B Khata: ಬಿ - ಖಾತಾ ನುಡಿದಂತೆ ನಡೆಯದ ಸರ್ಕಾರ, ಆಸ್ತಿದಾರರಿಗೆ ಮತ್ತೆ ಹೊಸ ಸಂಕಷ್ಟ!
B Khata: ಬೆಂಗಳೂರು ಸೇರಿದಂತೆ ಕರ್ನಾಟಕದ ಲಕ್ಷಾಂತರ ಜನ ಬಿ ಖಾತಾ ಹೊಂದಿರುವ ಆಸ್ತಿದಾರರು ಈ ಆಸ್ತಿಯನ್ನು ಮಾರಾಟ ಮಾಡುವುದಕ್ಕೂ ಸಾಧ್ಯವಾಗದೆ, ಮನೆಯನ್ನೂ ನಿರ್ಮಾಣ ಮಾಡಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಬಿ - ಖಾತಾ ಇರುವ ಆಸ್ತಿಗಳನ್ನು ಎ - ಖಾತಾಗೆ ವರ್ಗಾವಣೆ ಮಾಡುವುದು ಹಾಗೂ ಬಿ ಖಾತಾ ಆಸ್ತಿದಾರರಿಗೆ ನಿರಾಳತೆ ಮೂಡಿಸುವುದಾಗಿ ಕರ್ನಾಟಕ ಸರ್ಕಾರವು ಹೇಳಿತ್ತು. ನುಡಿದಂತೆ ನಡೆಯುವ ಸರ್ಕಾರ ಎಂದು ಹೇಳುವ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಈ ವಿಚಾರದಲ್ಲಿ ಮಾತ್ರ ದೃಢ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎನ್ನುವ ಆರೋಪ ಬಿ - ಖಾತಾ ಆಸ್ತಿದಾರರಿಂದ ಕೇಳಿ ಬರುತ್ತಿದೆ.
ರಾಜ್ಯದಲ್ಲಿ ಅಂದಾಜು 30ರಿಂದ 40 ಲಕ್ಷಕ್ಕೂ ಹೆಚ್ಚು ಬಿ - ಖಾತಾ ಆಸ್ತಿಗಳು ಇವೆ ಎಂದು ಅಂದಾಜಿಸಲಾಗಿದೆ. ಆದರೆ ಕಳೆದ ಮೂರು ತಿಂಗಳ ಮುಂದಷ್ಟೇ ಕರ್ನಾಟಕ ಸರ್ಕಾರವು ಯಾವುದೇ ಖಾತೆ ಇಲ್ಲದೆ ಇರುವ, ಅನಧಿಕೃತ ಮತ್ತು ರೆವಿನ್ಯೂ ಆಸ್ತಿಗಳಿಗೆ ಒಂದು ಅವಧಿಗೆ ಬಿ ಖಾತಾ ನೀಡುವುದಕ್ಕೆ ಕರ್ನಾಟಕ ಸರ್ಕಾರ ನಿರ್ಧರಿಸಿತ್ತು. ಅಲ್ಲದೇ ಮೊದಲ ಹಂತದಲ್ಲಿ ಮೂರು ತಿಂಗಳು ಹಾಗೂ ಇದಾದ ಮೇಲೆ ಮೂರು ತಿಂಗಳ ಅವಧಿಗೆ ಬಿ ಖಾತಾ ನೀಡಲಾಗಿದೆ. ಆದರೆ ಬಿ ಖಾತಾ ಇರುವ ಆಸ್ತಿಗಳಿಗೆ ಎ ಖಾತಾ ನೀಡುವುದಾಗಿ ಹೇಳಿದ್ದ ಸರ್ಕಾರ ಈ ವಿಚಾರದಲ್ಲಿ ಯಾವುದೇ ಮಹತ್ವದ ನಿರ್ಧಾರವನ್ನು ಸಹ ತೆಗೆದುಕೊಂಡಿಲ್ಲ.

ಕರ್ನಾಟಕ ಸರ್ಕಾರವು ಬಿ ಖಾತಾ ಸೈಟುಗಳಿಗೆ ಎ ಖಾತಾ ನೀಡುವುದಾಗಿ ಆಗಸ್ಟ್ ತಿಂಗಳಿನಲ್ಲಿಯೇ ಹೇಳಿತ್ತು. ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ನೀಡುವುದಾಗಿ ಕರ್ನಾಟಕ ಸರ್ಕಾರವು ಇದೇ ವರ್ಷ ಆಗಸ್ಟ್ ತಿಂಗಳಿನಲ್ಲಿ ಹೇಳಿತ್ತು. ಆದರೆ, ಬಿ - ಖಾತಾ ಸೈಟು (ಆಸ್ತಿಗಳಿಗೆ) ಎ - ಖಾತಾ ನೀಡುವುದಾಗಿ ಹೇಳಿ, ಮೂರು ತಿಂಗಳುಗಳೇ ಕಳೆದರೂ ಈ ನಿಟ್ಟಿನಲ್ಲಿ ಯಾವುದೇ ಪ್ರಗತಿ ಆಗಿಲ್ಲ. ಇದು ಬಿ - ಖಾತಾ ಆಸ್ತಿ ಹೊಂದಿರುವ ಆಸ್ತಿದಾರರು ಸಂಕಷ್ಟ ಅನುಭವಿಸುವಂತೆ ಆಗಿದೆ.
ಬಿ - ಖಾತಾದಿಂದ ಎ - ಖಾತಾ ಮಾಡಿಸಿಕೊಳ್ಳುವುದಕ್ಕೆ ಕಾಯುತ್ತಿದ್ದ ಲಕ್ಷಾಂತರ ಜನ ಆಸ್ತಿದಾರರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೇ ಇ - ಖಾತಾ ಸೌಲಭ್ಯ ಸಹ ಸಕಾಲದಲ್ಲಿ ಸಿಗದೆ ಇರುವುದು ಸಂಕಷ್ಟ ಹೆಚ್ಚಾಗುವುದಕ್ಕೆ ಕಾರಣವಾಗಿದೆ. ಅಲ್ಲದೇ ಇ - ಖಾತಾ ಸಿಗದೆ ಇರುವುದು ಹಾಗೂ ಬಿ ಖಾತಾ ಗೊಂದಲದಿಂದ 2025ನೇ ಸಾಲಿನಲ್ಲಿ ರಿಯಲ್ ಎಸ್ಟೇಟ್‌ಗೆ ಭಾರೀ ಪೆಟ್ಟು ಬಿದ್ದಂತಾಗಿದೆ. ಆದರೆ ಸರ್ಕಾರ ಮಾತ್ರ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ನೀಡುವ ಬಗ್ಗೆ ಯಾವುದೇ ಮಹತ್ವದ ಅಪ್ಡೇಟ್ಸ್ ನೀಡಿಲ್ಲ ಎಂದು ಆಸ್ತಿದಾರರು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳು ದೂರಿದ್ದಾರೆ.












Click it and Unblock the Notifications