ನಿಮ್ಮ ಬಗ್ಗೆ ನಿಮ್ಮ ಸಂಸದರೇ ಬರೆದ ಪುಸ್ತಕ ಓದಿ ಜನಾರ್ದನ ರೆಡ್ಡಿ: ಸಿದ್ದರಾಮಯ್ಯ ಬಿಟ್ಟ ಬಾಣ

Recommended Video

      ಜನಾರ್ದನ ರೆಡ್ಡಿ ಗೆ ಟ್ವೀಟ್ಟರ್ ನಲ್ಲಿ ತಿರುಗೇಟು ನಿಡಿದ ಸಿದ್ದರಾಮಯ್ಯ | Oneindia Kannada

      ಬೆಂಗಳೂರು, ಅಕ್ಟೋಬರ್ 29: ಸಿದ್ದರಾಮಯ್ಯ ತಮ್ಮ ಬದುಕಿನ ನಾಲ್ಕು ಅಮೂಲ್ಯ ವರ್ಷಗಳನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಿದರು. ಸತತವಾಗಿ ತಮ್ಮ ಮತ್ತು ತಮ್ಮ ಸಂಬಂಧಿಕರ ಮನೆಗಳ ಮೇಲೆ ದಾಳಿ ಮಾಡಿದರೂ ಅವರಿಗೆ ಅಕ್ರಮ ಹಣ ಪತ್ತೆಯಾಗಿರಲಿಲ್ಲ ಎಂದು ಆರೋಪ ಮಾಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸಿದ್ದರಾಮಯ್ಯ ವ್ಯಂಗ್ಯದ ಬಾಣ ತೂರಿದ್ದಾರೆ.

      ಪತ್ರಿಕಾಗೋಷ್ಠಿಯಲ್ಲಿ ಜನಾರ್ದನ ರೆಡ್ಡಿ ಮಾಡಿರುವ ಸುದೀರ್ಘ ಆರೋಪಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ಟರ್‌ನಲ್ಲಿ ಒಂದೇ ಒಂದು ಬಾಣ ಹಾರಿಸಿದ್ದಾರೆ.

      ಬಿಜೆಪಿ ಸಂಸದ ಪ್ರತಾಪ್ ಸಿಂಹ, ಪಕ್ಷ ಸೇರ್ಪಡೆಯಾಗಿ ಸ್ಪರ್ಧಿಸುವುದಕ್ಕೂ ಮುನ್ನ ಪತ್ರಕರ್ತರಾಗಿದ್ದಾಗ ಬರೆದ ಪುಸ್ತಕವನ್ನೇ ಸಿದ್ದರಾಮಯ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ.

      ದೇಶದೆಲ್ಲೆಡೆ ತೀವ್ರ ಬಿರುಗಾಳಿ ಎಬ್ಬಿಸಿದ್ದ ಬಳ್ಳಾರಿ ಗಣಿ ಹಗರಣಗಳ ಕುರಿತಾಗಿ ಜನಾರ್ದನ ರೆಡ್ಡಿ ಅವರನ್ನು ಕೇಂದ್ರವಾಗಿಟ್ಟುಕೊಂಡು 'ಮೈನಿಂಗ್ ಮಾಫಿಯಾ: ಇವರಾರು ಗೊತ್ತೇನು, ಇವರ ಕಥೆ ಹೇಳಲೇನು?' ಎಂಬ ಶೀರ್ಷಿಕೆಯ ಪುಸ್ತಕವನ್ನು ಪ್ರತಾಪ್ ಸಿಂಹ ಬರೆದಿದ್ದರು.

      ಆ ಪುಸ್ತಕ ಮತ್ತು ಅದರ ಕುರಿತು ಪ್ರತಾಪ್ ಸಿಂಹ 2012ರಲ್ಲಿ ಮಾಡಿದ್ದ ಟ್ವೀಟ್‌ಅನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ.

      ಜೈಲಿಗೆ ಹೋಗುವ ಪಾಪ ಏನು?

      ಆ ಪುಸ್ತಕದ ಮುಖ ಪುಟವನ್ನು ಟ್ವಿಟ್ಟರ್‌ನಲ್ಲಿ ಹಾಕಿರುವ ಸಿದ್ದರಾಮಯ್ಯ, 'ಸಿದ್ದರಾಮಯ್ಯನವರು ಅನ್ಯಾಯವಾಗಿ ತನ್ನನ್ನು ನಾಲ್ಕು ವರ್ಷ ಜೈಲಿಗೆ ಹಾಕಿಸಿದ್ದರು ಎಂದು ಕಣ್ಣೀರು ಹಾಕುತ್ತಿರುವ ಜನಾರ್ಧನ ರೆಡ್ಡಿಯವರೇ, ದಯವಿಟ್ಟು ನಿಮ್ಮ ಪಕ್ಷದ ಸಂಸದರೇ ಬರೆದಿದ್ದ ಈ ಪುಸ್ತಕ ಓದಿ. ಜೈಲಿಗೆ ಹೋಗುವ ಪಾಪ ಏನು ಮಾಡಿದ್ದೀರಿ ಎಂದು ಗೊತ್ತಾಗುತ್ತೆ' ಎಂದು ಲೇವಡಿ ಮಾಡಿದ್ದಾರೆ.

      ನಿಮ್ಮ ಗೆಳೆಯ ಪ್ರತಾಪ್ ಸಿಂಹ

      ಪ್ರತಾಪ್ ಸಿಂಹ ಅವರ ಹಳೆಯ ಟ್ವೀಟ್ ಅನ್ನು ಪ್ರಕಟಿಸಿರುವ ಸಿದ್ದರಾಮಯ್ಯ, ಸನ್ಮಾನ್ಯ ಜನಾರ್ಧನ ರೆಡ್ಡಿಯವರೇ, ನೀವು ಜೈಲಲ್ಲಿ‌ ಕೊಳೆಯುವಂತೆ ಮಾಡಿದ್ದು ಯಾರೆಂದು ತಾನು ಬರೆದ ಪುಸ್ತಕದಲ್ಲಿದೆ ಎಂದು ನಿಮ್ಮ ಗೆಳೆಯ ಪ್ರತಾಪಸಿಂಹ‌ ಟ್ವೀಟ್ ಮಾಡಿದ್ದರು. ಗಮನಿಸಿ' ಎಂದು ಟ್ವೀಟ್ ಮಾಡಿದ್ದಾರೆ.

      ಬಿಜೆಪಿ ನೀಡಿದ ಕೊಡುಗೆ ರೆಡ್ಡಿ, ರಾಮುಲು

      ಶ್ರೀರಾಮುಲು ವಿರುದ್ಧವೂ ಹರಿಹಾಯ್ದಿರುವ ಸಿದ್ದರಾಮಯ್ಯ, ಕರ್ನಾಟಕಕ್ಕೆ ಕಾಂಗ್ರೆಸ್ ಸರ್ಕಾರ ಸಾಕಷ್ಟು ಯೋಜನೆಗಳ ಕೊಡುಗೆ ನೀಡಿದೆ. ಆದರೆ, ಬಿಜೆಪಿ ಕರ್ನಾಟಕಕ್ಕೆ ನೀಡಿದ್ದು ಗಣಿ ಲೂಟಿಕೋರರಾದ ಜನಾರ್ಧನ ರೆಡ್ಡಿ ಸೋದರರು ಮತ್ತು ಅವರ ಬೆಂಬಲಕ್ಕೆ ನಿಂತಿರುವ ಶ್ರೀರಾಮುಲು ಅವರನ್ನು ಮಾತ್ರ ಎಂದು ವ್ಯಂಗ್ಯವಾಡಿದ್ದಾರೆ.

      ಕರ್ನಾಟಕಕ್ಕೆ ನಮ್ಮ ಕಾಂಗ್ರೆಸ್ ಸರ್ಕಾರದ ಕೊಡುಗೆ -ಅನ್ನಭಾಗ್ಯ, ಕ್ಷೀರಭಾಗ್ಯ,ವಿದ್ಯಾಸಿರಿ, ಮಾತೃಪೂರ್ಣ, ಕ್ಷೀರಧಾರೆ, ಆರೋಗ್ಯ ಕರ್ನಾಟಕ, ರೈತ ಬೆಳಕು..... ಬಿಜೆಪಿ ಸರ್ಕಾರದ ಕೊಡುಗೆ ಗಣಿಲೂಟಿಕೋರರಾದ ಜನಾರ್ಧನ ರೆಡ್ಡಿ ಸೋದರರು ಮತ್ತು ಅವರ ಬೆಂಬಲಕ್ಕೆ ನಿಂತಿರುವ ಬಂಟ ಶ್ರೀರಾಮುಲು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

      ಚುನಾವಣಾ ಪ್ರಚಾರ

      ಬಳ್ಳಾರಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಪರ ಸಿದ್ದರಾಮಯ್ಯ ಪ್ರಚಾರ ನಡೆಸಿದರು. ಕುರಗೋಡಿನಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಸಿದ್ದರಾಮಯ್ಯ ಪ್ರಚಾರ ಭಾಷಣ ಮಾಡಿದರು. ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಭಾರಿ ಅಂತರದ ಗೆಲುವು ಸಿಗಲಿದೆ ಎಂಬ ವಿಶ್ವಾಸದ ವ್ಯಕ್ತಪಡಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+