ಬೆಂಗಳೂರು : ಎಟಿಎಂ ದೋಚಲು ಬಂದು ಸಿಕ್ಕಿಬಿದ್ದರು
ಬೆಂಗಳೂರು, ಫೆ.2 : ಬೆಂಗಳೂರಿನ ಎಟಿಎಂ ಮೇಲೆ ಮತ್ತೆ ದರೋಡೆಕೋರರ ಕಣ್ಣು ಬಿದ್ದಿದೆ. ಇಂದಿರಾ ನಗರದ ಕೇಂಬ್ರಿಡ್ಜ್ ರಸ್ತೆಯಲ್ಲಿ ಎಟಿಎಂ ದೋಚಲು ಬಂದ ಖದೀಮರಿಗೆ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸೋಮವಾರ ಮುಂಜಾನೆ 3 ಗಂಟೆ ಸುಮಾರಿಗೆ ಕೇಂಬ್ರಿಡ್ಜ್ ರಸ್ತೆಯಲ್ಲಿನ ಕೆನರಾ ಬ್ಯಾಂಕ್ ಎಟಿಎಂ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ಸಶಸ್ತ್ರಧಾರಿ ದರೋಡೆಕೋರರು ಎಟಿಎಂಗೆ ನುಗ್ಗಿ ಹಣ ದೋಚಲು ಪ್ರಯತ್ನ ನಡೆಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜನರು ಇಬ್ಬರನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. [ಎಟಿಎಂನಲ್ಲಿ ವಂಚನೆ ನಡೆದಾಗ ಹೀಗೆ ಮಾಡಿ]

ಸಿಕ್ಕಿಬಿದ್ದವರನ್ನು ಆರ್.ಪಿ. ಗುಪ್ತಾ ಹಾಗೂ ಮ್ಯಾಥ್ಯೂಸ್ ಎಂದು ಗುರುತಿಸಲಾಗಿದೆ. ಖದೀಮರಿಗೆ ಹಿಗ್ಗಾಮುಗ್ಗಾ ಥಳಿಸಿರುವ ಜನರು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ದರೋಡೆಕೋರರು ಲಾಂಗು, ಮಚ್ಚುಗಳನ್ನು ಹಿಡಿದುಕೊಂಡು ಬಂದಿದ್ದರು ಎಂದು ಜನರು ಮಾಹಿತಿ ನೀಡಿದ್ದಾರೆ. [ಎಟಿಎಂಗೆ ಭದ್ರತೆ ಒದಗಿಸಿ]
ಎಟಿಎಂಗೆ ಸಿಸಿಟಿವಿ ಮತ್ತು ಸೈರನ್ ಆಳವಡಿಸಲಾಗಿತ್ತು. ಇಂದಿರಾ ನಗರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದು ಅವುಗಳ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಇಬ್ಬರು ಹಿಂದೆಯೂ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.












Click it and Unblock the Notifications