• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಅಟ್ಟಿಕಾ ಗೋಲ್ಡ್‌ ಕಂಪೆನಿ ಮಾಲೀಕನ ಮನೆ ಮೇಲೆ ಸಿಸಿಬಿ ದಾಳಿ

|
Google Oneindia Kannada News

ಬೆಂಗಳೂರು, ಜನವರಿ 03: ಅಟ್ಟಿಕಾ ಗೋಲ್ಡ್ ಕಂಪೆನಿ ಮಾಲೀಕನ ಮನೆಯ ಮೇಲೆ ಇಂದು ಸಿಸಿಬಿ ದಾಳಿ ನಡೆಸಿದ್ದು ಅಕ್ರಮ ಚಿನ್ನ ದಾಸ್ತಾನಿಗಾಗಿ ಹುಡುಕಾಟ ನಡೆದಿದೆ.

ಹಳೆಯ ರೌಡಿ ಶೀಟರ್ ಸಹ ಆಗಿದ್ದ ಅಟ್ಟಿಕಾ ಗೋಲ್ಡ್ ಕಂಪೆನಿ ಮಾಲೀಕ ಅಟ್ಟಿಕಾ ಬಾಬು ಅಲಿಯಾಸ್ ಬೊಮ್ಮನಹಳ್ಳಿ ಬಾಬು ನ ಬಾಣಸವಾಡಿಯಲ್ಲಿನ ನಿವಾಸದ ಮೇಲೆ ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ.

ರೇಸ್‌ಕೋರ್ಸ್ ಮೇಲೆ ಸಿಸಿಬಿ ದಾಳಿ: 96 ಲಕ್ಷ ರೂ ನಗದು ಜಪ್ತಿರೇಸ್‌ಕೋರ್ಸ್ ಮೇಲೆ ಸಿಸಿಬಿ ದಾಳಿ: 96 ಲಕ್ಷ ರೂ ನಗದು ಜಪ್ತಿ

ಬಾಬು ಮನೆಯ ಶೌಚಾಲಯದ ಗೋಡೆ ಹಾಗೂ ಮತ್ತಿತರ ಕಡೆಗಳಲ್ಲಿ ಚಿನ್ನವನ್ನು ಅಡಗಿಸಿಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಗೋಡೆಗಳನ್ನು ಒಡೆದು ಚಿನ್ನ ಹುಡುಕುತ್ತಿರುವ ಚಿತ್ರಗಳು ಹೊರಬಿದ್ದಿವೆ.

ಪ್ರಾಥಮಿಕ ಮಾಹಿತಿ ಪ್ರಕಾರ ಅಟ್ಟಿಕಾ ಬಾಬು ಮನೆಯ ಶೌಚಾಲಯದ ಗೋಡೆಗಳ ಹಿಂದೆ ವಾರ್ಡ್‌ರೋಬ್ ಮಾದರಿಯ ಖಾಲಿ ಸ್ಥಳಗಳು ಇವೆ, ಆದರೆ ಅದರಲ್ಲಿ ಚಿನ್ನ ಪತ್ತೆಯಾಗಿಲ್ಲ ಎನ್ನಲಾಗಿದೆ.

ಹನಿಟ್ರ್ಯಾಪ್ ಗಾಳಕ್ಕೆ ಧಾರವಾಹಿ ನಟಿಯರೇ ಹುಳುಹನಿಟ್ರ್ಯಾಪ್ ಗಾಳಕ್ಕೆ ಧಾರವಾಹಿ ನಟಿಯರೇ ಹುಳು

ಶೌಚಾಲಯದ ಗೋಡೆ ಮಾತ್ರವಲ್ಲದೆ ಇತರ ಕೆಲವು ಗೋಡೆಗಳ ಒಳಗೂ ಖಾಲಿ ಬಾಕ್ಸ್‌ಗಳು ಪತ್ತೆಯಾಗಿವೆ. ಆದರೆ ಚಿನ್ನ ಪತ್ತೆಯಾಗಿಲ್ಲ ಎನ್ನಲಾಗಿದೆ. ಅಟ್ಟಿಕ ಬಾಬು ಅನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ.

English summary
Attica gold company owner Bommanahalli Babu's house raided by CCB police today evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X