• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಬಿಎಂಪಿ ಚುನಾವಣಾ ಅಖಾಡದಲ್ಲಿ ಕೋಟ್ಯಾಧಿಪತಿಗಳು

|

ಬೆಂಗಳೂರು, ಆಗಸ್ಟ್ 18 : ಲೋಕಸಭೆ, ವಿಧಾನಸಭೆ ಚುನಾವಣೆ ಮಾತ್ರವಲ್ಲ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಕಣದಲ್ಲಿಯೂ ಕೋಟ್ಯಾಧಿಪತಿ ಅಭ್ಯರ್ಥಿಗಳಿದ್ದಾರೆ. ಕೋಟ್ಯಾಂತರ ರೂ. ಆಸ್ತಿಯನ್ನು ಹೊಂದಿದ್ದರೂ ಜನರ ಸೇವೆ ಮಾಡಬೇಕು ಎಂದು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.

198 ವಾರ್ಡ್‌ಗಳ ಬಿಬಿಎಂಪಿಗೆ ಆ. 22ರಂದು ಚುನಾವಣೆ ನಡೆಯಲಿದೆ. ಚುನಾವಣಾ ಕಣದಲ್ಲಿ ಕೋಟ್ಯಾಧೀಶರು ಇರುವಂತೆ ಅನೇಕರು ಬಾಡಿಗೆ ಮನೆಯಲ್ಲಿ ವಾಸ ಮಾಡುವವರು ಕೂಡ ಇದ್ದಾರೆ. ವಿದ್ಯಾರ್ಥಿನಿ ಸಹ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. [ಎಂ.ಕಾಂ ವಿದ್ಯಾರ್ಥಿನಿ, ಜೆಡಿಎಸ್ ಅಭ್ಯರ್ಥಿ ಅಶ್ವಿನಿ ಸಂದರ್ಶನ]

ಮಾಜಿ ಮೇಯರ್ ಎನ್.ಶಾಂತಕುಮಾರಿ, ಚೌಡೇಶ್ವರಿ ವಾರ್ಡ್‌ ಬಿಜೆಪಿ ಅಭ್ಯರ್ಥಿ ವಾಣಿಶ್ರೀ ವಿಶ್ವನಾಥ್‌, ಗರುಡಾಚಾರ್‌ ಪಾಳ್ಯದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌. ನಿತೇಶ್‌ ಪುರಷೋತ್ತಮ್‌ ಮುಂತಾದವರು ಕೋಟ್ಯಾಧಿಪತಿಗಳಾಗಿದ್ದಾರೆ. ಯಾವ ಅಭ್ಯರ್ಥಿಗಳ ಆಸ್ತಿ ಎಷ್ಟು?....[ಬಿಬಿಎಂಪಿ ಚುನಾವಣೆ ಕಣದಲ್ಲಿರುವ ಸ್ಟಾರ್ ಅಭ್ಯರ್ಥಿಗಳು]

ಮಾಜಿ ಮೇಯರ್ ಎನ್.ಶಾಂತಕುಮಾರಿ

ಮಾಜಿ ಮೇಯರ್ ಎನ್.ಶಾಂತಕುಮಾರಿ

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮಾರುತಿ ಮಂದಿರ ವಾರ್ಡ್‌ನಿಂದ ಮಾಜಿ ಮೇಯರ್‌ ಎನ್‌.ಶಾಂತಕುಮಾರಿ ಅವರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆಸ್ತಿ ವಿವರ ಹೀಗಿದೆ...
* ಬ್ಯಾಂಕ್‌ ಖಾತೆಯಲ್ಲಿ 55 ಲಕ್ಷ, 7.5 ಲಕ್ಷ ಮೌಲ್ಯದ ವಿಮಾ ಪಾಲಿಸಿಗಳು,
* 6.43 ಲಕ್ಷ ಮೌಲ್ಯದ ಚಿನ್ನಾಭರಣ, ಯಶವಂತಪುರದಲ್ಲಿ 10 ಲಕ್ಷ ಮೌಲ್ಯದ ನಿವೇಶನ
* ಐಟಿಐ ಬಡಾವಣೆಯಲ್ಲಿ ನಿವೇಶನ, ಮಲ್ಲತ್ತಹಳ್ಳಿಯಲ್ಲಿ 1.36 ಕೋಟಿ ಮೌಲ್ಯದ ಜಾಗ

ವಾಣಿಶ್ರೀ ವಿಶ್ವನಾಥ್ ಆಸ್ತಿ ವಿವರಗಳು

ವಾಣಿಶ್ರೀ ವಿಶ್ವನಾಥ್ ಆಸ್ತಿ ವಿವರಗಳು

ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರ ಪತ್ನಿ ವಾಣಿಶ್ರೀ ವಿಶ್ವನಾಥ್ ಚೌಡೇಶ್ವರಿ ವಾರ್ಡ್‌ನಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆಸ್ತಿ ವಿವರ...
* ಯಲಹಂಕ ಮತ್ತು ಹೆಸರಘಟ್ಟದಲ್ಲಿ 3.89 ಕೋಟಿ ಮೌಲ್ಯದ ಕೃಷಿ ಭೂಮಿ
* ದಾಸರಹಳ್ಳಿಯ ಭುವನೇಶ್ವರಿ ನಗರದಲ್ಲಿ 3.12 ಕೋಟಿ ಮೌಲ್ಯದ ಸ್ವಂತ ಮನೆ
* ವಿವಿಧ ಬ್ಯಾಂಕ್‌ ಖಾತೆಗಳಲ್ಲಿ 50 ಲಕ್ಷ ನಗದು
* 1.53 ಕೋಟಿ ಮೌಲ್ಯದ ಬಂಗಾರ ಒಡವೆಗಳು
* 2.6 ಲಕ್ಷ ಬೆಳ್ಳಿ (ಮದುವೆಯಲ್ಲಿ ಪೋಷಕರು ಉಡುಗೊರೆಯಾಗಿ ನೀಡಿದ್ದು)

ಶಾಸಕರ ಪುತ್ರ ಕೋಟ್ಯಾಧಿಪತಿ

ಶಾಸಕರ ಪುತ್ರ ಕೋಟ್ಯಾಧಿಪತಿ

ಹೊಸಕೋಟೆ ಶಾಸಕ ಎಂ.ಟಿ.ಬಿ ನಾಗರಾಜ್‌ ಪುತ್ರ, ಗರುಡಾಚಾರ್‌ ಪಾಳ್ಯದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಬಿ.ಎನ್‌. ನಿತೇಶ್‌ ಪುರಷೋತ್ತಮ್‌ ಅವರ ಆಸ್ತಿ ವಿವರ ಇಲ್ಲಿದೆ..
* ಕೈಯಲ್ಲಿ 4.49 ಲಕ್ಷ ಕೈಯಲ್ಲಿ ನಗದು, ಬ್ಯಾಂಕ್‌ ಖಾತೆಯಲ್ಲಿ 12.49 ಲಕ್ಷ ನಗದು
* 76.79 ಲಕ್ಷ ಮೌಲ್ಯದ ಷೇರು, 57 ಲಕ್ಷ ಮೌಲ್ಯದ ಬಂಗಾರದ ಆಭರಣ
* 36 ಲಕ್ಷದ ವಜ್ರದ ಹರಳುಗಳು ಮತ್ತು 6.27 ಲಕ್ಷ ಮೌಲ್ಯದ ಬೆಳ್ಳಿ
* 14 ಕೋಟಿ ಮೌಲ್ಯದ 63 ಎಕರೆ ಕೃಷಿ ಜಮೀನು

ನಾಗಾಪುರ ವಾರ್ಡ್ ಅಭ್ಯರ್ಥಿ ಹರೀಶ್

ನಾಗಾಪುರ ವಾರ್ಡ್ ಅಭ್ಯರ್ಥಿ ಹರೀಶ್

ನಾಗಪುರ ವಾರ್ಡ್‌ ಬಿಜೆಪಿ ಅಭ್ಯರ್ಥಿಯಾಗಿ ಪುನಃ ಕಣಕ್ಕೆ ಇಳಿದಿರುವ ಎಸ್‌.ಹರೀಶ್‌ ಅವರ ಆಸ್ತಿ ವಿವರ
* ಬಸವನಗುಡಿಯಲ್ಲಿ 80 ಲಕ್ಷ ಮೌಲ್ಯದ ಮನೆ
* ರಾಜಾಜಿನಗರದಲ್ಲಿ 1.5 ಕೋಟಿ ಬೆಲೆಬಾಳುವ ಮನೆ
* ಬ್ಯಾಂಕ್‌ ಖಾತೆಯಲ್ಲಿ ಸುಮಾರು 98 ಲಕ್ಷ ನಗದು

ಜೆಡಿಎಸ್ ಅಭ್ಯರ್ಥಿ ಆಸ್ತಿ ವಿವರಗಳು

ಜೆಡಿಎಸ್ ಅಭ್ಯರ್ಥಿ ಆಸ್ತಿ ವಿವರಗಳು

ಮಹಾಲಕ್ಷ್ಮೀ ಲೇಔಟ್ ಶಾಸಕ ಕೆ. ಗೋಪಾಲಯ್ಯ ಅವರ ಪತ್ನಿ ಎಸ್.ಪಿ.ಹೇಮಲತಾ ಅವರು ವೃಷಭಾವತಿ ವಾರ್ಡ್‌ನಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಆಸ್ತಿ ವಿವರ..
* 45 ಲಕ್ಷದ ಬಂಗಾರದ ಆಭರಣ
* 25 ಲಕ್ಷದ ವಿಮಾ ಪಾಲಿಸಿಗಳು
* ಕುಣಿಗಲ್‌ ಮತ್ತು ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ 1.5 ಕೋಟಿ ಮೌಲ್ಯದ ಕೃಷಿ ಜಮೀನು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Many crorepati candidates are the in the fray for BBMP elections 2015. Assets declared by candidates contesting in local body elections showcase how wealthy they are. Elections to 198 wards in Bengaluru will be held on 22nd August and result will be declared on 25th August.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more