ಬಿಬಿಎಂಪಿಯಲ್ಲೂ 40 ಪರ್ಸೆಂಟ್ ಭ್ರಷ್ಟಾಚಾರದ ಭೂತ: ಆಧಿಕಾರಿಗಳ ಕಳ್ಳಾಟದ ಬಿಗಿಹಿಡಿತ
ಬೆಂಗಳೂರು, ಏಪ್ರಿಲ್ 20: ಬಿಬಿಎಂಪಿ ಭ್ರಷ್ಟಾಚಾರ ಕೂಪ ಎಂಬುದು ಜಗಜ್ಜಾಹೀರಾಗಿರುವ ವಿಚಾರವಾಗಿದೆ. ರಾಜ್ಯದಾದ್ಯಂತ ಸರ್ಕಾರದ ವಿರುದ್ದವೇ 40 ಪರ್ಸೆಂಟ್ ಆರೋಪಗಳು ಕೇಳಿಬರುತ್ತವೆ. ಇನ್ನು ಬೆಂಗಳೂರಿಗರ ಪಾಲಿಗೆೆ ಪ್ರಮುಖ ಕೇಂದ್ರ ಅಂದರೆ ಅದುವೇ ಬಿಬಿಎಂಪಿ. ಬಿಬಿಎಂಪಿಯ ಕಂಟ್ರಾಕ್ಟರ್ ಗಳು ಸಹ ಬಿಲ್ ಪಾವತಿಗೆ 40 ಪರ್ಸೆಂಟ್ ಕೇಳುತ್ತಿರುವ ಬಗ್ಗೆ ಆರೋಪಗಳು ಕೇಳಿಬದಿವೆ.
ಗುತ್ತಿಗೆದಾರರು ತಮ್ಮ ಬಿಲ್ ಹಣವನ್ನು ಪಡೆಯಲು ಹರಸಾಹಸವನ್ನೇ ಪಡಬೇಕಾಗಿದೆ. ಬಾಕಿ ಬಿಲ್ ಪಾವತಿಗಾಗಿ ರಾಜ್ಯ ಸರ್ಕಾರ 1000 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಆದರೆ ಬಿಬಿಎಂಪಿಯ ಅಧಿಕಾರಿಗಳು ಮಾತ್ರ ದೇವರು ವರವನ್ನು ಕೊಟ್ಟರು ಪೂಜಾರಿ ವರ ಕೊಡಲಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ 1000 ಕೋಟಿ ಬಿಬಿಎಂಪಿ ಕಚೇರಿಯ ಖಜಾನೆಯಲ್ಲಿಯೇ ಕೊಳೆಯುವಂತಾಗಿದೆ.
ಕಳೆದ ಕೆಲವು ವರ್ಷಗಳ ಹಿಂದೆಯೇ 1100 ಕೋಟಿಯ ಕಾಮಗರಿಗಳು ಪೂರ್ಣವಾಗಿವೆ. ಇದರ ಬಿಲ್ ಪಾವತಿಗಾಗಿಯೇ 1000 ಕೋಟಿ ಹಣವನ್ನು ರಾಜ್ಯ ಸರ್ಕಾರದಂದ ಬಿಡುಗಡೆ ಮಾಡಲಾಗಿದೆ. ಆದರೆ ಧನದಾಹಿ ಅಧಿಕಾರಿಗಳ 40 ಪರ್ಸೆಂಟ್ ಲಂಚ ಬಾಕತನಕ್ಕೆ ಬಿಬಿಎಂಪಿ ಗುತ್ತಿಗೆದಾರರು ಕಂಗಾಲಾಗಿ ಹೋಗಿದ್ದಾರೆ.

ಎಲ್ಲೆಲ್ಲಿ ಎಷ್ಟೆಷ್ಟು ಪರ್ಸೇಂಟೇಜ್ ಕೊಡಬೇಕು..?
ಕಾಮಗಾರಿಯ ಅನುದಾನವನ್ನು ಪಡೆಯಲು ಶೇ 15
ವಿಧಾನಸೌಧದಲ್ಲಿ ವಿವಿಧ ಕಡೆ ಕಡತ ವಿಲೇವಾರಿಗೆೆ ಶೇ 5
ನಗರಾಭಿವೃದ್ದಿ ಇಲಾಖೆ ವಿವಿಧ ಭಾಗಗಳಿಗೆ ಶೇ 5
ಟೆಂಡರ್ ಪರಿಶೀಲನಾ ಸಮಿತಿಗೆ ಸಂಬಂಧಿಸಿದಂತೆ ಶೇ 5
ಬಿಲ್ ಪಾವತಿ ಅನುಮೊದನೆ , ವಿವಿಧ ಪಂತಗಳಲ್ಲಿ ಶೇ 10
ಹೀಗೆ ಗುತ್ತಿಗೆದಾರ ತಾನೂ ಮಾಡಿರುವ ಕಾಮಗಾರಿಯ ಬಿಲ್ ಮೊತ್ತವನ್ನು ಪಡೆಯಲು ವಿವಿಧ ಹಂತಗಳಲ್ಲಿ ಶಕ್ತಿಸೌಧದಿಂದ ಬಿಬಿಎಂಪಿ ಕಿರಿಯ ಅಧಿಕಾರಿಯ ವರೆಗೂ ಹಣವನ್ನು ಪಾವತಿ ಮಾಡಬೇಕಿದೆ. ಈ ಶೇ 40 ಹಣವನ್ನು ಕೊಟ್ಟರಷ್ಟೇ ಬಿಲ್ ಪಾವತಿಯಾದರೆ ಮಾತ್ರವೇ ಹಣ ಬಿಡುಗಡೆಯಾಗುತ್ತದೆೆ ಎಂದು ಗುತ್ತಿಗೆದಾರರು ಆರೋಪಿಸುತ್ತಿದ್ದಾರೆ.

ಏನಿದು ಪರ್ಸೇಂಟೆಜ್ ಗುಮ್ಮ..
ಬಿಬಿಎಂಪಿಯಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ 3500 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಪೂರೈಸಲಾಗಿದೆ. ಕಳೆದ ವರ್ಷ 1100 ಕೋಟಿ ರೂಪಾಯಿ ಬಿಲ್ ಪಾವತಿ ಬಾಕಿಯಿದೆ. ಸರಕಾರ ಅನುದಾನ ಬಿಡುಗಡೆ ಮಾಡುತ್ತಿದ್ದ ಒಂದು ತಿಂಗಳೊಳಗೆ ಬಿಲ್ ಪಾವತಿಯಾಗುತ್ತಿತ್ತು. ಆದ್ರೀಗ 1000 ಕೋಟಿ ಯನ್ನು ಸರ್ಕಾರ ಬಿಡುಗಡೆ ಮಾಡಿದ್ದರೂ ಬಿಬಿಎಂಪಿ ಅಧಿಕಾರಿಗಳು ಬಿಲ್ ಹಣವನ್ನು ಬಿಡುಗಡೆ ಮಾಡುತ್ತಿಲ್ಲ ಎಂಬ ಗಂಭೀರವಾದ ಆರೋಪವನ್ನು ಮಾಡುತ್ತಿದ್ದಾರೆೆ. ಇನ್ನು ಸಾವಿರ ಕೋಟಿಯಲ್ಲಿ 10 ಜನ ಗುತ್ತಿಗೆದಾರರಿಗೆ ಮಾತ್ರವೇ ಹಣ ಬಿಡುಗಡೆ ಮಾಡಲಾಗಿದೆ. ಕೆಲವರಿಗೆ ಕೇವಲ ಹಣ ಬಿಡುಗಡೆ ಪತ್ರವನ್ನು ಮಾತ್ರ ನೀಡಿದ್ದಾರೆ. ಆದರೆ ನಮಗೆ ಹಣ ಸೇರಿಲ್ಲ ಎಂದು ಕೆಲವು ಗುತ್ತಿಗೆದಾರರು ಕಂಗಾಲಾಗಿದ್ದಾರೆ.
ಇನ್ನು ಆಯುಕ್ತರು ತಮ್ಮ ವಿವೇಚನಾ ಅಧಿಕಾವನ್ನು ಬಳಸಿ ಶೇ 5 ರಷ್ಟು ಹಣವನ್ನು ಮಾತ್ರ ಬಿಡುಗಡೆ ಮಾಡುವ ಅಧಿಕಾವಿದೆ. ಆದರೆ ಆಯುಕ್ತರು 250 ಕೋಟಿ ಹಣ ಬಿಡುಗಡೆ ಮಾಡಿರುವುದು ಅಕ್ರಮ ನಡೆದಿರು ಅನುಮಾನವನ್ನು ಗುತ್ತಿಗೆದಾರರು ವ್ಯಕ್ತಪಡಿಸುತ್ತಿದ್ದಾರೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷರು ಹೇಳುವುದು ಏನು..
Recommended Video
ಬಿಬಿಎಂಪಿಯ ಬಿಲ್ ಪಾವತಿಗಾಗಿ ಶೇ 40ರಷ್ಟು ಹಣವನ್ನು ಕೊಡುವ ಬಗ್ಗೆ ಬಿಬಿಎಂಪಿ ಕಂಟ್ರಾಕ್ಟರ್ ಸಂಘದ ಅಧ್ಯಕ್ಷ ಅಂಬಿಕಾಪತಿ, "ವಿವಿಧ ಹಂತದಲ್ಲಿ ಬೇರೆ ಬೇರೆ ಟೇಬಲ್‌ಗಳಲ್ಲಿ ಶೇ 40 ಹಣವನ್ನು ಲಂಚದ ರೂಪದಲ್ಲಿ ಕೊಡಬೇಕಿದೆ. ಆದರೆ ಸರ್ಕಾರ ನಮಗೆ ದಾಖಲೆ ಕೊಡಿ ಎಂದು ಕೇಳುತ್ತೆ. ಲಂಚದ ದಾಖಲೆ ಕೊಡಲು ಸಾಧ್ಯವಿಲ್ಲ ಅನ್ನೊದನ್ನು ಅರಿತು ಅಧಿಕಾರಿಗಳು ಹಣವನ್ನು ಪಡೆಯುತ್ತಿದ್ದಾರೆ. ಹಣ ಕೊಡದಿದ್ದರೆ ಕುಂಟು ನೆಪ ಹೇಳಿ ಬಿಲ್‌ಗಳನ್ನು ಪೆಂಡಿಂಗ್ ಇಡುತ್ತಾರೆ,'' ಎಂದು ಸ್ಪಷ್ಟಪಡಿಸಿದರು.












Click it and Unblock the Notifications