ಬೆಂಗಳೂರಿನ ಹೆಬ್ಬಾಳ ಜಂಕ್ಷನ್ ಸಂಚಾರ ದಟ್ಟಣೆ; ವಾಹನ ಸವಾರರಿಗೆ ಶುಭ ಸುದ್ದಿ
ಬೆಂಗಳೂರು, ಜೂನ್ 29: ಬೆಂಗಳೂರು ವಿಶ್ವದರ್ಜೆಯ ಸ್ಥಾನಮಾನವನ್ನು ಹೊಂದಿರುವ ನಗರವಾಗಿದೆ. ಆದದರೆ ವಿಶ್ವ ಗುಣಮಟ್ಟದ ರಸ್ತೆಗಳನ್ನು ಹೊಂದುವುದರಲ್ಲಿ ವಿಫಲವಾಗಿದೆ. ಬೆಂಗಳೂರಿನ ಕೇಂದ್ರ ಭಾಗಕ್ಕೆ ಬರಬೇಕಾದರೆ ಇಲ್ಲಿಂದ ಹೊರ ರಾಜ್ಯಕ್ಕೋ ವಿದೇಶಕ್ಕೋ ಹೋಗಬೇಕಾದರೆ ಸರ್ವೇ ಸಾಮನ್ಯವಾಗಿ ಹೆಬ್ಬಾಳ ಜಂಕ್ಷನ್ ದಾಟಲೇ ಬೇಕು. ಕೆಲವೊಮ್ಮೆ ಗಂಟೆಗಟ್ಟಲೇ ನಿಂತರು ಟ್ರಾಫಿಕ್ ಕಿರಿಕಿರಿ ತಪ್ಪುವುದಿಲ್ಲ.
ನಗರದ ಹೆಬ್ಬಾಳ ಜಂಕ್ಷನ್ ತುಮಕೂರು ರಸ್ತೆ ಮೂಲಕ ಬಳ್ಳಾರಿ ರಸ್ತೆಯ ಕಡೆ ಹೋಗುವ ಸರ್ವೀಸ್ ರಸ್ತೆಯನ್ನು ಎನ್. ಹೆಚ್. ಎ. ಐ ಕಡೆಯಿಂದ ಅಭಿವೃದ್ಧಿಪಡಿಸಿ ಅಗಲೀಕರಣಗೊಳಿಸಿ, ಎಸ್ಟಿಮ್ ಮಾಲ್ ಮುಂಭಾಗ ರಸ್ತೆಯಲ್ಲಿ ಬಸ್‌ಗಳು ನಿಲ್ಲುವುದನ್ನು ತಪ್ಪಿಸಿದಾಗ ಸ್ವಲ್ಪ ಮಟ್ಟದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಯಲಿದೆ. ಈ ಸಂಬಂಧ ಎನ್. ಹೆಚ್. ಎ. ಐ ಕಡೆಯಿಂದ ಸೂಕ್ತ ಕ್ರಮ ಕೈಗೊಳ್ಳಲು ಗಮನವನ್ನು ಹರಿಸಬೇಕಿದೆ.
ಆಸ್ಟರ್ ಸಿಎಂಐ ಆಸ್ಪತ್ರೆ ಪಕ್ಕದಲ್ಲಿರುವ ಮಿಲಿಟರಿ ರಸ್ತೆಯು ಸಂಜೀವಿನಿ ನಗರದ ಮೂಲಕ ಸಹಕಾರ ನಗರಕ್ಕೆ ಸಂಪರ್ಕ ಕಲ್ಪಿಸಲಿದ್ದು. ರಸ್ತೆ ಅಭಿವೃದ್ಧಿ ಕಾರ್ಯವನ್ನು ಪೂರ್ಣಗೊಳಿಸಿದರೆ ಸಹಕಾರ ನಗರದ ಕಡೆ ಹೋಗುವ ವಾಹನಗಳು ಈ ಪರ್ಯಾಯ ರಸ್ತೆಯನ್ನು ಬಳಸಿದಾಗ ಕೊಡಿಗೆಹಳ್ಳಿ ಸಿಗ್ನಲ್ ಬಳಿಯಾಗುವ ಸಂಚಾರದಟ್ಟಣೆ ಕಡಿಮೆಯಾಗಲಿದೆ. ಈ ಪೈಕಿ ಮಿಲಿಟರಿ ಅಧಿಕಾರಿಗಳ ಜೊತೆ ಮಾತನಾಡಿ ಇರುವ ಸಮಸ್ಯೆ ಬಗೆಹರಿಸಿಕೊಂಡು ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ.

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಅಗತ್ಯ ಕ್ರಮ
ಬಳ್ಳಾರಿ ರಸ್ತೆ (ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಯಿಂದ) ಮಾರ್ಗದ ಮೇಲು ಸೇತುವೆಯಿಂದ ಬರುವ ವಾಹನಗಳನ್ನು ನೇರವಾಗಿ ಹೆಬ್ಬಾಳದ ಮೇಲುಸೇತುವೆ ಮೂಲಕ ಹೋಗಲು ಅನುವು ಮಾಡಿ, ಸದರಿ ಮೇಲುಸೇತುವೆಯ ಕೆಳಗಿರುವ ರಸ್ತೆ ಮೂಲಕ ಬರುವ ವಾಹನಗಳನ್ನು ಮೇಲುಸೇತುವೆಯ ರಸ್ತೆಗೆ ಹೋಗಲು ಬಿಡದೆ ಮಿಡಿಯನ್ ಅಳವಡಿಸಿ ಸರ್ವೀಸ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಬೇಕು. ನಗರದೊಳಗೆ ಹೋಗಬೇಕಿರುವ ವಾಹನಗಳು ಹೆಬ್ಬಾಳ ಜಂಕ್ಷನ್ ಮೂಲಕ ನಗರಕ್ಕೆ ಹೋಗಲು ಸಂಪರ್ಕವಿರುವ ramp ಮೂಲಕ ಹೋಗಲು ಅವಕಾಶ ನೀಡಿದಲ್ಲಿ ಸಂಚಾರದಟ್ಟಣೆ ಕಡೆಮೆಯಾಗುವ ನಿರೀಕ್ಷೆಯಿದೆ. ಆದ್ದರಿಂದ ಈ ಕ್ರಮವನ್ನು ಕೂಡಲೆ ಜಾರಿಗೊಳಿಸಲು ಸಂಚಾರಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಿಗದಿತ ಸ್ಥಳದಲ್ಲೇ ಬಸ್ ನಿಲುವಿಗೆ ಅವಕಾಶ
ಹೆಬ್ಬಾಳ ಜಂಕ್ಷನ್ ನಲ್ಲಿ(ತುಮಕೂರಿನಿಂದ ಕೆ.ಆರ್.ಪುರ ಕಡೆಯ ರಸ್ತೆ) ನಗರದೊಳಗೆ ಹೋಗಲು ಸಂಪರ್ಕ ಕಲ್ಪಿಸುವ ರ‍್ಯಾಂಪ್ ಬಳಿ ಕೆ. ಆರ್. ಪುರದ ಕಡೆ ಹೋಗುವ ಬಸ್ ಗಳು ನಿಲ್ಲುವುದರಿಂದ ಸಂಚಾರ ದಟ್ಟಣೆಯಾಗುತ್ತಿರುವುದುನ್ನು ಗಮನಿಸಿ, ಕೆ. ಆರ್.ಪುರದ ಕಡೆ ಗಂಟೆಗೆ ಸುಮಾರು 150 ಬಸ್ ಗಳು ಹೋಗಲಿದ್ದು, ಎಲ್ಲಾ ಬಸ್ ಗಳನ್ನು ನಗರಕ್ಕೆ ಸಂಪರ್ಕವಿರುವ ರ‍್ಯಂಪ್ ಗಿಂತಲೂ ಮುಂದೆ ನಿಲ್ಲಿಸಬೇಕು. ಜೊತೆಗೆ ಯಾವ ಬಸ್ ಎಲ್ಲಿಗೆ ಹೋಗಲಿದೆ ಎಂಬುದರ ಬಗ್ಗೆ ಬಿಎಂಟಿಸಿ ವತಿಯಿಂದ ಸೈನೇಜ್ ಗಳನ್ನು ಅಳವಡಿಸಬೇಕು.
ಪಾದಚಾರಿಗಳು ಒಂದೆಡೆ ಮಾತ್ರ ರಸ್ತೆ ದಾಟುವ ಸಲುವಾಗಿ ಜೀಬ್ರಾ ಕ್ರಾಸಿಂಗ್ ಮಾರ್ಕ್ ಗಳನ್ನು ಅಳವಡಿಸುವುದು ಹಾಗೂ ಬೀದಿ ದೀಪಗಳನ್ನು ಅಳವಡಿಸಿ ರಸ್ತೆ ಬದಿಯಿರುವ ಮರದ ಕೊಂಬೆಗಳನ್ನು ಕತ್ತಿರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ದೀರ್ಘಾವದಿ ಯೋಜನೆಗಳು
ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಬಿಬಿಎಂಪಿ ಎರಡು ರೀತಿಯ ಯೋಜನೆಯನ್ನು ಹಾಕಿ ಕೊಂಡಿದೆ. ಅಲ್ಪಾವಧಿ ಯೋಜನ ಮತ್ತು ದೀರ್ಘಾವಧಿ ಯೋಜನೆಯನ್ನು ಹಾಕಿಕೊಂಡಿದೆ.
*ಪಾದಚಾರಿಗಳ ಓಡಾಟಕ್ಕೆ ಜೀಬ್ರಾ ಕ್ರಾಸಿಂಗ್ ನಿರ್ಮಾಣ
*ಎಲ್ಲಾ ಬಸ್ ಗಳು ಒಂದೇ ಕಡೆ ನಿಲ್ಲಬೇಕು
*ಯಾವ ಬಸ್ ಎಲ್ಲಿಗೆ ಹೋಗಲಿದೆ ಎಂಬುದರ ಬಗ್ಗೆ ಸೈನೇಜ್ ಅಳವಡಿಕೆ
*ಬೀದಿ ದೀಪ ಅಳವಡಿಕೆ
*ಪಾದಚಾರಿ ಮಾರ್ಗ ಅಭಿವೃದ್ಧಿ
*ರಸ್ತೆ ಬದಿಯಿರುವ ಮರದ ಕೊಂಬೆಗಳನ್ನು ಕತ್ತಿರಿಸುವುದು
*ಮೀಡಿಯನ್ ನಲ್ಲಿ ಆರ್.ಸಿ.ಸಿ ಗೋಡೆ ಅಳವಡಿಕೆ

ದೀರ್ಘಾವದಿ ಯೋಜನೆಗಳು
*ಹೆಬ್ಬಾಳ ಜಂಕ್ಷನ್ ನಲ್ಲಿರುವ ರೈಲ್ವೇ ಹಳಿ ಕೆಳಗೆ ಪಾದಚಾರಿ ಓಡಾಟಕ್ಕೆ ಕೆಳಸೇತುವೆ ನಿರ್ಮಾಣ
*ತುಮಕೂರು ರಸ್ತೆ ಮೂಲಕ ಬಳ್ಳಾರಿ ರಸ್ತೆಯ ಕಡೆ ಹೋಗುವ ಸರ್ವೀಸ್ ರಸ್ತೆ ಅಗಲೀಕರಣ ಮಾಡುವುದು.
*ಬಿಡಿಎ ವತಿಯಿಂದ ಹೆಚ್ಚುವರಿ ಮೇಲುಸೇತುವೆ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗುತ್ತಿದೆ.