ಬಿಬಿಎಂಪಿ ಚುನಾವಣೆ: ಕಾಂಗ್ರೆಸ್ ನಲ್ಲಿ 46 ಪದವೀಧರರಿಗೆ ಟಿಕೆಟ್ ಭಾಗ್ಯ
ಬೆಂಗಳೂರು, ಆಗಸ್ಟ್, 11 : ಬಿಬಿಎಂಪಿ ಚುನಾವಣಾ ಪ್ರಚಾರ ನಗರದಲ್ಲಿ ಭಾರೀ ಸದ್ದು ಮಾಡ್ತಿದೆ. ಇದರ ಹಿನ್ನೆಲೆಯಲ್ಲಿ ಅಭ್ಯರ್ಥಿಗಳನ್ನು ಅಳೆದು ತೂಗಿ ನೊಂದಣಿ ಪ್ರಕ್ರಿಯೆ ಮುಗಿಸಿದ ಕೆಲ ಪಕ್ಷಗಳು ತಮ್ಮ ಅಭ್ಯರ್ಥಿಗಳ ವಿದ್ಯಾರ್ಹತೆ ಮಟ್ಟವನ್ನು ಪ್ರಕಟಿಸಿದ್ದು, ಇದರಲ್ಲಿ ಕಾಂಗ್ರೆಸ್ ಪಕ್ಷ ಮುಂಚೂಣಿಯಲ್ಲಿದೆ.
ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ 46 ಮಂದಿ ಪದವೀಧರರು ಇದ್ದಾರೆ. ಇಬ್ಬರು ವೈದ್ಯರು, 9 ಮಂದಿ ಎಂಜಿನಿಯರ್‌ಗಳು, ತಲಾ 7 ಮಂದಿ ವಕೀಲರು ಮತ್ತು ಡಿಪ್ಲೊಮ ಪದವೀಧರಿದ್ದಾರೆ.[ಬಿಬಿಎಂಪಿ ಚುನಾವಣೆ, ಕಾಂಗ್ರೆಸ್ ಪ್ರಣಾಳಿಕೆಯ ಭರವಸೆಗಳು]

34 ಮಂದಿ ಪಿಯುಸಿ ಮತ್ತು 54 ಮಂದಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿದ್ದು, ಎರಡು ವಿಷಯಗಳಲ್ಲಿ ಪದವಿ ಗಳಿಸಿದವರು ಒಟ್ಟು 12 ಮಂದಿ ಕಣಕ್ಕಿಳಿದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ರೌಡಿಗಳ ಪಾಲಿಗೆ ಟಿಕೆಟ್ ಭಾಗ್ಯವಿಲ್ಲ:
ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ರೌಡಿ ಪಟ್ಟಿಯಲ್ಲಿ ಇರುವವರಿಗೆ ಟಿಕೆಟ್ ನೀಡಿಲ್ಲ. ಆದರೆ 'ಎಫ್‌ಐಆರ್ ನಲ್ಲಿ ಹೆಸರುಳ್ಳವರು ಅಪರಾಧಿಗಳ ಸಾಲಿಗೆ ಸೇರದ ಕಾರಣ ಅವರಿಗೆ ಟಿಕೆಟ್ ಕೊಟ್ಟಿದ್ದೇವೆ. ಶಿಕ್ಷೆಯಾದವರಿಗೆ ಟಿಕೆಟ್ ಕೊಟ್ಟರೆ ತಪ್ಪು ಎನಿಸಿಕೊಳ್ಳುತ್ತದೆ. ಆದರೆ ನಾವು ಶಿಕ್ಷೆಯಾದವರನ್ನು ಯಾವುದೇ ಕಾರಣಕ್ಕೂ ಪರಿಗಣಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications