ಬೆಂಗಳೂರು ಗಾಂಧಿನಗರದಲ್ಲಿ ಭದ್ರಾವತಿ ವಂಚಕಿಯರು!

ಬೆಂಗಳೂರು, ಸೆ. 22 : ಇವರ ಊರು ಭದ್ರಾವತಿ, ಕಾರ್ಯಕ್ಷೇತ್ರ ಬೆಂಗಳೂರಿನ ಗಾಂಧಿನಗರ. ಹಾಗೆಂದ ಮಾತ್ರಕ್ಕೆ ಇವರು ಯಾವ ಸಿನಿಮಾ ನಿರ್ಮಾಣ ಮಾಡುವವರಲ್ಲ. ಆದರೆ ಸಿನಿಮೀಯ ರೀತಿಯಲ್ಲಿ ವಂಚನೆ ಮಾಡುವವರು.

ಕಷ್ಟದಲ್ಲಿರುವ ಹೆಂಗಸರ ಮೇಲೆ ಗಂಡಸರು ತೋರಿಸುವ ಅನುಕಂಪವೇ ಬಂಡವಾಳ. ನಯವಾದ ಮಾತೇ ಮಾರ್ಕೆಟಿಂಗ್‌ ಕೌಶಲ್ಯ, ಚಾಣಾಕ್ಷತನವೇ ಮಾರಾಟದ ಸರಕು. ಹೆಂಗಸರು ಕಷ್ಟದಲ್ಲಿದ್ದಾರೆ ಎಂದು ಸಹಾಯ ಮಾಡಲು ಮುಂದಾಗುವ ಗಂಡಸರೆ ಇವರ ಟಾರ್ಗೆಟ್‌.(ಮೆಡಿಕಲ್‌ ಸೀಟು ನಂಬಿದವರಿಗೆ 1.34 ಕೋಟಿ ಪಂಗನಾಮ)

bangalore

ಸಹಾಯ ಮಾಡುತ್ತೇನೆ ಎಂದು ಕರೆಯುವವರನ್ನು ಯಾಮಾರಿಸಿ ಎಲ್ಲ ಸ್ವತ್ತನ್ನು ಕೊಂಡೊಯ್ಯುತ್ತಿದ್ದ 'ಜಾಣೆಯರು' ಈಗ ಉಪ್ಪಾರಪೇಟೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಭದ್ರಾವತಿ ಮೂಲದ ರೇಣುಕಾ, ಭಾರತಿ ಮತ್ತು ಸೀಮಾ ಎಂಬುವರನ್ನು ಬಂಧಿಸಲಾಗಿದೆ. ಯಾವುದಾದರೂ ರೀತಿಯಲ್ಲಿ ಗಂಡಸರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ 'ಮಹಿಳಾಮಣಿಗಳು' ನಾವು ಕಷ್ಟದಲ್ಲಿದ್ದೇನೆ. ನಮ್ಮ ತಂದೆಗೆ ಆರೋಗ್ಯ ಸರಿಯಿಲ್ಲ ಈ ರೀತಿ ಹೇಳುತ್ತಾ ಗಂಡಸರಿಂದ ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದರು.

ಇವರ ಮಾತನ್ನು ನಂಬಿ ಎಲ್ಲಿಗಾದರೂ ಬರಲು ಹೇಳಿದರೆ ತಂಪು ಪಾನೀಯದಲ್ಲಿ ಮತ್ತು ಬರಿಸುವ ಔಷಧ ಹಾಕಿ ಕೈಗೆ ಸಿಕ್ಕ ಹಣ, ಮೊಬೈಲ್‌ ಎಲ್ಲವನ್ನು ದೋಚಿ ಪರಾರಿಯಾಗುತ್ತಿದ್ದರು. ನಂತರ ದೋಚಿದ ಮಾಲನ್ನು ಸಮನಾಗಿ ಹಂಚಿಕೊಳ್ಳುತ್ತಿದ್ದರು.(ಉಡುಪಿ: ಶಾಸಕರಿಗೆ ಟೋಪಿ ಹಾಕಿದ ವಿದ್ಯಾರ್ಥಿ‌ಗಳು)

ವಂಚಕಿಯರು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರಲಿಲ್ಲ. ಹಣದ ಅಗತ್ಯ ಬಿದ್ದಾಗಲೆಲ್ಲ ರೈಲು ಹತ್ತಿ ಸೀದಾ ಮೆಜೆಸ್ಟಿಕ್‌ಗೆ ಬಂದಿಳಿಯುತ್ತಿದ್ದರು. ಅಲ್ಲಿ ಸಿಕ್ಕ ಯಾರನ್ನಾದರೂ ಪರಿಚಯ ಮಾಡಿಕೊಂಡು ಕಷ್ಟದಲ್ಲಿರುವಂತೆ ನಟಿಸುತ್ತಿದ್ದರು. ಶಿವಮೊಗ್ಗ, ಮಂಡ್ಯ ಮತ್ತು ಆಂಧ್ರ ಮೂಲದ ವ್ಯಕ್ತಿಗಳನ್ನು ವಂಚಿಸಿರುವುದು ಸದ್ಯ ಬೆಳಕಿಗೆ ಬಂದಿದೆ.

ರೆಡ್ಡಿಗೆ ವಂಚನೆ ಮಾಡಿದ್ದು ಹೇಗೆ?
ಆರೋಪಿಗಳ ಪೈಕಿ ಒಬ್ಬಳಾದ ಸೀಮಾಗೆ ಮೊದಲಿನಿಂದ ಪರಿಚಯವಿದ್ದ ಆಂಧ್ರ ಪ್ರದೇಶ ಮೂಲದ ಅದೋನಿಯ ಸಂಜೀವ್‌ ರೆಡ್ಡಿ ಸೆಪ್ಟಂಬರ್‌ 5 ರಂದು ಬೆಂಗಳೂರಿಗೆ ಬಂದಿದ್ದರು. ಇದೆ ವೇಳೆ ವಂಚಕಿಯರು ಆತನಿಗೆ ಕರೆಮಾಡಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಕಾಟನ್‌ ಪೇಟೆಯ ಲಾಡ್ಜ್‌ವೊಂದರಲ್ಲಿ ತಂಗಿದ್ದು ಅಲ್ಲಿಗೆ ಬರುವಂತೆ ಹೇಳಿದ್ದಾರೆ. ಅದರಂತೆ ಸ್ಥಳಕ್ಕೆ ತೆರಳಿದ ವಂಚಕಿಯರು ಆತನ ಬಳಿಯಿದ್ದ ಚಿನ್ನ ಮತ್ತು ನಗದನ್ನು ದೋಚಿದ್ದಾರೆ.

ಬಲೆಗೆ ಬಿದ್ದಿದ್ದು ಹೇಗೆ?
ಮಹಿಳೆಯರಿಂದ ವಂಚನೆಗೊಳಗಾದ ರೆಡ್ಡಿ ಊರಿಗೆ ತೆರಳಿದ್ದಾರೆ, ನಂತರ ಮಹಿಳೆಯರು ತನ್ನನ್ನು ಬ್ಲಾಕ್‌ ಮೇಲ್‌ ಮಾಡಬಹುದು ಎಂಬ ಭಯದಿಂದ ಉಪ್ಪಾರಪೇಟೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ರೇಣುಕಾ ಮುಖ ಚಹರೆ ಗುರುತು ಹಚ್ಚಿದ ಉಪ್ಪಾರಪೇಟೆ ಠಾಣೆ ಇನ್ಸ್‌ ಪೆಕ್ಟರ್‌ ಪ್ರಕಾಶ್‌ ನೇತೃತ್ವದ ತಂಡ ಸೆ, 19 ರಂದು ಆಕೆಯನ್ನು ಬಂಧಿಸಿದೆ. ರೇಣುಕಾ ಪತಿ ಸಾವಿಗೀಡಾಗಿದ್ದು ಆಕೆಗೆ ಇಬ್ಬರು ಮಕ್ಕಳಿದ್ದಾರೆ. ವಿಚಾರಣೆಯಿಂದ ಇನ್ನಷ್ಟು ವಂಚನೆ ಪ್ರಕರಣಗಳು ಬಯಲಿಗೆ ಬರಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+