ವಿಶ್ವ ಬ್ರೈನ್ ಬೀ: ಬೆಂಗಳೂರು ಬಾಲಕಿ ಅಂತಿಮ ಸುತ್ತಿಗೆ

bangalore-gayathri-wins-brain-bee-to-compete-in-intl-brain-bee-finale
ಬೆಂಗಳೂರು, ಏ.28: ಜಾಗತಿಕ ಮಟ್ಟದ ಬ್ರೈನ್ ಬೀ (Brain Bee) ಸ್ಪರ್ಧೆಯಲ್ಲಿ ಬೆಂಗಳೂರಿನ ಹದಿಹರೆಯದ ಬಾಲಕಿಯೊಬ್ಬಳು ಅಂತಿಮ ಸುತ್ತು ಪ್ರವೇಶಿಸಿದಿದ್ದಾರೆ. 17 ವರ್ಷದ ಗಾಯತ್ರಿ ಮುತ್ತುಕುಮಾರ್ ಈ ಸಾಧನೆ ಮಾಡಿರುವ ಬಾಲಕಿ.

ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಭಾನುವಾರ ನಡೆದ 7ನೇ ಅಖಿಲ ಭಾರತ ಬ್ರೈನ್ ಬೀ ಸ್ಪರ್ಧೆಯಲ್ಲಿ ತನ್ನ ಬುದ್ಧಿಮತ್ತೆಯನ್ನು ಯಶಸ್ವಿಯಾಗಿ ಸಾದರ ಪಡಿಸಿದಳು. 16ನೇ International Brain Bee ಫೈನಲ್ಸ್ ವಾಷಿಂಗ್ಟನ್ ಡಿಸಿಯಲ್ಲಿ ಆಗಸ್ಟ್ 7 ರಿಂದ 14ರವರೆಗೂ ನಡೆಯಲಿದೆ.

ಖ್ಯಾತ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಐದು ಮಂದಿ ನುರಿತ ವೈದ್ಯರು Parkinsons, Spinocerebellar ataxia, Huntington's disease, major depression ಮತ್ತು amnesia ಕಾಯಿಲೆಗಳ ರೋಗ ಲಕ್ಷಣಗಳನ್ನು ಅಭಿನಯದ ಮೂಲಕ ಪ್ರಸ್ತುತ ಪಡಿಸಿದರು. ಅದಕ್ಕೆ ಗಾಯತ್ರಿ ಎಲ್ಲರೂ ಅವಾಕ್ಕಾಗುವಂತೆ ಕರಾರುವಕ್ಕಾದ ಉತ್ತರ ನೀಡಿ, ಸೈ ಅನಿಸಿಕೊಂಡಳು. ತತ್ಫಲವಾಗಿ ಜಾಗತಿಕ ಮಟ್ಟದ ಬ್ರೈನ್ ಬೀ ಸ್ಪರ್ಧೆಯ ಅಂತಿಮ ಸುತ್ತು ಪ್ರವೇಶಿಸಿದರು.

ಬ್ರೈನ್ ಬೀ ಸ್ಪರ್ಧೆ ಅಂದರೆ ಜೀವಶಾಸ್ತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡಲು ಉತ್ಸುಕರಾಗಿದ್ದರೆ ಅವರಿಗಾಗಿ ನಡೆಸುವ ವಿಶೇಷ ಸ್ಪರ್ಧೆಯಾಗಿದೆ. ನರಮಂಡಲ ವಿಜ್ಞಾನದಲ್ಲಿ ಈ ಕ್ವಿಜ್ ನಡೆಸಲಾಗುತ್ತದೆ. ಕ್ವಿಜ್ ಹಂತದಲ್ಲಿ ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಬೇಕಾಗುತ್ತದೆ. ಆನಂತರ ಜೀವಶಾಸ್ತ್ರದ ಮಾದರಿಗಳನ್ನು ಗುರುತಿಸಬೇಕಾಗುತ್ತದೆ.

ಅಂದಹಾಗೆ ಗಾಯತ್ರಿ, ಇಂದಿರಾ ನಗರದಲ್ಲಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲಿನಲ್ಲಿ 11 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನನಗೆ ವಿಜ್ಞಾನದಲ್ಲಿ ಭದ್ರ ಬುನಾದಿ ದೊರೆಯಿತು. ಚಿಕ್ಕಂದಿನಲ್ಲಿ ಕೆಲವು ಅತ್ಯುತ್ತಮ ಸಂಗ್ರಹಾಲಯಗಳಿಗೆ ಭೇಟಿ ನೀಡಿದೆ. ಅದು ವಿಜ್ಞಾನದಲ್ಲಿ ನನ್ನ ಆಸಕ್ತಿಯನ್ನು ಹೆಚ್ಚಿಸಿತು' ಅನ್ನುತ್ತಾಳೆ ಗಾಯತ್ರಿ. ಗಾಯತ್ರಿ ಅವರ ತಂದೆ ಇಂಜಿನಿಯರ್ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+