ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ: ಎಚ್‌ಡಿಡಿ ಕನಸು ಈಡೇರಿದೆ- ಬಿಜೆಪಿ ಟ್ವೀಟ್
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ನಿರ್ಮಾಣ ವಿಚಾರವಾಗಿ ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡ ಅವರನ್ನು ಬಿಜೆಪಿ ಟೀಕಿಸಿದೆ. ಎಚ್ ಡಿ ದೇವೇಗೌಡ ಅವರು 30-35 ವರ್ಷಗಳ ಹಿಂದೆ ಕಂಡಿದ್ದ ಕನಸನ್ನು ಕೇವಲ ಐದೇ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನನಸಾಗಿಸಿದ್ದಾರೆ ಎಂದು ಬಿಜೆಪಿ ಸರಣಿ ಟ್ವೀಟ್ ಮಾಡಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದವನ್ನು ಬಿಜೆಪಿ ತಿಳಿಸಿದೆ.
ಮೂರು ದಶಕ ಹಿಂದಿನ ರಸ್ತೆ ರಿಪೇರಿ ಕಾರ್ಯವನ್ನೇ ಜನತಾದಳ ಪಕ್ಷ ಈಗ ಹೇಳಿಕೊಳ್ಳುತ್ತಿದೆ. ಮುಖ್ಯಮಂತ್ರಿಯಾಗಿದ್ದಾಗ ಹೆಚ್‌ಡಿ ಕುಮಾರಸ್ವಾಮಿ ರಾಜ್ಯವನ್ನು ಅಭಿವೃದ್ಧಿ ಮಾಡಲಿಲ್ಲ. 2018ರಲ್ಲಿ ಆರಂಭವಾದ ಬೆಂಗಳೂರು ಮೈಸೂರು ಹೆದ್ದಾರಿ ಕೂಡ ತಮ್ಮ ಪಕ್ಷದ್ದೇ ಸಾಧನೆ ಎನ್ನುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಸನ್ಮಾನ್ಯ ಎಚ್ ಡಿ ದೇವೇಗೌಡ ಅವರನ್ನೂ ಸೇರಿ ರಾಜ್ಯದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳ ಕನಸು ಕಂಡ ಹಲವರಿದ್ದಾರೆ. ಅವರೆಲ್ಲರ ಕನಸುಗಳನ್ನೂ ಡಬಲ್ ಎಂಜಿನ್ ಸರ್ಕಾರ ನನಸು ಮಾಡುತ್ತಿದೆ. ಹಾಗಾಗಿ ಈ ಬಾರಿ ಎಚ್ ಡಿ ಕುಮಾರಸ್ವಾಮಿ ಅವರೇ ಬಿಜೆಪಿಗೆ ಮತ ನೀಡಿದರೂ ಅದು ಅಚ್ಚರಿಯ ಸುದ್ದಿಯಲ್ಲ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ರಾಜ್ಯದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳ ಕನಸು ಕಂಡ ಹಲವರಿದ್ದಾರೆ. ಅವರೆಲ್ಲರ ಕನಸುಗಳನ್ನೂ ಡಬಲ್ ಎಂಜಿನ್ ಸರ್ಕಾರ ನನಸು ಮಾಡುತ್ತಿದೆ. ಸನ್ಮಾನ್ಯ @H_D_Devegowda ಅವರದ್ದನ್ನೂ ಸೇರಿಸಿ. ಹಾಗಾಗಿ ಈ ಬಾರಿ @hd_kumaraswamy ಅವರೇ ಬಿಜೆಪಿಗೆ ಮತ ನೀಡಿದರೂ ಅದು ಅಚ್ಚರಿಯ ಸುದ್ದಿಯಲ್ಲ.#ModiHawainMandya #JDSDynasty
— BJP Karnataka (@BJP4Karnataka) March 11, 2023
3/3

ಪ್ರಧಾನಿ ನರೇಂದ್ರ ಮೋದಿ ಅವರು ಮಾ.12ರಂದು ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ವೇ ಉದ್ಘಾಟಿಸಲಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ಬರೋಕೆ ಕೆಲವೊಮ್ಮೆ 3 ಗಂಟೆಗೂ ಜಾಸ್ತಿ ಟೈಂ ಬೇಕಾಗ್ತಿತ್ತು. ದಸರಾ ಸಮಯದಲ್ಲಂತೂ ಬೆಂಗಳೂರಿನಿಂದ ಮೈಸೂರಿಗೆ ಹೋಗಿ ಬರೋದು ದೊಡ್ಡ ಸವಾಲಿನ ಕೆಲಸವಾಗ್ತಿತ್ತು. ವೀಕೆಂಡ್‌ಗಳಲ್ಲೂ ಟ್ರಾಫಿಕ್ ಅಬ್ಬರ ಕಡಿಮೆ ಇರಲಿಲ್ಲ. ಆದ್ರೆ ಈಗ ವಿಶಾಲವಾದ 10 ಲೇನ್ ರೋಡ್ ರೆಡಿ ಆಗಿದೆ. ಒಂದೂವರೆ ಗಂಟೆಯಲ್ಲೇ ಪ್ರಯಾಣ ಮುಗಿಸಬಹುದಾಗಿದೆ.












Click it and Unblock the Notifications