ಪರೀಕ್ಷೆ ಹಿಂದೂಡಿಕೆ! ಬೆಂಗಳೂರು ವಿವಿಯಿಂದ ಇದೆಂಥ ಶೋಷಣೆ?
ಬೆಂಗಳೂರು, ಜೂನ್ 10: ಪರೀಕ್ಷೆಗಳನ್ನು ಮುಂದೂಡುವ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಆದರೆ ಏಕಾಏಕಿ ಪರೀಕ್ಷೆಗಳನ್ನು ಹಿಂದೂಡುವ ಬಗ್ಗೆ ಕೇಳಿದ್ದೀರಾ?
ಹೌದು, ಅಂಥದೊಂದು ವಿವಾದಾತ್ಮಕ ನಡೆಗೆ ಬೆಂಗಳೂರು ವಿಶ್ವವಿದ್ಯಾಲಯ ನಾಂದಿ ಹಾಡಿದೆ. ಇಲ್ಲಿ ಜುಲೈ 12 ರಿಂದ ನಡೆಯಬೇಕಿದ್ದ ಸ್ನಾತಕೋತ್ತರ ತರಗತಿಯ ಪರೀಕ್ಷೆಗಳನ್ನು ಜೂನ್ 28 ರಿಂದಲೇ ಆರಂಭಿಸುವುದಾಗಿ ಧಿಡೀರ್ ನಿರ್ಧಾರ ಪ್ರಕಟಿಸಿರುವ ವಿಶ್ವವಿದ್ಯಾಲಯದ ನಡೆಗೆ ವಿದ್ಯಾರ್ಥಿ ಸಮೂಹದಿಂದ ಅಸಮಾಧಾನ ವ್ಯಕ್ತವಾಗಿದೆ.

ಹಳೇ ವೇಳಾಪಟ್ಟಿಯಂತೇ ಪರೀಕ್ಷೆ ನಡೆಸಬೇಕೆಂದು ವಿದ್ಯಾರ್ಥಿಗಳು ವಿವಿಯ ಉಪಕುಲಪತಿ ಡಾ.ಜಗದೀಶ್ ಪ್ರಕಾಶ್ ಅವರಲ್ಲಿ ಮನವಿಮಾಡಿಕೊಂಡಿದ್ದು, ವಿವಿ ತನ್ನ ನಿರ್ಧಾರವನ್ನು ಸಡಿಲಿಸಿ ಮತ್ತೆ ಹಳೇ ವೇಳಾಪಟ್ಟಿಯಂತೆಯೇ ಪರೀಕ್ಷೆ ನಡೆಸಲು ಮುಂದಾಗುತ್ತದಾ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications