ಶಾಲಾ ಬಾಲಕಿ ಅಪಘಾತವಾಗಿದ್ದ ಬೈಕ್ ನಂಬರ್ ಪ್ಲೇಟ್ ಚೇಂಜ್! ತನಿಖೆಯಲ್ಲಿ ಏನಾಯ್ತು?
ಬೆಂಗಳೂರು, ಆಗಸ್ಟ್ 18: ಮನೆಯಲ್ಲಿರುವ ಬೈಕ್ ನಮ್ಮದಾದಾರೂ ಕೆಲವೊಮ್ಮೆ ನಂಬರ್ ಪ್ಲೇಟ್ ಬದಲಾಯಿಸಿ ವಾಹನಗಳನ್ನು ಚಾಲನೆ ಮಾಡಲಾಗುತ್ತದೆ. ಸಂಚಾರಿ ಪೊಲೀಸರಿಂದ ದಂಡವನ್ನು ತಪ್ಪಿಸಿಕೊಳ್ಳಲೋ ಇಲ್ಲವೇ ಕದ್ದ ಬೈಕನ್ನು ಓಡಿಸಲೋ ಈ ಮಾರ್ಗವನ್ನು ಕೆಲವರು ಕಂಡಿ ಹಿಡಿದುಕೊಂಡಿದ್ದಾರೆ. ನಂಬರ್ ಪ್ಲೇಟ್ ಬದಲಾಯಿಸಿದರಿಂದ ಉಂಟಾದ ಮಹಾ ದುರಂತದ ವಿವರ ಇಲ್ಲಿದೆ.
ಮೇ 26ರಂದು ದೇವೇಗೌಡ ಪೆಟ್ರೋಲ್ ಬಂಕ್ ಬಳಿಯಲ್ಲಿ ಶಾಲಾ ವಾಹನವೊಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಶಾಲಾ ವಾಹನದ ಅಪಘಾತದಿಂದ ಎಸ್‌ಎಲ್‌ಎಲ್‌ಸಿ ವಿದ್ಯಾರ್ಥಿನಿ ಕೀರ್ತನಾ ಎಂಬಾಕೆ ಸಾವನ್ನಪ್ಪಿದ್ದಳು. ಈ ಅಪಘಾತದ ತನಿಖೆಯನ್ನು ನಡೆಸುತ್ತಿದ್ದ ಬನಶಂಕರಿ ಸಂಚಾರಿ ಪೊಲೀಸರಿಗೆ ಮಹತ್ವದ ವಿಚಾರ ತಿಳಿದು ಬಂದಿದೆ. ಅಪಘಾತವಾದ ಬೈಕ್ ನಂಬರ್ ಪ್ಲೇಟ್ ಅನ್ನೇ ಬದಲಾಯಿಸಲಾಗಿತ್ತು.
ಕೀರ್ತನಾ ತಂದೆ ಮಹಾರಾಷ್ಟ್ರ ರಿಜಿಸ್ಟ್ರೇಷನ್ ನಂಬರಿನ ದ್ವಿಚಕ್ರವಾಹನವನ್ನು ಪೊಲೀಸರ ಹರಾಜು ಪ್ರಕ್ರಿಯೆಯಲ್ಲಿ ತೆಗೆದುಕೊಂಡಿದ್ದರು. ಆದರೆ ಹಾರಾಜಿನಲ್ಲಿ ತೆಗೆದುಕೊಂಡಿದ್ದ ವಾಹನವನ್ನು ಕರ್ನಾಟಕದ ಹೆಸರಿನಲ್ಲಿ ರಿಜಿಸ್ಟ್ರೇಷನ್ ಆಗಿರಲಿಲ್ಲ. ಕರ್ನಾಟಕದಲ್ಲಿ ಮಹಾರಾಷ್ಟ್ರ ರಿಜಿಸ್ಟ್ರೇಷನ್ ಗಾಡಿಯನ್ನು ಓಡಿಸಿದರೇ ಸಂಚಾರಿ ಪೊಲೀಸರು ಹಿಡಿಯುತ್ತಾರೆ ಅನ್ನೋ ಕಾರಣಕ್ಕೆ ಕರ್ನಾಟಕದ ನಂಬರ್ ಪ್ಲೇಟ್ ಹಾಕಿ ದ್ವಿಚಕ್ರ ವಾಹನ ಓಡಿಸುತ್ತಿದ್ದರು. ಇದೇ ದ್ವಿಚಕ್ರ ವಾಹನ ಅಪಘಾತವಾಗಿ ಕೀರ್ತನ ಸಾವನ್ನಪ್ಪದ್ದಳು.

ಕೀರ್ತನಾ ಹೋಗುತ್ತಿದ್ದ ಬೈಕ್ ನಂಬರ್ ಪ್ಲೇಟ್ ಚೇಂಜ್
ಮೇ 26ರಂದು ದೇವೇಗೌಡ ಪೆಟ್ರೋಲ್ ಬಂಕ್ ಬಳಿಯಲ್ಲಿ ನಡೆದ ಅಪಘಾತದಲ್ಲಿ ಕೀರ್ತನಾ ಎಂಬ ಮುದ್ದಾದ ಬಾಲಕಿ ಸಾವನ್ನಪ್ಪಿದ್ದಳು. ಶಾಲಾ ವಾಹನ ಚಾಲಕನ ನಿರ್ಲಕ್ಷ್ಯಕ್ಕೆ 10ನೇ ತರಗತಿ ವಿದ್ಯಾರ್ಥಿನಿ ಕೀರ್ತನಾ ಸಾವನ್ನಪ್ಪಿದ್ದಳು. ಬನಶಂಕರಿ ಸಂಚಾರಿ ಪೊಲೀಸರು ತನಿಖೆಯನ್ನು ಕೈಗೊಂಡ ವೇಳೆಯಲ್ಲಿ ಬೈಕ್‌ನ ನಂಬರ್ ಪ್ಲೇಟ್ ಬದಲಾಗಿರೋದು ತಿಳಿದುಬಂದಿದೆ. ಅಸಲಿಗೆ ಆ ನಂಬರ್ ನ ವಿವಿರ ಸಿಗದಿದ್ದಾಗ ಕೀರ್ತನಾ ತಂದೆಯನ್ನು ಕರೆದು ಬೈಕ್‌ನ ಮಾಹಿತಿಯನ್ನು ಕೇಳಿದಾಗಲೇ ಬೈಕ್ ನಂಬರ್ ಪ್ಲೇಟ್ ಬದಲಾಗಿರುವುದು ತಿಳಿದುಬಂದಿದೆ.

ಬೈಕ್ ಡಾಕ್ಯುಮೆಂಟ್ ರೆಡಿ ಮಾಡಿಕೊಳ್ಳದೆ ನಿರ್ಲಕ್ಷ್ಯ
ಬೈಕ್ ಅನ್ನು ಕೀರ್ತನಾ ತಂದೆ ಪೊಲೀಸರು ಬೈಕ್‌ಗಳನ್ನು ಹಾರಾಜು ಹಾಕುವ ಪ್ರಕ್ರಿಯೆಯಲ್ಲಿ ಖರೀದಿಯನ್ನು ಮಾಡಿದ್ದ. ಬೈಕ್ ಖರೀದಿಯನ್ನು ಮಾಡಿದ ಬಳಿಕ ದಾಖಲಾತಿಗಳನ್ನ ವರ್ಗಾವಣೆ ಮಾಡದೆ ನಿರ್ಲಕ್ಷ್ಯವನ್ನು ವಹಿಸಿದ್ದರು. MH-31 BX-8023 ನೋಂದಣಿಯ ಬೈಕ್ ಖರೀದಿಸಲಾಗಿತ್ತು. ಹೊರರಾಜ್ಯ ಬೈಕ್ ನಗರದಲ್ಲಿ ಓಡಿಸಿದರೆ ದಾಖಲಾತಿ ಸಮಸ್ಯೆಯಾಗುತ್ತದೆ ಎಂದ ಭಾವಿಸಿದ್ದ. ಇದರ ಜೊತೆಗೆ ಟ್ರಾಫಿಕ್ ಪೊಲೀಸರು ಬೈಕ್ ಹಿಡಿಯಬಹುದು ಎಂದು ನಕಲಿ ನಂಬರ್ ಪ್ಲೇಟ್ ಬಳಕೆ ಮಾಡುತ್ತಿದ್ದ. KA-04 HE-5475 ನೋಂದಣಿಯ ನಂಬರ್ ಬಳಸಿ ಬೈಕ್ ಸವಾರಿಯನ್ನು ಮಾಡುತ್ತಿದ್ದ. ಬೈಕ್ ಅಪಘಾತದ ಬಳಿಕ ಸತ್ಯಾಂಶ ತಿಳಿದ ಸಂಚಾರಿ ಪೊಲೀಸರು ನಕಲಿ ನಂಬರ್ ಪ್ಲೇಟ್ ಬಳಸಿದ್ದಕ್ಕೆ ಕೀರ್ತನಾ ತಂದೆಯ ವಿರುದ್ದ ಕೇಸನ್ನು ದಾಖಲಿಸಲಾಗಿದೆ.

ನಕಲಿ ನಂಬರ್ ಪ್ಲೇಟ್ , ಬೇರೆ ನಂಬರ್ ಪ್ಲೇಟ್ ಬಳಕೆ
ನಗರದಲ್ಲಿ ಸಂಚಾರಿ ಪೊಲೀಸರು ಮಹತ್ವದ ಕಾರ್ಯಾಚರಣೆಯನ್ನು ಮಾಡುವ ಸಮಯದಲ್ಲಿ ಸಂಚಾರಿ ಪೊಲೀಸರ ದಂಡವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಹಲವು ಜನ ನಂಬರ್ ಪ್ಲೇಟ್ ದುರ್ಬಳಕೆಗೆ ಮಾಡುತ್ತಿರುವುದು ತಿಳಿದು ಬಂದಿದೆ. ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಓಡಾಡುವುದು, ಬೇರೆ ಯಾವುದೋ ನಂಬರ್ ಪ್ಲೇಟ್ ಬಳಕೆ ಮಾಡಿಕೊಂಡು ಓಡಾಡುತ್ತಿರುವುದು ತಿಳಿದು ಬಂದಿದೆ.

ನಾಲ್ಕು ಕೇಸ್ ಅಪಘಾತದಿಂದ ಪತ್ತೆ
"ಪಶ್ಚಿಮ ವಿಭಾಗದ ಸಂಚಾರಿ ಪೊಲೀಸರು ಕಾರ್ಯಾಚರಣೆಯನ್ನು ನಡೆಸಿದ ವೇಳೆಯಲ್ಲಿ 12 ನಕಲಿ ನಂಬರ್ ಪ್ಲೇಟ್ ಪ್ರಕರಣ ದಾಖಲಾಗಿದೆ. 12ರಲ್ಲಿ 4 ಪ್ರಕರಣಗಳು ಅಪಘಾತದಿಂದ ಪತ್ತೆಯಾಗಿದೆ. ಸಂಚಾರಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಪರಾದ ಎಸಗಲು ನಂಬರ್ ಪ್ಲೇಟ್ ಬದಲಾಯಿಸಲಾಗುತ್ತದೆ. ನಂಬರ್ ಪ್ಲೇಟ್ ಬದಲಾಯಿಸಿರೋದು ಕಂಡು ಬಂದರೆ ಅಂಥವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಬನಶಂಕರಿ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತದ ಬೈಕ್ ನಂಬರ್ ಪ್ಲೇಟ್ ಸಹ ಬದಲಾಯಿಸಲಾಗಿತ್ತು. ಅವರ ವಿರುದ್ದವೂ ಕಾನೂನು ಕ್ರಮ ಕೈಗೊಳ್ಳಲಾಗಿದೆ" ಎಂದು ಡಿಸಿಪಿ ಕುಲದೀಪ್ ಜೈನ್ ತಿಳಿಸಿದ್ದಾರೆ.
-
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ -
SSLC Hindi Exam: ಮಾರ್ಚ್ 30ರ ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆಗೆ ಹೊಸ ಸಮಸ್ಯೆ: ಪರೀಕ್ಷಾ ಮಂಡಳಿ ಹೇಳಿದ್ದೇನು -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ











Click it and Unblock the Notifications