• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೌರತ್ವ ಕಾಯ್ದೆ: ಬಂಧಿತರಿಗೆ ಬಿರಿಯಾನಿ, ಪ್ರತಿಭಟಿಸಿದವರಿಗೆ ಕಡಲೆಪುರಿ

|

ಬೆಂಗಳೂರು, ಡಿಸೆಂಬರ್.19: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಕೂಡ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದಲ್ಲಿ ನಿಷೇಧಾಜ್ಞೆ ಘೋಷಿಸಿದ ಸರ್ಕಾರದ ಕ್ರಮ ಪ್ರತಿಭಟನಾಕಾರರ ಸಿಟ್ಟನ್ನು ನೆತ್ತಿಗೇರಿಸಿದೆ.

ನಗರದ ಮೈಸೂರು ಬ್ಯಾಂಕ್ ವೃತ್ತ ಹಾಗೂ ಟೌನ್ ಹಾಲ್ ಬಳಿ ನೆರೆದ ನೂರಾರು ಮಂದಿ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆ ಕಾವೇರುತ್ತಿದ್ದಂತೆ ಎಚ್ಚೆತ್ತ ಪೊಲೀಸರು 100ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು.

ಇನ್ನು, ನಗರದ ವಿವಿಧಡೆಯಲ್ಲಿ ಪ್ರತಿಭಟನೆ ನಡೆಸಲು ಮುಂದಾದ ನೂರಕ್ಕೂ ಹೆಚ್ಚು ಜನರನ್ನು ಬಂಧಿಸಿದ ಪೊಲೀಸರು ಎಲ್ಲರನ್ನೂ ಒಂದು ಕಡೆಗೆ ಕೂಡಿ ಹಾಕಿದರು. ಮಧ್ಯಾಹ್ನದ ವೇಳೆಗೆ ಎಲ್ಲ ಬಂಧಿತರಿಗೆ ಪೊಲೀಸರೇ ಬಿಸಿ ಬಿಸಿ ಬಿರಿಯಾನಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅತ್ತ ಬಿಸಿಬಿಸಿ ಬಿರಿಯಾನಿ, ಇತ್ತ ಕರುಂ ಕುರುಂ ಕಡಲೆಪುರಿ!

ಒಂದೆಡೆ ಪೊಲೀಸರು ಬಂಧಿತರೆಲ್ಲರಿಗೂ ಬಿಸಿ ಬಿಸಿ ಬಿರಿಯಾನಿ ನೀಡಿದರು. ಇನ್ನೊಂದೆಡೆ ಟೌನ್ ಹಾಲ್ ಬಳಿ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರಿಗೆ ನದೀಮ್ ಪಾಶಾ ಎಂಬುವವರು ಉಚಿತವಾಗಿ ಕಡಲೆಪುರಿಯನ್ನು ನೀಡಿದ್ದಾರೆ.

ಪ್ರಧಾನಿ ವಿರುದ್ಧ ಮಾತನಾಡಿದ್ದಕ್ಕೆ ವಕೀಲೆಯನ್ನು ಬಂಧಿಸಿದರಾ?

ಇದರ ಮಧ್ಯೆ ನಗರ ಟೌನ್ ಹಾಲ್ ಬಳಿ ವಕೀಲೆಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಹಾಗೂ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಗೆ ಮುಂದಾದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ವಕೀಲೆಯನ್ನು ಬಂಧಿಸಿ ಕರೆದೊಯ್ದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

English summary
Citizenship Amendment Act: Bangalore Police Serving Biriyani To Detained Protesters?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X