A Kahta: ಬಿ ಖಾತಾ ಸ್ವತ್ತುಗಳಿಗೆ ಎ ಖಾತಾ ವಿತರಣೆಗೆ ಮಾರ್ಗಸೂಚಿ ಬಿಡುಗಡೆ: ಆಸ್ತಿ ಮಾಲೀಕರು ಗಮನಿಸಿ
ಬೆಂಗಳೂರು: ಬೆಂಗಳೂರು ನಗರ ಪ್ರದೇಶಗಳಲ್ಲಿ ಅನಿಯಂತ್ರಿತವಾಗಿ ಬೆಳೆಯುತ್ತಿರುವ ಅನಧಿಕೃತ ಬಡಾವಣೆಗಳ ನಿಯಂತ್ರಣಕ್ಕಾಗಿ ಹಾಗೂ ನಾಗರಿಕರ ಹಿತ ಕಾಯಲು ಬಿ-ಖಾತಾಗಳಿಗೆ ಷರತ್ತಿನಡಿ ಎ-ಖಾತಾ ನೀಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಇದೀಗ ಅಧಿಕೃತ ಆದೇಶ ನೀಡಿ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಈ ಹಿಂದೆ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಚಾಲನೆ ನೀಡಿದ್ದ ಸರ್ಕಾರವು ಇದೀಗ ನಿವೇಶನದಾರರಿಗೆ ಸಿಹಿ ಸುದ್ದಿ ನೀಡಿದೆ.
ಸಕ್ಷಮ ಪ್ರಾಧಿಕಾರ ಅಥವಾ ಸಂಸ್ಥೆಗಳಿಂದ ಅನುಮತಿ ಇಲ್ಲದೇ ಅನಧೀಕೃತವಾಗಿ ನಿರ್ಮಿಸಿದ ಬಡಾವಣೆಗಳಲ್ಲಿನ ನಿವೇಶನಗಳಿಗೆ ಮತ್ತು ಕಟ್ಟಡಗಳ ಮಾಲೀಕರಿಗೆ ಈ ಆದೇಶ ಅನ್ವಯಿಸುತ್ತದೆ. ಇಂತಹ ಬಿ-ಖಾತಾ ಹೊಂದಿರುವ ಸ್ವತ್ತುಗಳ ಮಾಲೀಕರಿಗೆ ಷರತ್ತು ಅನ್ವಯ ಎ- ಖಾತಾಗೆ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ ಆದೇಶಿಸಿದೆ.

ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರದ ಬಳಿಕ ಇದೀಗ ಮಾರ್ಗಸೂಚಿ ಹೊರಡಿಸಿದೆ. ಅನುಮತಿ ಇಲ್ಲದೇ ನಿರ್ಮಾಣವಾದ ಬಡಾವಣೆಗಳಲ್ಲಿನ ನಿವೇಶಗಳು, ಆಸ್ತಿಗಳ ಪರಭಾರೆ ವೇಳೆ ಸಾಕಷ್ಟು ತೊಂದರೆ ಆಗುತ್ತಿತ್ತು. ಹೀಗಾಗಿ ಅವುಗಳನ್ನು ಕಾನೂನು ಚೌಕಟ್ಟಿಗೆ ತರಲು, ಇಂತಹ ಅನಧಿಕೃತ ಕಟ್ಟಡಗಳಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಎ-ಖಾತಾ ವಿತರಣೆಗೆ ಮುಂದಾಗಿದೆ. ಇದರಿಂದ ಸ್ಥಳೀಯ ಸಂಸ್ಥೆಗಳ ಆದಾಯವು ವೃದ್ಧಿಯಾಗುತ್ತದೆ. ಆಸ್ತಿಗಳ ಪರಭಾರೆ, ನಿವೇಶನ ದಾಖಲೆ ಪತ್ರಗಳಲ್ಲಿ ಪಾರದರ್ಶಕತೆ ಹಾಗೂ ಕಾನೂನು ವ್ಯಾಪ್ತಿಗೆ ತಂದಂತಾಗುತ್ತದೆ.
ಖಾಲಿ ನಿವೇಶನ, ಈಗಾಗಲೇ ತಲೆತ್ತಿರುವ ಕಟ್ಟಡಗಳು ಹಾಗೂ ಅಪಾರ್ಟ್‌ಮೆಂಟ್‌ಗಳ ಮಾಲೀಕರು ಎ-ಖಾತಾ ಪಡೆಯಲು ಕೆಲವು ಕಡ್ಡಾಯ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ. ನೇರವಾಗಿ ಎ ಖಾತಾ ನೀಡಿದಂತಾಗುತ್ತದೆ. ಈ ಆಸ್ತಿಗಳು ಇರುವ ಜಾಗಕ್ಕೆ ಸಾರ್ವಜನಿಕ ರಸ್ತೆಯ ಸಂಪರ್ಕ ಇರಬೇಕು. ಒಂದು ವೇಳೆ ಖಾಸಗಿ ರಸ್ತೆಯಾಗಿದ್ದರೆ ನಿಯಮಗಳಡಿ ಅದನ್ನು ಕಾಯ್ದೆಗಳಡಿ 'ಸಾರ್ವಜನಿಕ ರಸ್ತೆ' ಎಂದು ಘೋಷಿಸಿಸುವುದು ಕಡ್ಡಾಯವಾಗಿದೆ.
ವಿನ್ಯಾಸದ ಅನುಮೋದನೆ ಕಡ್ಡಾಯ
ಕೃಷಿ ಜಮೀನನ್ನು ವಸತಿ ಅಥವಾ ವಾಣಿಜ್ಯ ಉದ್ದೇಶಕ್ಕೆ (ಕೃಷಿಯೇತರ) ಬಳಸಲು ಭೂಪರಿವರ್ತನೆ ಅಗತ್ಯವಾಗಿದೆ. ಇದಕ್ಕಾಗಿ ಕರ್ನಾಟಕ ಭೂಕಂದಾಯ ಕಾಯ್ದೆಯಡಿ ನಿಗದಿತ ಶುಲ್ಕ ಪಾವತಿಸಿ ಅನುಮತಿ ಪಡೆಯಬೇಕು. ಒಂದು ವೇಳೆ ಜಮೀನು ನಗರದ ಮಾಸ್ಟರ್ ಪ್ಲಾನ್ ವ್ಯಾಪ್ತಿಯಲ್ಲಿದ್ದರೆ, ಜಿಲ್ಲಾಧಿಕಾರಿಗಳ ಅನುಮತಿ ಬೇಕಿಲ್ಲ. ಆದರೆ ಸಂಬಂಧಪಟ್ಟ ಅಭಿವೃದ್ಧಿ ಸಕ್ಷಮ ಪ್ರಾಧಿಕಾರಕ್ಕೆ ಶುಲ್ಕ ಕಟ್ಟಿ ವಿನ್ಯಾಸದ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ.
ಸರ್ಕಾರ ಆದೇಶದಲ್ಲಿ ತಿಳಿಸಿರುವಂತೆ, 2024ರ ಸೆಪ್ಟೆಂಬರ್ 10ಕ್ಕೂ ಮುನ್ನ ನೋಂದಾಣಿ ಪತ್ರಗಳ ಮುಖೇನ ಮಾರಾಟ ಮಾಡಲಾದ ಹಾಗೂ ಉಪ ವಿಭಾಗ ಮಾಡಲಾದ ನಿವೇಶನಗಳು ಎ ಖಾತೆ ಪಡೆಯಲು ಇದೇ ಈ ಮಾರ್ಗಸೂಚಿ ಕಡ್ಡಾಯವಾಗಿದೆ. ವಿನ್ಯಾಸ ಅನಜಮೋದನೆ ಪಡೆದ ಬಳಿಕ ಕರ್ನಾಟಕ ಪೌರಸಭೆಗಳ ಕಾಯ್ದೆ 1964 ಮತ್ತು ಕರ್ನಾಟಕ ಪೌರ ನಿಗಮಗಳ ಕಾಯ್ದೆ 1976 ರ ವಿವಿಧ ಕಲಂ ಅಡಿಯಲ್ಲಿ ಅಧಿಕೃತ 'ಎ ಖಾತಾ' ಪಡೆಯಬಹುದಾಗಿದೆ.
ಖಾತಾ ಸಿಗದೇ ನಾಗರಿಕರಿಗೆ ತೊಂದರೆ
ಸರ್ಕಾರ ಇತ್ತೀಚೆಗೆ ಖಾತಾ ಯೋಜನೆಗಳನ್ನು ಘೋಷಿಸಿದೆ. ಬೆಂಗಳೂರಿನಿಂದ ಗ್ರಾಮೀಣ ಭಾಗದವರೆಗೂ ಎ-ಖಾತಾ, ಇ-ಖಾತಾ ವಿತರಣೆ ಯೋಜನೆ ವಿಸ್ತರಣೆ ಮಾಡಿದೆ. ಆದರೆ ಹೆಮ್ಮಿಗೆಪುರ ಸೇರಿದಂತೆ ಬೆಂಗಳೂರು ಹಾಗೂ ರಾಜ್ಯ ಇತರ ಭಾಗಗಳಲ್ಲಿ ಸಕಾಲಕ್ಕೆ ಅಂದರೆ ನಿಗದಿತ 45 ದಿನಗಳ ಒಳಗೆ ಖಾತಾ ವಿತರಣೆ ಆಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.
-
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
"ಬೆಂಗಳೂರು: 370 ಎಕ್ರೆ ಜಕ್ಕೂರು ವೈಮಾನಿಕ ಶಾಲೆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ಗೆ ಪ್ಲ್ಯಾನ್'' -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications