ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀವು ಓಡಾಡುವ ಬೆಂಗಳೂರಿನ ರಸ್ತೆಗಳು ಸರಿಯಿಲ್ಲವೇ? ಈ ಆ್ಯಪ್‌ನಲ್ಲಿ ದೂರು ನೀಡಿ, ಪರಿಹಾರ ಪಡೆಯಿರಿ

|
Google Oneindia Kannada News

ಬೆಂಗಳೂರು, ಜನವರಿ 19: ನೀವು ಓಡಾಡುವ ರಸ್ತೆಗಳು ಸರಿ ಇಲ್ಲವೇ? ಹಾಗಾದರೆ, ಬಿಬಿಎಂಪಿ ನಿಮಗೊಂದು ಆ್ಯಪ್‌ ಸಿದ್ದಪಡಿಸಿದೆ. ಈ ಆ್ಯಪ್‌ನ ಹೆಸರು 'Fix My Street'. ಇದು ಗೂಗಲ್‌ ಪ್ಲೆಸ್ಟೋರ್‌ನಲ್ಲಿ ಲಭ್ಯವಿದೆ. ಈ ಆ್ಯಪ್‌ ಶುರುವಾಗಿ ಈಗ 15 ದಿನಗಳಾಯಿತು.

'ಫಿಕ್ಸ್ ಮೈ ಸ್ಟ್ರೀಟ್' ಅಪ್ಲಿಕೇಶನ್ 15 ದಿನಗಳಲ್ಲಿ ಸುಮಾರು 2.5 ಸಾವಿರ ದೂರುಗಳನ್ನು ಪಡೆದಿದೆ ಎಂದು ಬಿಬಿಎಂಪಿ ಅಧಿಕಾರಿಗಳು 'ಡೆಕ್ಕನ್‌ ಹೆರಾಲ್ಡ್‌'ಗೆ ಮಾಹಿತಿ ನೀಡಿದ್ದಾರೆ.

ನಗರದಾದ್ಯಂತ ರಸ್ತೆ ಗುಂಡಿಗಳ ಕುರಿತು ವರದಿ ಮಾಡಲು ಸಾರ್ವಜನಿಕರಿಗೆ ಬಿಡುಗಡೆ ಮಾಡಲಾದ 'ಫಿಕ್ಸ್ ಮೈ ಸ್ಟ್ರೀಟ್' ಅಪ್ಲಿಕೇಶನ್ ಕೇವಲ 15 ದಿನಗಳಲ್ಲಿ 2,500 ದೂರುಗಳನ್ನು ಸ್ವೀಕರಿಸಿದೆ.

Bangalore BBMP ‘Fix My Street’ app gets around 2.5k complaints in 15 days

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳ ಪ್ರಕಾರ, ಸಾರ್ವಜನಿಕರಿಂದ ಬಂದ 2,500 ದೂರುಗಳಲ್ಲಿ 1,500 ಪರಿಹರಿಸಲಾಗಿದೆ. 'ಕೆಲವು ಪುನರಾವರ್ತಿತ ದೂರುಗಳಿವೆ. ನಾವು ಅವುಗಳನ್ನು ಫಿಲ್ಟರ್ ಮಾಡಬೇಕಿದೆ. ಸದ್ಯಕ್ಕೆ 815 ದೂರುಗಳನ್ನು ಮಾತ್ರ ಸರಿಪಡಿಸಬೇಕಿದೆ' ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿ ಎಸ್ ಪ್ರಹ್ಲಾದ್ ತಿಳಿಸಿದ್ದಾರೆ.

ಒಟ್ಟಾರೆಯಾಗಿ, ಮೇ 2022 ರಿಂದ, ಈ ಅಪ್ಲಿಕೇಶನ್‌ನಲ್ಲಿ ಒಟ್ಟು 40,000 ರಸ್ತೆ ಗುಂಡಿಗಳ ಬಗ್ಗೆ ವರದಿಯಾಗಿವೆ.

Bangalore BBMP ‘Fix My Street’ app gets around 2.5k complaints in 15 days

ಆ್ಯಪ್‌ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. ದೂರುಗಳನ್ನು ನೀಡುತ್ತಿರುವ ನಾಗರಿಕರು ಆ್ಯಪ್‌ನಲ್ಲಿ ಕೆಲವು ತಾಂತ್ರಿಕ ದೋಷಗಳಿವೆ ಎಂದು ತಿಳಿಸಿದ್ದಾರೆ.

'ನಾನು ಅಪ್ಲಿಕೇಶನ್‌ನಲ್ಲಿ ಕೆಲವು ಗುಂಡಿಗಳ ಬಗ್ಗೆ ದೂರು ನೀಡಿದ್ದೇನೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಸಮಸ್ಯೆ ಬಗೆಹರಿದಿದೆಯೇ ಎಂದು ನಂತರ ಪರಿಶೀಲಿಸಲು ನನಗೆ ಸಾಧ್ಯವಾಗಲಿಲ್ಲ. ಅಪ್ಲಿಕೇಶನ್ ಅನ್ನು ಸುಧಾರಿಸಬೇಕಾಗಿದೆ. ಬಳಕೆದಾರರು ತಮ್ಮ ದೂರಿನ ಸ್ಥಿತಿಯ ಬಗ್ಗೆ ಅಪ್‌ಡೇಟ್ ಮಾಡಬೇಕಾಗಿದೆ' ಎಂದು ಆಶಿಶ್ ಕೆ ತಿಳಿಸಿದ್ದಾರೆ. ಇದು ಪ್ರಾರಂಭವಾದ ನಂತರ ಅಪ್ಲಿಕೇಶನ್‌ನಲ್ಲಿ ಕನಿಷ್ಠ 10 ಪಾಟ್‌ಹೋಲ್‌ಗಳ ಬಗ್ಗೆ ದೂರು ನೀಡಿದ್ದೇನೆ ಅವರು ತಿಳಿಸಿದ್ದಾರೆ.

Bangalore BBMP ‘Fix My Street’ app gets around 2.5k complaints in 15 days

ಇಂತಹ ಲೋಪದೋಷಗಳನ್ನು ಪರಿಶೀಲಿಸಿ ಬಳಕೆದಾರರ ಅನುಭವವನ್ನು ಸುಧಾರಿಸುವುದಾಗಿ ಬಿಬಿಎಂಪಿ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಬೆಂಗಳೂರಿನ ರಸ್ತೆಗಳಲ್ಲಿ ಸಾವಿರಾರು ಗುಂಡಿಗಳು ಬಿದ್ದಿರುವ ವರದಿಯಾಗಿದೆ. ಈ ಗುಂಡಿಗಳು ವಾಹನ ಸವಾರರ ಪ್ರಾಣಗಳನ್ನೂ ಬಲಿ ಪಡೆದಿವೆ. ಬೆಂಗಳೂರಿನ ರಸ್ತೆಗಳ ಬಗ್ಗೆ ವಾಹನ ಸವಾರರು ಹಲವಾರು ಬಾರಿ ದೂರು ನೀಡಿದ್ದರೂ, ಬಿಬಿಎಂಪಿ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಬಿಬಿಎಂಪಿ ಆದಷ್ಟೂ ಬೇಗನೇ ಇದನ್ನು ಸರಿ ಪಡಿಸಬೇಕಿದೆ.

English summary
The ‘Fix My Street’ app launched to the public to report potholes across the city, has received close to 2,500 complaints in just 15 days,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X