ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಲೇಜುಗಳ ವಿರುದ್ಧ ಬೆಂಗಳೂರು ವಿವಿ ಕುಲಪತಿ ಗರಂ

By Kiran B Hegde
|
Google Oneindia Kannada News

ಬೆಂಗಳೂರು, ಡಿ. 13: ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಪ್ರಾಧ್ಯಾಪಕರನ್ನು ಕಳುಹಿಸಲು ಕಾಲೇಜುಗಳು ಆಸಕ್ತಿ ತೋರುತ್ತಿಲ್ಲ. ಇದರಿಂದ ಬೆಂಗಳೂರು ವಿಶ್ವವಿದ್ಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಕಾಲೇಜುಗಳ ಈ ಧೋರಣೆಯನ್ನು ವಿಶ್ವವಿದ್ಯಾಲಯ ಗಂಭೀರವಾಗಿ ಪರಿಗಣಿಸಿದೆ.

ಮೌಲ್ಯಮಾಪನಕ್ಕೆ ಅಧ್ಯಾಪಕರನ್ನು ಕಳುಹಿಸದ ಕಾಲೇಜುಗಳಿಗೆ ಬೆಂಗಳೂರು ವಿವಿಯ ಸಂಯೋಜನಾ ನವೀಕರಣಕ್ಕೆ ಸ್ಥಳೀಯ ವಿಚಾರಣಾ ಸಮಿತಿ ಕಳುಹಿಸುವುದಿಲ್ಲ. ಈ ಕಾಲೇಜುಗಳ ಫಲಿತಾಂಶವನ್ನೂ ತಡೆಹಿಡಿಯಲಾಗುವುದೆಂದು ಕುಲಪತಿ ಪ್ರೊ. ಬಿ. ತಿಮ್ಮೇಗೌಡ ಎಚ್ಚರಿಕೆ ನೀಡಿದ್ದಾರೆ.

university

ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಸಿಂಡಿಕೇಟ್ ಸಭೆ ಬಳಿಕ ಪತ್ರಕರ್ತರೊಂದಿಗೆ ಈ ವಿಷಯ ತಿಳಿಸಿದರು.

1,500 ಮೌಲ್ಯಮಾಪಕರ ಕೊರತೆ: ಮೌಲ್ಯಮಾಪನಕ್ಕೆ ಪ್ರತಿ ಬಾರಿ ಸುಮಾರು 5000 ಮೌಲ್ಯಮೌಪಕರು ಬೇಕು. ಈ ಬಾರಿ ಕೇವಲ 3,500 ಜನ ಮಾತ್ರ ಮೌಲ್ಯಮಾಪನ ನಡೆಸುತ್ತಿದ್ದಾರೆ. ಈ ಕೊರತೆಯಿಂದ ಫಲಿತಾಂಶ ಬರುವುದು ತಡವಾಗುತ್ತಿದೆ. ಆದ್ದರಿಂದ ಮೌಲ್ಯಮಾಪನ ಕಳುಹಿಸದ ಕಾಲೇಜುಗಳ ಸಂಯೋಜನೆ ಹಾಗೂ ಸಂಜೋಯನೆ ನವೀಕರಣ ನೀಡಲು ಎಲ್ಐಸಿ ಸಮಿತಿ ಕಳುಹಿಸುವುದಿಲ್ಲ ಎಂದು ಪ್ರೊ. ತಿಮ್ಮೇಗೌಡ ಸ್ಪಷ್ಟಪಡಿಸಿದ್ದಾರೆ.

ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ಬಿಎಂಟಿಸಿ ಡಿಪೋ ಸ್ಥಾಪನೆಗೆ 3 ಎಕರೆ, ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರಕ್ಕೆ 2 ಎಕರೆ ಹಾಗೂ ಎನ್‌ಸಿಸಿ ಭವನಕ್ಕೆ 2 ಎಕರೆ ಸ್ಥಳ ನೀಡಲಾಗುವುದು ಎಂದು ತಿಳಿಸಿದರು.

English summary
Bangalore University Chancellor Pro. B Timmegowda told that we are facing shortage of 1,500 exam evaluaters. We requested to colleges to send professors from colleges. But they did not respond. We will not send Local Inquiry Committee to these colleges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X