ಬೆಂಗಳೂರಿನಲ್ಲಿ ಮತ್ತೊಂದು ಸಿಗ್ನಲ್ ರಹಿತ ಕಾರಿಡಾರ್

ಬೆಂಗಳೂರು, ಸೆ.28: ನಿರಂತರ ಸಂಚಾರ ದಟ್ಟಣೆಯಿಂದ ಬಳಲುತ್ತಿರುವ ಬೆಂಗಳೂರಿಗೆ ಶುಭ ಸುದ್ದಿಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೀಡಿದ್ದಾರೆ. ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ವೈಟ್ ಫೀಲ್ಡ್ ತನಕ ಸಿಗ್ನಲ್ ರಹಿತ ಕಾರಿಡಾರ್ ಸ್ಥಾಪನೆಗೆ ಸರ್ಕಾರ ಮುಂದಾಗಿದೆ.

ಹಳೆ ವಿಮಾನ ನಿಲ್ದಾಣ(ಎಚ್ಎಎಲ್)ದಿಂದ ವೈಟ್‌ಫೀಲ್ಡ್‌ಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿರುವ ಕುಂದಲಹಳ್ಳಿ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಅಧಿಕವಾಗಿದ್ದು, ಈ ಭಾಗದ ನಾಗರಿಕರು, ಕೈಗಾರಿಕಾ ಪ್ರದೇಶದ ಸಿಬ್ಬಂದಿಗಳಿಂದ ನಿರಂತರವಾಗಿ ದೂರುಗಳು ಕೇಳಿ ಬಂದಿವೆ. ಇದಕ್ಕೆ ಪರಿಹಾರ ರೂಪವಾಗಿ ಈ ಭಾಗದಲ್ಲಿ ಅಗತ್ಯವಿರುವ ಕಡೆ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ಪ್ರಾರಂಭಿಸ ಲಾಗುವುದು. ಮುಂದಿನ 18 ತಿಂಗಳಲ್ಲಿ 17 ಕಿ.ಮೀ ಉದ್ದದ ರಸ್ತೆಯನ್ನು ಸಿಗ್ನಲ್ ರಹಿತ ಕಾರಿಡಾರನ್ನಾಗಿ ಮಾಡಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾ ಉಸ್ತು ವಾರಿ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.

ಬಿಬಿಎಂಪಿಯ ಮಹದೇವಪುರ ವಲಯದ ವ್ಯಾಪ್ತಿಯಲ್ಲಿ ಮೇಯರ್ ಎನ್.ಶಾಂತಕುಮಾರಿ, ಉಪಮೇಯರ್ ಕೆ.ರಂಗಣ್ಣ, ಕೆ.ಆರ್.ಪುರ ಶಾಸಕ ಭೈರತಿ ಬಸವರಾಜ್ ಹಾಗೂ ಸ್ಥಳೀಯ ಪಾಲಿಕೆಯ ಸದಸ್ಯರೊಂದಿಗೆ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಕೈಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕುಂದಲಹಳ್ಳಿ ಜಂಕ್ಷನ್ ರಸ್ತೆಗಳು ಹಾಳಾಗಿವೆ

ಕುಂದಲಹಳ್ಳಿ ಜಂಕ್ಷನ್ ರಸ್ತೆಗಳು ಹಾಳಾಗಿವೆ

ಕುಂದಲಹಳ್ಳಿ, ಐಟಿಪಿಎಲ್ ಮತ್ತು ವೈಟ್‌ಫೀಲ್ಡ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ಸಂಚಾರ ತೀವ್ರವಾಗಿರುವುದರಿಂದ ಹಾಗೂ ರಸ್ತೆಗಳು ಬಹಳ ಹಾಳಾಗಿವೆ. 46 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 40 ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಈ ರಸ್ತೆಗಳ ಅಭಿವೃದ್ಧಿ ಕೆಲಸ ಮುಂದಿನ ಸಾಲಿನ ಏಪ್ರಿಲ್‌ನೊಳಗಾಗಿ ಪೂರ್ಣಗೊಳಿಸಲು ಸಚಿವ ರಾಮಲಿಂಗಾ ರೆಡ್ಡಿ ಆದೇಶ ನೀಡಿದರು.

ಹೊರಮಾವು ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಸ್ಥಳ ಪರಿಶೀಲನೆ ನಡೆಸಿದರು, ಲೆವೆಲ್ ಕ್ರಾ ಸಿಂಗ್ ಇರುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳಲು ಎಂಜಿನಿಯರ್‌ಗಳಿಗೆ ಸೂಚನೆ ನೀಡಿದರು.

ಮಳೆ ಜೊತೆಗೆ ಕಸದ ಸಮಸ್ಯೆ ಬಗೆಹರಿಸಬೇಕಿದೆ

ಮಳೆ ಜೊತೆಗೆ ಕಸದ ಸಮಸ್ಯೆ ಬಗೆಹರಿಸಬೇಕಿದೆ

ಅಲ್ಲಲ್ಲಿ ಕಸದ ಮತ್ತು ಮಣ್ಣಿನ ರಾಶಿ ಮತ್ತು ರಸ್ತೆಗಳಲ್ಲಿ ಗುಂಡಿ ಬಿದ್ದಿರುವುದನ್ನು ಗಮನಿಸಿದ ಅವರು, ಗುಂಡಿ ಮುಚ್ಚುವ ಕಾರ್ಯ ತೀವ್ರಗೊಳಿಸಲು ಮತ್ತು ಕಸದ ರಾಶಿ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಜಂಟಿ ಆಯುಕ್ತರಿಗೆ ಸೂಚಿಸಿದರು.

ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸದೆ ಇರುವುದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಂಬಂಧಪಟ್ಟ ಇಂಜಿನಿಯರ್ ಗಳಿಗೆ ದಂಡ ವಿಧಿಸಲು ಸೂಚಿಸಿದರು.

ನಂತರ, ಶಾಸಕರು, ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ವಾರ್ಡ್‌ಗಳಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ತಕ್ಷಣವೆ ಪ್ರಾರಂಭಿಸಬೇಕು ಮತ್ತು ಪ್ರಸಕ್ತ ಸಾಲಿನ ಪಿಒಡಬ್ಲು ಕಾಮಗಾರಿಗಳಿಗೆ ಅನುಮೋದನೆ ಪಡೆದು ಒಂದು ತಿಂಗಳಲ್ಲಿ ಟೆಂಡರ್ ಆಹ್ವಾನಿಸಲು ಸೂಚಿಸಿದರು.

ಬೆಂಗಳೂರು ರೌಂಡ್ಸ್ ಹೆಚ್ಚಾಗಲಿ

ಬೆಂಗಳೂರು ರೌಂಡ್ಸ್ ಹೆಚ್ಚಾಗಲಿ

ಸಚಿವರು ಹಾಗೂ ಮೇಯರ್ ಅವರ ಬೆಂಗಳೂರು ರೌಂಡ್ಸ್ ಇದೇ ರೀತಿ ಹೆಚ್ಚಾಗಲಿ ಎಂಬ ಮಾತು ಕೇಳಿ ಬಂದಿದೆ. ಸಚಿವ ರಾಮಲಿಂಗಾರೆಡ್ಡಿ ಅವರ ಜೊತೆ ಪರಿಶೀಲನೆಗೆ ಮೇಯರ್ ಶಾಂತಕುಮಾರಿ ಅಲ್ಲದೆ ಪಾಲಿಕೆ ಸದಸ್ಯರಾದ ಉದಯಕುಮಾರ್, ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ರೆಡ್ಡಿ, ಎಚ್.ಎಸ್.ಅಮಾನುಲ್ಲಾ, ಆಯುಕ್ತ ಎಂ. ಲಕ್ಷ್ಮೀನಾರಾಯಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಎಸ್.ನಾರಾಯಣಸ್ವಾಮಿ, ಪ್ರಸಾದ್‌ರೆಡ್ಡಿ, ಕೆ.ಸಿ. ಬೀರಪ್ಪ, ಅಂತೋಣಿಸ್ವಾಮಿ ಸೇರಿದಂತೆ ಇನ್ನಿತರರಿದ್ದರು.

ಬಿಬಿಎಂಪಿಗೆ ಹೊಸ ಕಾರ್ಯಪಡೆ ಸೇರ್ಪಡೆ

ಬಿಬಿಎಂಪಿಗೆ ಹೊಸ ಕಾರ್ಯಪಡೆ ಸೇರ್ಪಡೆ

ಬೆಂಗಳೂರಿನ ಮಳೆ ಅನಾಹುತ ತಡೆಗೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಹೊಸ ಕಾರ್ಯಪಡೆ ರಚಿಸಲು ಸರ್ಕಾರ ನಿರ್ಧರಿಸಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ಹೊರಮಾವು, ತಂಬುಚೆಟ್ಟಿಪಾಳ್ಯ ದಿಂದ ಕೆ.ಆರ್.ಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ನಗರೋತ್ಥಾನ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಲು ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+