ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಟಿಎಂ ಕೇಂದ್ರಕ್ಕೆ ಭದ್ರತೆ ಕೊಡಿ, ಇಲ್ಲಾ ಪ್ರಕರಣ ಎದುರಿಸಿ

By Kiran B Hegde
|
Google Oneindia Kannada News

ಬೆಂಗಳೂರು, ಡಿ. 12: ಎಟಿಎಂ ಕೇಂದ್ರದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ನಿಮ್ಮ ಮೇಲೆ ಪ್ರಕರಣ ದಾಖಲಿಸಿ, ಎಟಿಎಂ ಕೇಂದ್ರ ಬಂದ್ ಮಾಡಿಸ್ತೇವೆ. ಇದು ಪೊಲೀಸರು ಬ್ಯಾಂಕ್‌ಗಳಿಗೆ ಮತ್ತೊಮ್ಮೆ ನೀಡಿರುವ ಎಚ್ಚರಿಕೆ.

ವಸಂತನಗರದ ಪಂಜಾಬ್ ನ್ಯಾಶನಲ್ ಬ್ಯಾಂಕ್ ಎಟಿಎಂ ಯಂತ್ರದಲ್ಲಿ ನಡೆದಿದ್ದ ದರೋಡೆ ಪ್ರಕರಣದ ನಂತರ ಮತ್ತೆ ಸಭೆ ನಡೆಸಿದರು. ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಎಟಿಎಂ ಕೇಂದ್ರದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. [ಎಟಿಎಂ ಹಲ್ಲೆಕೋರನ ಸುಳಿವಿಗೆ ಬಹುಮಾನ ಡಬಲ್]

atm

ಈ ಮೊದಲು ಕಾರ್ಪೊರೇಶನ್ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಜ್ಯೋತಿ ಉದಯ್ ಅವರ ನಡೆದ ಭೀಕರ ಹಲ್ಲೆ ಪ್ರಕರಣ ಬಳಿಕ ಸೂಕ್ತ ಭದ್ರತೆ ಕಲ್ಪಿಸುವಂತೆ ಬ್ಯಾಂಕ್‌ಗಳಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಹೆಚ್ಚಿನ ಬ್ಯಾಂಕ್‌ಗಳು ಈ ಕ್ರಮ ಕೈಗೊಂಡಿರಲಿಲ್ಲ. ಆದ್ದರಿಂದ ಮತ್ತೊಮ್ಮೆ ಸಭೆ ನಡೆಸಿ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು. [ಎಟಿಎಂ ಕಳವು ತಡೆಯಲು ಹೊಸ ಯಂತ್ರ]

ಪೊಲೀಸರ ಸ್ಪಷ್ಟ ಸೂಚನೆ...

  • ಎಟಿಎಂಗಳಲ್ಲಿ ಕಾವಲುಗಾರರ ನಿಯೋಜನೆ, ಸಿಸಿಟಿವಿ ಹಾಗೂ ಅಲಾರಾಂ ಅಳವಡಿಕೆ ಕಡ್ಡಾಯ
  • ಬ್ಯಾಂಕ್‌ ಕಚೇರಿ ಪಕ್ಕದಲ್ಲಿರುವ ಎಟಿಎಂ ಕೇಂದ್ರಗಳಿಗೂ ಭದ್ರತೆ ಕಲ್ಪಿಸಬೇಕು. ಇಲ್ಲದಿದ್ದರೆ ಬ್ಯಾಂಕ್ ಜೊತೆ ಈ ಕೇಂದ್ರವನ್ನೂ ಬಂದ್ ಮಾಡಬೇಕು
  • ಸುರಕ್ಷತಾ ಕ್ರಮಗಳನ್ನು ಡಿ. 31ರೊಳಗೆ ಕೈಗೊಳ್ಳಬೇಕು. ಇಲ್ಲದ್ದರೆ ಬ್ಯಾಂಕ್ ವಿರುದ್ಧ ಕ್ರಮ [ಎಟಿಎಂ ದಾಳಿ ಆರೋಪಿ ಎಲ್ಲಿ]
  • ಪೊಲೀಸರಿಗೆ ತಮ್ಮ ವ್ಯಾಪ್ತಿಯ ಎಟಿಎಂ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲು ಸೂಚನೆ
  • ಪೊಲೀಸರ ವರದಿ ಬಳಕಿ ಮುಂದಿನ ಕ್ರಮಕ್ಕೆ ನಿರ್ಧಾರ
English summary
Police warned banks to take protection measure at ATM center or ready to face action. Police gave deadline of December 31 for action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X