BBMP election: ಸದ್ದಿಲ್ಲದೆ ಬಿಬಿಎಂಪಿ ಚುನಾವಣೆಗೆ ಸಿದ್ಧವಾಗುತ್ತಿದೆ ಸರ್ಕಾರ!
ಬೆಂಗಳೂರು, ಮೇ. 27: ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನಕ್ಕೆ ದೇಶ ಸಿದ್ಧವಾಗುತ್ತಿದೆ. ಏಳು ಹಂತಗಳಲ್ಲಿ ನಡೆದ ಚುನಾವಣೆಯ ಏಳನೇ ಹಂತ ಜೂನ್ ಒಂದರಂದು ನಡೆಯಲಿದೆ. ಜೂನ್ 4ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಇದರ ಬೆನ್ನಲ್ಲೆ ರಾಜ್ಯದಲ್ಲಿ ಬಿಬಿಎಂಪಿ ಚುನಾಚಣೆಗೆ ಸದ್ದಿಲ್ಲದೆ ಸಿದ್ಧತೆ ನಡೆಯುತ್ತಿದೆ.
ಲೋಕಸಭೆ ಚುನಾವಣೆ ಫಲಿತಾಂಶ ಬಂದ ತಕ್ಷಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ. ಕಾರ್ಪೊರೇಟರ್‌ಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಯಾಗಿರುವವರು ಆಯಾ ವಾರ್ಡ್‌ಗಳಲ್ಲಿ ತಮ್ಮ ಬೆಂಬಲಿಗರನ್ನು ತಳ ಮಟ್ಟದಲ್ಲಿ ಕೆಲಸ ಮಾಡುವಂತೆ, ಚುನಾವಣೆಗೆ ಸಿದ್ಧತೆ ನಡೆಸುವಂತೆ ತಿಳಿಸಿದ್ದಾರೆ.

ಚುನಾವಣೆ ನಡೆಸಲು ಸಿದ್ಧ ಎಂದಿದ್ದ ಸಿದ್ದರಾಮಯ್ಯ
ಲೋಕಸಭೆ ಚುನಾವಣೆ ಫಲಿತಾಂಶದ ನಂತರ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪರಿಷತ್ತಿಗೆ ಚುನಾವಣೆ ನಡೆಸಲು ತಮ್ಮ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಇತ್ತೀಚೆಗೆ ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಮೆಟ್ಟಿಲೇರಲು ಚುನಾವಣಾ ಆಯೋಗದ ವರದಿಯ ಯೋಜನೆ ಮತ್ತು ಜನವರಿ ವರೆಗೆ ಇರುವ ಡಿಲಿಮಿನೇಷನ್ ಗಡುವು ಕುರಿತು ಮಾತನಾಡಿದ್ದ ಅವರು, ಅಡ್ವೊಕೇಟ್ ಜನರಲ್ ಜೊತೆಗೆ ಮತ್ತು ಸರ್ಕಾರವು ಅವರ ಅಭಿಪ್ರಾಯದ ಪ್ರಕಾರ ಕಾರ್ಯನಿರ್ವಹಿಸುತ್ತದೆ. ಡಿಲಿಮಿಟೇಶನ್ ಪ್ರಕ್ರಿಯೆ ಬಳಿಕ ಮೀಸಲಾತಿ ನೀಡಬೇಕಿತ್ತು ಎಂದಿದ್ದಾರೆ.
ಇನ್ನು, ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಮಾತನಾಡಿ, ಬಿಬಿಎಂಪಿ ಚುನಾವಣೆ ವಿಳಂಬ ಮಾಡುತ್ತಿರುವ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ನಾವು ಈಗಾಗಲೇ ನ್ಯಾಯಾಲಯದ ಮೊರೆ ಹೋಗಿದ್ದೆವು. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು ಉತ್ತಮ ನಾಗರಿಕ ಆಡಳಿತಕ್ಕೆ ಆದ್ಯತೆ ನೀಡಲಾಗುವುದು ಎಂದಿದ್ದಾರೆ.

ಕಾಂಗ್ರೆಸ್ ಮುಖಂಡ ಅಭಿಲಾಷ್ ರೆಡ್ಡಿ, ಅವರ ಪತ್ನಿ ಶಿಪ್ಲಾ ಅಭಿಲಾಷ್ ರೆಡ್ಡಿ ಹೊಸ ತಿಪ್ಪಸಂದ್ರ ವಾರ್ಡ್ ಅನ್ನು ಪ್ರತಿನಿಧಿಸುತ್ತಿದ್ದು, ಎಲ್ಲರು ಮತದಾರರ ಬಳಿಗೆ ತಲುಪಿ ಅವರ ಸಮಸ್ಯೆಗಳು ಮತ್ತು ಅವರ ಆದ್ಯತೆಗಳನ್ನು ಪಟ್ಟಿ ಮಾಡಲು ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
'ಬಿಜೆಪಿ ಅಧಿಕಾರಾವಧಿಯಲ್ಲಿ ಅವೈಜ್ಞಾನಿಕವಾಗಿ ವಾರ್ಡ್‌ಗಳ ವಿಂಗಡಣೆ ನಡೆದಿದ್ದು, ಗ್ರಾಮವನ್ನು ವಿಭಜಿಸಲಾಗಿತ್ತು. ಆದರೆ ಕಾಂಗ್ರೆಸ್ ಹಳೆಯ ವಾರ್ಡ್‌ಗಳ ವಿಂಗಡಣೆಯನ್ನು ತಳ್ಳಿಹಾಕಿತು. ಹಿಂದಿನ ಗಡಿಗಳನ್ನು ಮತ್ತೆ ಸ್ಥಾಪಿಸಿದೆ. ಈ ನಿರ್ಧಾರದಿಂದ ನಮಗೆ ಸಂತೋಷವಾಗಿದೆ. ನಾವು ಈಗಲೇ ಬಿಬಿಎಂಪಿ ಚುನಾವಣೆ ಎದುರಿಸಲು ಸಿದ್ಧ' ಎಂದು ಅಭಿಲಾಷ್ ರೆಡ್ಡಿ ಹೇಳಿದ್ದಾರೆ.
ನಗರ ಹೊರವಲಯದ ವಸಂತಪುರ ವಾರ್ಡ್ ಪ್ರತಿನಿಧಿಸಿದ್ದ ಶೋಭಾಗೌಡ ಮಾತನಾಡಿ, 2020ರ ಸೆಪ್ಟೆಂಬರ್‌ನಿಂದ ಬಿಬಿಎಂಪಿಯಲ್ಲಿ ಕಾರ್ಪೊರೇಟರ್‌ಗಳೇ ಇಲ್ಲ. ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರ ನೆರವಿನೊಂದಿಗೆ ಮೂಲಭೂತ ನಾಗರಿಕ ಅಗತ್ಯಗಳನ್ನು ಪರಿಹರಿಸಲಾಗುತ್ತಿದೆ. ಎಂಜಿನಿಯರ್‌ಗಳು ಯಾವಾಗಲೂ ಸಿಗದ ಕಾರಣ ಜನರು ಇನ್ನೂ ನಾಯಕರ ಬಳಿಗೆ ಬರುತ್ತಾರೆ ಎಂದಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.
ಆದರೆ, ಬಸವನಗುಡಿ ವಾರ್ಡ್‌ನ ಮಾಜಿ ಮೇಯರ್, ಬಿಜೆಪಿ ಮುಖಂಡ ಕಟ್ಟೆ ಸತ್ಯನಾರಾಯಣ ಮತ್ತು ಬಿಬಿಎಂಪಿ ಮಾಜಿ ನಗರ ಯೋಜನಾ ಅಧ್ಯಕ್ಷ ಎ.ಎಚ್.ಬಸವರಾಜು, ''ಸರಕಾರವು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದಾಗಿ ಹೇಳುತ್ತದೆ, ಆದರೆ ಜೂನ್ 4 ರಂದು ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಅದು ಇನ್ನು ಮುಂದಕ್ಕೆ ಹೋಗುತ್ತದೆ" ಎಂದಿದ್ದಾರೆ.












Click it and Unblock the Notifications