ಬೆಂಗಳೂರಿನಲ್ಲಿ 24 ಗಂಟೆಯೂ ತೆರೆದಿರಲಿವೆಯೇ ಹೋಟೆಲ್, ರೆಸ್ಟೋರೆಂಟ್‌ಗಳು?: ಪ್ರಸ್ತಾಪ ಸಲ್ಲಿಕೆ
ಬೆಂಗಳೂರು, ಜೂನ್. 16: ಇತ್ತೀಚೆಗೆ ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್ (BBHA) ಬೆಂಗಳೂರಿನಲ್ಲಿ ತಿಂಡಿ ತಿನಿಸುಗಳನ್ನು ಮಾರಾಟ ಮಾಡುವ ಹೋಟೆಲ್, ರೆಸ್ಟೋರೆಂಟ್‌ಗಳು, ಬೇಕರಿಗಳನ್ನು 24 ಗಂಟೆಯೂ ತೆರೆದಿರಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಇದೇನಾದರೂ ಜಾರಿಗೆ ಬಂದಲ್ಲಿ ಬೆಂಗಳೂರಿನಲ್ಲಿ ನೈಟ್ ಲೈಪ್ ಮತ್ತಷ್ಟು ರಂಗು ಪಡೆಯಲಿದೆ. ಜೊತೆಗೆ ಪೊಲೀಸರಿಗೆ ಕೆಲಸ ಹೆಚ್ಚಾಗಲಿದೆ.
"ನಾವು 24 ಗಂಟೆಯೂ ಹೋಟೆಲ್ ಕ್ರಮಕ್ಕಾಗಿ ಒತ್ತಾಯಿಸುತ್ತಿದ್ದೇವೆ. ಏಕೆಂದರೆ ಇದು ಹೋಟೆಲ್ ಮತ್ತು ಗ್ರಾಹಕರ ನಡುವಿನ ಮಧ್ಯದ್ಥಗಾರರಿಗೆ ಪ್ರಯೋಜನಕಾರಿಯಾಗಿದೆ. ಹೋಟೆಲ್‌ಗಳು ಮುಚ್ಚಿರುವುದರಿಂದ ಮಧ್ಯರಾತ್ರಿಯ ನಂತರ ನಗರದಲ್ಲಿ ಬಹಳಷ್ಟು ಮಾರಾಟಗಾರರಿಗೆ ಶುದ್ಧ ಕುಡಿಯುವ ನೀರು ಅಥವಾ ವಾಶ್‌ರೂಮ್‌ಗಳು ಲಭ್ಯವಿಲ್ಲ. ಉದ್ಯೋಗ ಹೆಚ್ಚಳಕ್ಕೂ ಈ ಕ್ರಮ ಸಹಕಾರಿಯಾಗಲಿದೆ" ಎನ್ನುತ್ತಾರೆ ಸಂಘದ ಅಧ್ಯಕ್ಷ ಪಿ.ಸಿ.ರಾವ್.

ಹೊಸ ಸರ್ಕಾರ ಮತ್ತು ಪೊಲೀಸ್ ಇಲಾಖೆಯೊಂದಿಗೆ ಪರಸ್ಪರ ಮಾತುಕತೆ ನಡೆಸಿದ ನಂತರ, ಸಂಘದ ಸದಸ್ಯರು ಈಗ ರಾಜ್ಯ ಗೃಹ ಸಚಿವರನ್ನು ಭೇಟಿ ಮಾಡಲು ಸಿದ್ಧರಾಗಿದ್ದಾರೆ. ಈ ಕ್ರಮವು ವಾಣಿಜ್ಯ ವ್ಯವಹಾರದಲ್ಲಿ ಆದಾಯ ಮತ್ತು ವಿದೇಶಿ ಹೂಡಿಕೆಗಳನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಆದರೆ, ಹೆಚ್ಚಿನ ಶಬ್ಧ ಮಾಲಿನ್ಯ ಮತ್ತು ಭದ್ರತೆ ಬಗ್ಗೆಯೂ ಗಮನ ಹರಿಸಬೇಕಿದೆ.
ಶಬ್ಧ ಮಾಲಿನ್ಯ ಮತ್ತು ಭದ್ರತೆ ಉದ್ದೇಶಿಸಿ ಮಾತನಾಡಿರುವ ಪಿಸಿ ರಾವ್ "ನಾವು ವಾಣಿಜ್ಯ ಪ್ರದೇಶಗಳಲ್ಲಿ ತೆರೆದಿರುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಬೇಕರಿಗಳು ಇತ್ಯಾದಿಗಳಿಗೆ ಮಾತ್ರ ಅನುಮತಿಗಳನ್ನು ಪಡೆಯಲು ಬಯಸುತ್ತಿದ್ದೇವೆ. ಏಕೆಂದರೆ ವಸತಿ ಪ್ರದೇಶಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ. ಭದ್ರತಾ ಕಾರಣಗಳಿಗಾಗಿ, ನಾವು ಮದ್ಯ ಸೇವಿಸುವ ಸಂಸ್ಥೆಗಳನ್ನು ತೆರೆಯಲು ಅನುಮತಿ ಕೇಳುತ್ತಿಲ್ಲ" ಎಂದಿದ್ದಾರೆ.
ಪ್ರಸ್ತುತ ನಗರದಲ್ಲಿ ಹೋಟೆಲ್, ರೆಸ್ಟೋರೆಂಟ್‌ಗಳು, ಬೇಕರಿಗಳನ್ನು 1 ಗಂಟೆಯವರೆಗೆ ತೆರೆಯಲು ಪೊಲೀಸರು ಅನುಮತಿ ನೀಡಿದ್ದಾರೆ. 24 ಗಂಟೆಯೂ ಅವಕಾಶ ನೀಡಿದರೆ, ಅದನ್ನು ಅನುಸರಿಸಲು ಎಲ್ಲಾ ಸಂಸ್ಥೆಗಳಿಗೂ ಅಗತ್ಯವಿರುವುದಿಲ್ಲ. ಎಂಟರ್‌ಪ್ರೈಸ್‌ಗಳು ತಮ್ಮದೇ ಆದ ಸಮಯವನ್ನು ಆಯ್ಕೆ ಮಾಡಬಹುದು ಎಂದಿದ್ದಾರೆ.
ಈ ಕ್ರಮವನ್ನು ಹಲವು ಹೋಟೆಲ್, ರೆಸ್ಟೋರೆಂಟ್‌ಗಳು ಸ್ವಾಗತಿಸಿವೆ. ಅನೇಕ ವ್ಯಕ್ತಿಗಳು ತಡವಾಗಿ ಅಥವಾ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಊಟದ ಆಯ್ಕೆಗಳು ಅತ್ಯಗತ್ಯವಾಗಿ ಬೇಕು. ಆದರೆ, ಆ ಸಮಯದಲ್ಲಿ ನಾವು ಬಾಗಿಲು ಹಾಕುವುದಿಂದ ಅವರಿಗೆ ಸಿಗುವುದಿಲ್ಲ. ಇದು ಎಲ್ಲಾ ರೆಸ್ಟೋರೆಂಟ್ ಮಾಲೀಕರು ಮತ್ತು ಹೋಟೆಲ್ ನಿರ್ವಾಹಕರಿಗೆ ಸಹಾಯಕವಾಗಲಿದೆ. ಇದು ಪ್ರಯಾಣಿಕರಿಗೆ ಹೆಚ್ಚಿನ ಉಪಯೋಗಕ್ಕೆ ಬರುತ್ತದೆ ಎಂದಿದ್ದಾರೆ.
ಹಲವು ಗ್ರಾಹಕರು ಕೂಡ ಇದು ಒಳ್ಳೆಯದು ಎಂದಿದಾರೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಊಟದ ಆಯ್ಕೆಗಳು ಮತ್ತು ರಾತ್ರಿ ಅಂಗಡಿಗಳು ತೆರದಿರುವ ಕಾರಣ ನಿರಾತಂಕವಾಗಿ ಓಡಾಡಲು ಸಹಾಯವಾಗುತ್ತದೆ ಎನ್ನುತ್ತಾರೆ. ಆದರೆ, ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.h












Click it and Unblock the Notifications