ಶೀಘ್ರದಲ್ಲೇ ತಲೆಎತ್ತಲಿದೆ ಜಿಂದಾಲ್ ಸ್ಕೂಲ್ ಆಫ್ ಎಕನಾಮಿಕ್ಸ್
ಬೆಂಗಳೂರು, ಅಕ್ಟೋಬರ್, 14 : ಡಾ. ಸೀತಾರಾಮ್ ಜಿಂದಾಲ್ ಸ್ಕೂಲ್ ಆಫ್ ಎಕನಾಮಿಕ್ಸ್ ಸ್ಥಾಪನೆಗೆ ಬೆಂಗಳೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸಭೆ ಅಕ್ಟೋಬರ್ 13ರ ಮಂಗಳವಾರದಂದು ಅನುಮೋದನೆ ನೀಡಿದೆ.
ಸಿಂಡಿಕೇಟ್ ಸಭೆ ಮುಗಿದ ಬಳಿಕ ಮಾತನಾಡಿದ ಬೆಂಗಳೂರು ವಿವಿ ಕುಲಪತಿ ತಿಮ್ಮೇಗೌಡ ಅರ್ಥಶಾಸ್ತ್ರ ಶಾಲೆಯಲ್ಲಿ 5 ವರ್ಷದ ಕೋರ್ಸ್ ಆರಂಭಿಸಲಾಗುತ್ತದೆ. 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರಲು ಅನುಕೂಲವಾಗುವ 2 ಹಾಸ್ಟೆಲ್ ಗಳನ್ನು ತೆರೆಯಲಾಗುತ್ತದೆ ಎಂದರು.[ಮಾಂಸ ಮಾರುವವನ ಮಗಳಿಗೆ ಆರು ಚಿನ್ನದ ಪದಕ!]

ಏನಿದು ಯೋಜನೆ :
ಉದ್ಯಮಿ ಸೀತಾರಾಂ ಜಿಂದಾಲ್ ಹೆಸರಿನಲ್ಲಿ ಜಿಂದಾಲ್ ಸಂಸ್ಥೆಯು 100 ಕೋಟಿ ವೆಚ್ಚದಲ್ಲಿ ಜ್ಞಾನಭಾರತಿ ಆವರಣದಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಸ್ಥಾಪಿಸಲು ನಿರ್ಧಾರ ಮಾಡಿದೆ. ಆಡಳಿತ ಮಂಡಳಿಯಲ್ಲಿ ಬೆಂಗಳೂರು ವಿವಿ ಪ್ರತಿನಿಧಿಯೊಬ್ಬರಿಗೆ ಅವಕಾಶ ಮಾಡಿಕೊಡಲಾಗುವುದು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲು ಮುಂದಾಗಿದೆ.
ಹಾಸ್ಟೆಲ್ ದುರಸ್ತಿ ಕಾರ್ಯಕ್ಕಾಗಿ 95.21 ಲಕ್ಷ ರೂ, ವಿದ್ಯಾರ್ಥಿನಿಯರ ಹಾಸ್ಟೆಲ್ ಕೊಠಡಿಗಳ ಸಂಖ್ಯೆ ಹೆಚ್ಚಿಸಲು 55.99 ಲಕ್ಷ ರೂ, ದೈಹಿಕ ಶಿಕ್ಷಣ ವಿದ್ಯಾರ್ಥಿಗಳ ಹಾಸ್ಟೆಲ್ ರಿಪೇರಿಗಾಗಿ 46.04 ಲಕ್ಷ ರೂ ಬಿಡುಗಡೆಗೊಳಿಸಲು ಸಭೆ ತೀರ್ಮಾನ ತೆಗೆದುಕೊಂಡಿದೆ ಎಂದು ಪ್ರೋ. ತಿಮ್ಮೇಗೌಡ ತಿಳಿಸಿದರು












Click it and Unblock the Notifications