ಹೊಸ ವರ್ಷಕ್ಕೆ ದರ ಏರಿಕೆ; ಜನವರಿ 1ರಿಂದ ಹಾಲಿನ ದರ ಹೆಚ್ಚಳ
ಬೆಂಗಳೂರು, ಡಿಸೆಂಬರ್ 19 : ದರ ಏರಿಕೆ ಮೂಲಕ ಜನರು ಹೊಸ ವರ್ಷವನ್ನು ಸ್ವಾಗತಿಸಬೇಕು. ಜನವರಿ 1ರಿಂದ ಹಾಲಿನ ದರವನನ್ನು ಹೆಚ್ಚಳ ಮಾಡಲಾಗುತ್ತದೆ ಎಂದು ಬಮೂಲ್ ಹೇಳಿದೆ.
ಹೌದು, ಬೆಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಜನವರಿ 1ರಿಂದ ಹಾಲಿನ ದರ ಹೆಚ್ಚಳ ಮಾಡುವುದಾಗಿ ಹೇಳಿದೆ. ಆದರೆ, ಎಷ್ಟು ಹೆಚ್ಚಾಗಲಿದೆ? ಎಂಬ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ.
ಬೆಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಬಮೂಲ್) ವ್ಯಾಪ್ತಿಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳು ಸೇರುತ್ತವೆ.

"ಬೆಂಗಳೂರು ಸಹಕಾರಿ ಹಾಲು ಒಕ್ಕೂಟ ಹಾಲಿನ ದರವನ್ನು ಜನವರಿ 1 ರಿಂದ ಹೆಚ್ಚಳ ಮಾಡಲಾಗುತ್ತದೆ" ಎಂದು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಹೇಳಿದರು.
ಬೆಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ರೈತರಿಗೆ ದೇಶಿ ತಳಿಯ ಹಸುಗಳನ್ನು ವಿತರಣೆ ಮಾಡುತ್ತಿದೆ. ದೇಶಿ ತಳಿಯ ಹಸುವಿನ ನಿರ್ವಹಣೆ ಸುಲಭವಾಗಿದ್ದು, ರೈತರಿಗೆ ಸಹಾಯಕವಾಗಲಿದೆ. ಅವರು ಹೆಚ್ಚಿನ ಲಾಭವನ್ನು ಸಹಗಳಿಸಬಹುದಾಗಿದೆ.
ಮೊದಲ ಹಂತದಲ್ಲಿ ಮಾಗಡಿ ತಾಲೂಕಿಗೆ 21 ಹಸುಗಳು ಬಂದಿವೆ. ಒಂದು ಹಸುವಿನ ಬೆಲೆ 80 ಸಾವಿರ. 40 ಸಾವಿರವನ್ನು ರೈತರು ಪಾವತಿ ಮಾಡಿದರೆ, ಉಳಿದ 40 ಸಾವಿರ ಹಣವನ್ನು ಬಮೂಲ್ ಭರಿಸಲಿದೆ. ಹೊರ ರಾಜ್ಯದಿಂದ ತರಿಸಿರುವ ಈ ಹಸು 10 ರಿಂದ 15 ಲೀಟರ್ ಹಾಲು ನೀಡುತ್ತದೆ.












Click it and Unblock the Notifications