ಬೆಂಗಳೂರು 2ನೇ ವಿಮಾನ ನಿಲ್ದಾಣ: ಕನಕಪುರ, ಕುಣಿಗಲ್, ಬಿಡದಿ, ಶಿರಾ, ನೆಲಮಂಗಲ, ಹಾರೋಹಳ್ಳಿ ಔಟ್, ಈ ಜಾಗವೇ ಫಿಕ್ಸ್!
ಎರಡನೇ ವಿಮಾನ ನಿಲ್ದಾಣಕ್ಕೆ ಜಾಗ ಅಂತಿಮವಾಗುವ ಬಹುತೇಕ ಫೈನಲ್ ಆಗಿದೆ. ಇಲ್ಲಿಯ ವರೆಗೆ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಆಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ಇದಕ್ಕೆ ಟ್ವಿಸ್ಟ್ ನೀಡಿದೆ. ಬೆಂಗಳೂರು ದಕ್ಷಿಣ ಭಾಗದಿಂದ ಕೈ ತಪ್ಪುತ್ತಿದ್ದು, ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಮನಗರದ ಈ ಎರಡು ಜಾಗವೇ ಫಿಕ್ಸ್ ಆಗುತ್ತಿದೆ. ಹಾಗಾದರೆ ಈಗ ಶಾರ್ಟ್ ಲಿಸ್ಟ್ ಆಗಿರುವ ಹೊಸ ಜಾಗ ಯಾವುದು ಹಾಗೂ ಈ ಜಾಗದಲ್ಲಿ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾವೆಲ್ಲಾ ಸಿದ್ಧತೆ ನಡೆದಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಮೂರು ಜಾಗಗಳ ಬದಲಿಗೆ ಇದೀಗ 5 ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಿದಂತೆ ಆಗಿದೆ. ಕೇಂದ್ರ ತಂಡವು ಈ 5 ಜಾಗಗಳಲ್ಲೂ ಪರಿಶೀಲನೆ ಮಾಡಿದ್ದು, ಯಾವ ಜಾಗ ಉತ್ತಮ ಎನ್ನುವುದನ್ನು ಇನ್ನು ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಇದೇ ವರದಿಯನ್ನು ಕೇಂದ್ರ ಸರ್ಕಾರಕ್ಕೂ ಸಲ್ಲಿಕೆ ಮಾಡಲಿದೆ. ಇಲ್ಲಿಯ ವರೆಗೆ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕನಕಪುರ, ಕುಣಿಗಲ್, ಬಿಡದಿ, ಶಿರಾ, ನೆಲಮಂಗಲ ಹಾಗೂ ಹಾರೋಹಳ್ಳಿ ಪ್ರದೇಶಗಳು ಚರ್ಚೆಯಾಗಿದ್ದವು. ಆದರೆ ಇದೀಗ ಮಾಗಡಿಯಲ್ಲಿ 5,000 ಸಾವಿರ ಎಕರೆ ವ್ಯಾಪ್ತಿಯಲ್ಲಿ 2 ಜಾಗಗಳನ್ನು ಸರ್ವೇ ಮಾಡಲಾಗಿದೆ.

ಮಾಗಡಿ ಗ್ರಾಮಾಂತರ ಪ್ರದೇಶದ / ಮಾಗಡಿಯ ಮೋಟಗಾನಹಳ್ಳಿ ಹಾಗೂ ಚಿಕ್ಕಸೋಲೂರಿನಲ್ಲಿ ಸರ್ವೇ ನಡೆದಿದ್ದು. ಈ ಭಾಗದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ವಿವಿಧ ಕಾರಣಗಳಿಗೆ ಸೂಕ್ತವಾಗಿದೆ ಎಂದು ಹೇಳಲಾಗಿದೆ. ಈಚೆಗೆ ರಾಜ್ಯ ಕೈಗಾರಿಕಾ ಇಲಾಖೆ ಮತ್ತು ಎಎಐ ಕೇಂದ್ರ ತಂಡ ಹೊಸ ವಿಮಾನ ನಿಲ್ದಾಣದ ಸ್ಥಳಕ್ಕೆ ಸಂಬಂಧಿಸಿದಂತೆ ಇಲ್ಲಿ ಪರಿಶೀಲನೆ ನಡೆಸಿದೆ. ಆದರೆ ಇಲ್ಲಿ ಸ್ಥಳ ಪರಿಶೀಲನೆ ನಡೆಸಿರುವ ಬಗ್ಗೆ ಯಾವುದೇ ಮಾಹಿತಿಯನ್ನೂ ರಾಜ್ಯ ಸರ್ಕಾರವಾಗಲಿ ಅಥವಾ ಕೇಂದ್ರದ ತಂಡವಾಗಲಿ ಬಹಿರಂಗವಾಗಿ ಹಂಚಿಕೊಂಡಿಲ್ಲ. ಕೇಂದ್ರ ತಂಡವು ಈ ಹಿಂದೆ ಮೂರು ಪ್ರದೇಶಗಳಲ್ಲಿ ಸರ್ವೇ ಮಾಡಿದ ಸಂದರ್ಭದಲ್ಲಿ ಭಾರೀ ಗದ್ದಲ ಸೃಷ್ಟಿಯಾಗಿತ್ತು.
ಅಲ್ಲದೇ ರಾಜ್ಯ ಕಾಂಗ್ರೆಸ್ ಸರ್ಕಾರದ ಕೆಲವು ಪ್ರಭಾವಿ ಸಚಿವರೇ ಇಲ್ಲಿ ಬೇಡ ಅಥವಾ ಅಲ್ಲಿ ಬೇಡ ಎನ್ನುವ ವಾದಗಳನ್ನು ಮಾಡಿದ್ದರು. ಇದೀಗ ಈ ಎಲ್ಲಾ ಕಾರಣಗಳಿಗೆ ಸದ್ದಿಲ್ಲದೇ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾಗಡಿ ಭಾಗದಲ್ಲಿ ಸರ್ವೇ ನಡೆದಿದೆ.
ಈ ಹಳ್ಳಿಗಳಿಗೆ ಲಾಭ: ಇನ್ನು ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಈ ಭಾಗದಲ್ಲಿ ನಿರ್ಮಾಣ ಮಾಡಿದರೆ, ಬೆಂಗಳೂರು-ಕುಣಿಗಲ್ ರಾಷ್ಟ್ರೀಯ ಹೆದ್ದಾರಿಯ ಸಮೀಪದ ಚಿಕ್ಕಸೋಲೂರು ಕಲ್ಯಾಣಪುರ,ಗುಡೇಮಾರನಹಳ್ಳಿ, ಬ್ಯಾಲಕೆರೆ, ನಾಗಶೆಟ್ಟಿ ಹಳ್ಳಿ ಹಾಗೂ ಚೀಲೂರು. ಅಲ್ಲದೇ ಮಾಗಡಿಯ ಹರ್ತಿ, ತಿರುಮಲಾಪುರ, ಶಿಡಗದ ಹಳ್ಳಿ, ಬೆಳಗುಂಬ, ಕೊತ್ತಗಾನಹಳ್ಳಿ ಹಾಗೂ ಹೊಸಪಾಳ್ಯ ಭಾಗದ ಆಸ್ತಿದಾರರಿಗೆ ಬಂಪರ್ ಬರಲಿದೆ ಎನ್ನುವ ನಿರೀಕ್ಷೆಯೂ ಇದೆ.
ಡಿ.ಕೆ ಶಿವಕುಮಾರ್‌ಗೆ ಹಿನ್ನಡೆ: ಇನ್ನು ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಹಿನ್ನಡೆ ಆಗುತ್ತಿದೆ. ರಾಮನಗರ ಹಾಗೂ ಬೆಂಗಳೂರು ದಕ್ಷಿಣ ಭಾಗದಲ್ಲಿ ರಿಯಲ್ ಎಸ್ಟೇಟ್‌ಗೆ ಧಮಾಕ ತರಬೇಕು ಎನ್ನುವ ಲೆಕ್ಕಾಚಾರ ಜೋರಾಗಿತ್ತು. ಆದರೆ, ಇದಕ್ಕೆ ಕಾಂಗ್ರೆಸ್‌ನಿಂದಲೇ ವಿರೋಧ ವ್ಯಕ್ತವಾಗಿತ್ತು. ಇದೀಗ ಮತ್ತೊಂದು ಜಾಗ ಶಾರ್ಟ್ ಲಿಸ್ಟ್ ಆಗಿದೆ.












Click it and Unblock the Notifications