• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋಡಿಶ್ರೀಗಳ ಬಿಬಿಎಂಪಿ ಭವಿಷ್ಯ : ಅರ್ಧ ನಿಜ, ಅರ್ಧ ಸುಳ್ಳು

By Mahesh
|

ಬೆಂಗಳೂರು, ಸೆ. 04: ಕೋಡಿಮಠ ಸಂಸ್ಥಾನದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ನುಡಿದ ಯಾವ ಭವಿಷ್ಯ ನಿಜವಾಗಿದೆ. ಅವರ ತಾಳೆಗರಿಯಲ್ಲಿ ಬರೆದಿದ್ದು, ಅವರು ಹೇಳಿದ ಭವಿಷ್ಯ ಯಾರಿಗೆ ಅರ್ಥವಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದೆ. ಮಾಧ್ಯಮಗಳ ಸಮೀಕ್ಷೆಗಳಂತೆ ಕೋಡಿಶ್ರೀಗಳ 'ಬಿಬಿಎಂಪಿ ಭವಿಷ್ಯ' ದ ಬಗ್ಗೆ ಕೂಡಾ ಭಾರಿ ಚರ್ಚೆ ನಡೆದಿದ್ದು ಸುಳ್ಳಲ್ಲ.

ಅದರೆ, ಬಿಬಿಎಂಪಿ ಚುನಾವಣೆಗೂ ಮುನ್ನ ತಾಳೇಗರಿ ನೋಡಿ ಹೇಳಿದ ಭವಿಷ್ಯ ಅರ್ಧಪಾಲು ನಿಜವಾಗಿದೆ. ರಾಜಕೀಯ ಪಕ್ಷಗಳಿಗೆ ಮಿಶ್ರಫಲ ತೋರಿಬರುವ ಸಾಧ್ಯತೆಯಿದೆ. ಯಾವ ಪಕ್ಷಕ್ಕೂ ಬಹುಮತ ಸಿಗುವ ಸಾಧ್ಯತೆಯಿಲ್ಲ. ಬಿಜೆಪಿ, ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷಗಳು ಏಕಾಂಗಿಯಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಕೋಡಿಶ್ರೀಗಳು ನುಡಿದಿದ್ದರು.[ಮೇಯರ್ ಆಯ್ಕೆಗೆ ಮತ ಹಾಕುವವರು ಯಾರು?]

ಈ ಬಾರಿಯ ಬಿಬಿಎಂಪಿ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದೇ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಶ್ರೀಗಳು, ಹಾಸನದಲ್ಲಿ ಗುರುವಾರ (ಆ 20) ಹೇಳಿದ್ದ ಭವಿಷ್ಯದ ನುಡಿಯ ಪೈಕಿ ಬಹುಮತದ ಸಂಖ್ಯೆ ಬಿಜೆಪಿಗೆ ಸಿಕ್ಕರೂ ಗದ್ದುಗೆ ಯಾರಲು ಆಗುತ್ತಿಲ್ಲ. [ಬಿಬಿಎಂಪಿ ಚುನಾವಣೆ: ಕೋಡಿಶ್ರೀಗಳ ಭವಿಷ್ಯವಾಣಿ]

ಬಿಬಿಎಂಪಿ ಚುನಾವಣೆ ಫಲಿತಾಂಶ, ಬಿಜೆಪಿಗೆ 100

ಬಿಬಿಎಂಪಿ ಚುನಾವಣೆ ಫಲಿತಾಂಶ, ಬಿಜೆಪಿಗೆ 100

197 ವಾರ್ಡ್ ಸಾಮರ್ಥ್ಯದ ಬಿಬಿಎಂಪಿಯಲ್ಲಿ ಬಿಜೆಪಿ 100 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ಚುನಾವಣೆಯನ್ನು ಗೆದ್ದಿತ್ತು. ಕಾಂಗ್ರೆಸ್ 76, ಜೆಡಿಎಸ್ 14, ಪಕ್ಷೇತರರು 8, ಕೋಡಿ ಶ್ರೀಗಳು ನುಡಿದಂತೆ ಬಿಬಿಎಂಪಿ ಚುನಾವಣೆಯ ಫಲಿತಾಂಶ ಅತಂತ್ರವಾಗಲಿಲ್ಲ. ಆದರೆ, ಮ್ಯಾಜಿಕ್ ನಂಬರ್ 131 ಗಳಿಸಲು ಬಿಜೆಪಿಗೆ ಆಗದೆ ಅತಂತ್ರವಾಗಿದೆ. ಸಿಟ್ಟಿನಲ್ಲಿ ಕಾಂಗ್ರೆಸ್ ವಿರುದ್ಧ ಸೆಟೆದು ನಿಂತಿದೆ. [ಕೋಡಿಶ್ರೀಗಳ ಭವಿಷ್ಯ ಯಾವುದು ಸತ್ಯ ಯಾವುದು ಮಿಥ್ಯ?]

ಪಕ್ಷಗಳಿಗೆ ಗೊಂದಲ ತಂದ ಪರಿಸ್ಥಿತಿ

ಪಕ್ಷಗಳಿಗೆ ಗೊಂದಲ ತಂದ ಪರಿಸ್ಥಿತಿ

ಈ ನಡುವೆ ಬಿಜೆಪಿ ತನ್ನ ಆಪರೇಷನ್ ಕಮಲ ತಂತ್ರ ಬಳಸಲಿದೆ, ಜೆಡಿಎಸ್ ಕಾರ್ಪೊರೇಟರ್ ಗಳನ್ನು ಕೇರಳದಲ್ಲಿ ಜೋಪಾನ ಮಾಡಲಾಗುತ್ತಿದೆ. ಎಲ್ಲದರ ನಡುವೆ ಸೆ.11ರಂದು ಮೇಯರ್ ಚುನಾವಣೆಗೆ ಸಕಲ ಸಿದ್ಧತೆಯಾಗುತ್ತಿದೆ. 260ಜನ ಮತದಾನ ಮಾಡುವ ಅಧಿಕಾರ ಹೊಂದಿದ್ದು, 131 ಮತ ಪಡೆದವರು ಮೇಯರ್ ಗೌನ್ ತೊಡಲಿದ್ದಾರೆ. ಸದ್ಯಕ್ಕಂತೂ ಮೇಯರ್ ಯಾರಾಗಲಿದ್ದಾರೆ? ಯಾವ ಪಕ್ಷಕ್ಕೆ ಈ ಅವಕಾಶ ಸಿಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಕೋಡಿಶ್ರೀಗಳು ಹೇಳಿದ ಅತಂತ್ರ ಸ್ಥಿತಿ ನಿಜವಾಗಿದೆ ಎನ್ನಬಹುದು.

ಮಾಧ್ಯಮಗಳ ಚುನಾವಣಾ ಸಮೀಕ್ಷೆಗಳು

ಮಾಧ್ಯಮಗಳ ಚುನಾವಣಾ ಸಮೀಕ್ಷೆಗಳು

ಸುವರ್ಣ ನ್ಯೂಸ್ ಹಾಗೂ ಜನಶ್ರೀ ಬಿಟ್ಟು ಮಿಕ್ಕ ಎಲ್ಲಾ ಮಾಧ್ಯಮಗಳು ನೀಡಿದ್ದ ಚುನಾವಣಾ ಪೂರ್ವ ಹಾಗೂ ಎಕ್ಸಿಟ್ ಪೋಲ್ ಸಮೀಕ್ಷೆಯಂತೆ ಬಿಜೆಪಿಗೆ ಬಹುಮತ ಸಿಗುವುದು ಕಷ್ಟ ಎಂದು ಓದಿಕೊಳ್ಳಬಹುದಾಗಿತ್ತು. ಆದರೆ, ಬಹುತೇಕ ಎಲ್ಲಾ ಚಾನೆಲ್ ಗಳು ಅಂತಂತ್ರ ಸ್ಥಿತಿಯ ಬಗ್ಗೆ ಸುಳಿವು ನೀಡಿದ್ದನ್ನು ಮರೆಯುವಂತಿಲ್ಲ. ಮೇಯರ್ ಆಯ್ಕೆಗೆ ಮ್ಯಾಜಿಕ್ ನಂಬರ್ ಎಷ್ಟು? ಚುನಾವಣೆ ಫಲಿತಾಂಶ ಮಾತ್ರ ಅತಂತ್ರವೇ ಅಥವಾ ಗದ್ದುಗೆ ಏರುವ ಹಂತದಲ್ಲಿ ಅತಂತ್ರ ಸ್ಥಿತಿ ಬರುತ್ತದೆಯೇ ಎಂಬುದನ್ನು ಯಾರು ನಿಖರವಾಗಿ ಹೇಳಿರಲಿಲ್ಲ.

ಗುಪ್ತಚರ ವರದಿಯ ನಂತರದ ಸ್ಥಿತಿ

ಗುಪ್ತಚರ ವರದಿಯ ನಂತರದ ಸ್ಥಿತಿ

ಗುಪ್ತಚರ ವರದಿಯ ನಂತರ ವಿನಾಕಾರಣ ತೊಂದರೆ ತೆಗೆದುಕೊಳ್ಳುವುದು ಬೇಡ, ಜೊತೆಗೆ ಮುಜುಗರ ಆಗುವುದನ್ನು ತಪ್ಪಿಸಲು ಕಾಂಗ್ರೆಸ್ ಮುಖಂಡರು ಎಚ್ಚೆತ್ತುಕೊಂಡಿದ್ದಾರೆ. ಹಾಗಾಗಿ ಪಕ್ಷದ ಎಲ್ಲಾ 76 ಚುನಾಯಿತ ಸದಸ್ಯರನ್ನು ರೆಸಾರ್ಟಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಇತ್ತ ಜೆಡಿಎಸ್ ಬಿಬಿಎಂಪಿ ಸದಸ್ಯರು ಕೂಡಾ ರೆಸಾರ್ಟ್ ನಲ್ಲಿದ್ದಾರೆ. ಬಿಜೆಪಿ ಅವರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಜೆಡಿಎಸ್ ಷರತ್ತಿಗೆ ಒಪ್ಪಿದರೆ ಮೈತ್ರಿ ಸಾಧ್ಯವಾಗುತ್ತದೆ. ಇಲ್ಲದಿದ್ದಾರೆ ಕೊನೆ ಕ್ಷಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕೈ ಹಿಡಿದರೂ ಅಚ್ಚರಿಪಡಬೇಕಾಗಿಲ್ಲ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BBMP election 2015: Kodimutt Seer Shivananda Shivayogi Rajendra swamiji predicted No party will get majority and their will a hung BBMP council. Swamiji's prediction pf hung situation can be witnessed now, but, didn't match with BBMP poll final result,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more