮನೆಗಳಿಗೆ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿದ್ದು, 7,11,48 ಮಂದಿಯಿಂದ ಮಾಹಿತಿ ಕಲೆ ಹಾಕಿದ್ದಾರೆ. ಬೆಂಗಳೂರಿನಲ್ಲಿ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯಿದ್ದು, ಅವರಿಗೆ ಲಸಿಕೆ ನೀಡುವ ಸಂಬಂಧ ಈ ಸಮೀಕ್ಷೆ ಹಲವು ವಿಷಯಗಳನ್ನು ಹೊರಹಾಕಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 100% ಜನರಿಗೆ ಕೊರೊನಾ ಲಸಿಕೆಯ ಮೊದಲ ಡೋಸ್ ನೀಡುವ ಯೋಜನೆಯನ್ನು ಬಿಬಿಎಂಪಿ ಹಮ್ಮಿಕೊಂಡಿದೆ.

ಮುಂದಿನ 45 ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಲಸಿಕೆ ಅಭಿಯಾನವನ್ನು ವೇಗಗೊಳಿಸಲು ಹಾಗೂ 100% ಮೊದಲ ಡೋಸ್ ಲಸಿಕೆ ಗುರಿಯನ್ನು ಸಾಧಿಸಲು ಕ್ರಿಯಾಯೋಜನೆ ಹೊರತಂದಿದೆ. ತನ್ನ ವ್ಯಾಪ್ತಿಯ ಶೇ 100ರಷ್ಟು ಮಂದಿಗೆ ಕೊರೊನಾ ಮೊದಲ ಡೋಸ್ ಲಸಿಕೆ ನೀಡಲು ಬಿಬಿಎಂಪಿ ಗುರಿ ಹೊಂದಿರುವುದಾಗಿ ತಿಳಿಸಿದೆ.

ಬೆಂಗಳೂರಲ್ಲಿ ಲಸಿಕೆ ಪಡೆಯುವವರಿಗೆ ಸಿಹಿಸುದ್ದಿಬೆಂಗಳೂರಲ್ಲಿ ಲಸಿಕೆ ಪಡೆಯುವವರಿಗೆ ಸಿಹಿಸುದ್ದಿ ಈ ಗುರಿ ಸಾಧಿಸಲು ಲಸಿಕೆ ನೀಡುವ ಸಮಯವನ್ನು ವಿಸ್ತರಿಸಿದ್ದು, ಸಂಜೆ 4ರಿಂದ ರಾತ್ರಿ 9 ಗಂಟೆವರೆಗೂ ಸಮಯ ವಿಸ್ತರಣೆ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಎರಡು ಲಸಿಕಾ ಕೇಂದ್ರಗಳು ದಿನವೂ ಬೆಳಿಗ್ಗೆ 8ರಿಂದ ರಾತ್ರಿ 9ರವರೆಗೆ ಕಾರ್ಯನಿರ್ವಹಿಸಲಿರುವುದಾಗಿ ತಿಳಿಸಿದೆ.

ಈಗ ಪ್ರತಿದಿನ ಒಂದು ಲಕ್ಷ ಲಸಿಕೆ ಪೂರೈಕೆ ಲಭ್ಯವಿದೆ. ಮುಂದಿನ 45 ದಿನಗಳಲ್ಲಿ ಉದ್ದೇಶಿತ ಜನಸಂಖ್ಯೆಗೆ ಮೊದಲ ಡೋಸ್ ಲಸಿಕೆ ನೀಡಲು ಗುರಿ ಹೊಂದಲಾಗಿದೆ. ಈಗ ನಮಗೆ ಸಾಕಷ್ಟು ಲಸಿಕೆಗಳ ಲಭ್ಯವಿದೆ.

ಈ ಮುನ್ನ ದಿನನಿತ್ಯ ಲಸಿಕೆಗಳ ಪೂರೈಕೆ 35-50 ಸಾವಿರ ಇದ್ದದ್ದು ಈಗ ಒಂದು ಲಕ್ಷಕ್ಕೆ ಏರಿಕೆಯಾಗಿದೆ. ಹೀಗಾಗಿ ದಿನಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡುವ ಗುರಿ ಹೊಂದಿದ್ದೇವೆ' ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಮಾಹಿತಿ ನೀಡಿದ್ದಾರೆ.

English summary
As the number of Covid- 19 cases is on the rise, along with fear of the Nipah virus and other airborne viral infections, health officials are keeping a close watch on hygiene and crowding at roadside eateries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X