ತಿಂಗಳೊಳಗೆ ವಾರ್ಡ್ ಸಮಿತಿ ರಚಿಸಲು ಬಿಬಿಎಂಪಿಗೆ ಕೋರ್ಟ್ ಸೂಚನೆ

ಬೆಂಗಳೂರು, ಮೇ 4: ನ್ಯಾ. ಅಶೋಕ್ ಹಿಂಚಿಗೇರಿ ಮತ್ತು ನ್ಯಾ. ಕೆ.ಎಸ್.ಮುದ್ಗಲ್ ವಾರ್ಡ್ ಸಮಿತಿ ರಚನೆಗೆ ಗರಿಷ್ಠ ಒಂದು ತಿಂಗಳ ಸಮಯಾವಕಾಶ ನೀಡಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನಿರ್ದೇಶಿಸಿದ್ದಾರೆ. ಈ ಆದೇಶವನ್ನು ತಪ್ಪದೆ ಪಾಲಿಸಬೇಕು ಎಂದು ಕೂಡ ಹೇಳಿದ್ದಾರೆ.

ಈ ಹಿಂದೆ ನೀಡಿದ ಹಲವು ಆದೇಶವನ್ನು ಪಾಲಿಸದೆ ವಾರ್ಡ್ ಸಮಿತಿ ರಚಿಸದಿರುವ ಕ್ರಮಕ್ಕೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಸಂವಿಧಾನದ 74ನೇ ತಿದ್ದುಪಡಿ (ನಗರಪಾಲಿಕೆ) ಕಾಯ್ದೆ 1992ರ ಪ್ರಕಾರ ಸಾಂವಿಧಾನಿಕವಾಗಿ ಕಡ್ಡಾಯವಾದ ವಾರ್ಡ್ ಸಮಿತಿ ರಚನೆಗೆ ನಡೆಯುತ್ತಿದ್ದ ಹೋರಾಟಕ್ಕೆ ಫಲ ಸಿಕ್ಕಿದೆ.

BBMP

ಈ ಸೂಚನೆಯು ರಾಜ್ಯದಾದ್ಯಂತ ಇರುವ ಸ್ಥಳಿಯ ಸಂಸ್ಥೆಗಳ ಮೇಲೆ ಕೂಡ ಪರಿಣಾಮ ಬೀರಲಿದೆ. ಹೌದು, ವಾರ್ಡ್ ಸಮಿತಿ ರಚನೆಯಿಂದ ಏನು ಪ್ರಯೋಜನ ಅನ್ನೋದಾದರೆ, ಸಾರ್ವಜನಿಕರು ವಾರ್ಡ್ ಕಚೇರಿಗೆ ಹಾಗೂ ಕಾರ್ಪೋರೇಟರ್ ವರೆಗೆ ದೂರು ಒಯ್ಯುವ ಮುನ್ನ ತಮ್ಮ ಅಹವಾಲನ್ನು ಈ ಸಮಿತಿಗೆ ನೀಡಬಹುದು.

ಬಿಬಿಎಂಪಿಯಿಂದ ಪದೇಪದೇ ಕರ್ನಾಟಕ ಹೈಕೋರ್ಟ್ ನ ಸೂಚನೆಯು ಉಲ್ಲಂಘನೆಯಾಗುತ್ತಿದೆ ಎಂಬ ಅರ್ಜಿ ಸಲ್ಲಿಸಲಾಗಿತ್ತು. ಅದರ ಆಧಾರದ ಮೇಲೆ ಈ ಆದೇಶ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+