ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಶರ್ಟ್ ತೆಗೆಯಲು ಹೇಳಿದ ಭದ್ರತಾ ಸಿಬ್ಬಂದಿ: ಅವಮಾನಕರ ಘಟನೆ ಬಿಚ್ಚಿಟ್ಟ ಮಹಿಳೆ
ಬೆಂಗಳೂರು, ಡಿಸೆಂಬರ್ 04: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ಶರ್ಟ್ ತೆಗೆಯುವಂತೆ ಹೇಳಿದ್ದಾಗಿ ಮಹಿಳೆಯೊಬ್ಬರು ಆರೋಪಿಸಿದ್ದು, ಈ ಅನುಭವ ನಿಜಕ್ಕೂ ಅವಮಾನಕರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವಿಟ್ಟರ್ ಖಾತೆಯಲ್ಲಿ ಮಹಿಳೆ ಪೋಸ್ಟ್ ಮಾಡಿದ್ದಾರೆ. ಈಗ ಅವರ ಟ್ವಿಟ್ಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಕಾರ್ಯಾಚರಣೆ ಮತ್ತು ಭದ್ರತಾ ತಂಡಗಳಿಗೆ ತಿಳಿಸಲಾಗಿದೆ ಎಂದು ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ. ವಿಮಾನ ನಿಲ್ದಾಣದ ಭದ್ರತೆಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ನಿರ್ವಹಿಸುತ್ತದೆ.
ನಿನ್ನೆ ಸಂಜೆ ಟ್ವಿಟ್ಟರ್ ಪೋಸ್ಟ್‌ನಲ್ಲಿ ಮಹಿಳೆ ಈ ಆರೋಪ ಮಾಡಿದ್ದಾರೆ.
'ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ಸಂದರ್ಭ ನನ್ನ ಶರ್ಟ್ ತೆಗೆಯಲು ನನ್ನನ್ನು ಕೇಳಲಾಯಿತು. ಭದ್ರತಾ ಚೆಕ್ ಪಾಯಿಂಟ್‌ನಲ್ಲಿ ಕೇವಲ ಕ್ಯಾಮಿಸೋಲ್ ಧರಿಸಿ ನಿಲ್ಲುವುದು ನಿಜವಾಗಿಯೂ ಅವಮಾನಕರವಾಗಿದೆ. ಈ ತರಹದ ಅವಮಾನವನ್ನು ಒಬ್ಬ ಮಹಿಳೆಯಾಗಿ ನಾನು ಬಯಸಲಾರೆ. ಬಟ್ಟೆ ತೆಗೆಯುವಂತೆ ಹೇಳುವುದಕ್ಕೆ ನಿಮಗೆ ಮಹಿಳೆಯೇ ಏಕೆ ಬೇಕು?' ಎಂದು ಟ್ವೀಟ್ ಮಾಡಿದ್ದಾರೆ. ಇಂದು ಬೆಳಿಗ್ಗೆ ಪೋಸ್ಟ್ ಅನ್ನು ಡಿಲೀಟ್ ಮಾಡಲಾಗಿದೆ. ಸ್ವಲ್ಪ ಸಮಯದ ನಂತರ ಆಕೆಯ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣದ ಅಧಿಕೃತ ಟ್ವಿಟರ್ ಹ್ಯಾಂಡಲ್ ಮಹಿಳೆಯ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ 'ಇದು ಸಂಭವಿಸಬಾರದಿತ್ತು' ಎಂದು ಹೇಳಿದೆ. ಆಕೆಯ ಜೊತೆ ಸಂಭಾಷಣೆ ನಡೆಸಲು ಸಂಪರ್ಕ ವಿವರಗಳನ್ನು ಹಂಚಿಕೊಳ್ಳಲು ವಿನಂತಿಸಲಾಗಿದೆ.
ನಡೆದ ಅವಘಡಕ್ಕೆ ನಾವು ತೀವ್ರವಾಗಿ ವಿಷಾದಿಸುತ್ತೇವೆ ಮತ್ತು ಇದು ಸಂಭವಿಸಬಾರದು. ನಾವು ಇದನ್ನು ನಮ್ಮ ಕಾರ್ಯಾಚರಣೆ ತಂಡಕ್ಕೆ ಗಂಭೀರವಾಗಿ ಪರಿಗಣಿಸುವಂತೆ ತಿಳಿಸಿದ್ದೇವೆ. ಸಿಐಎಸ್ಎಫ್ (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್) ಭದ್ರತಾ ತಂಡಕ್ಕೆ ಇದನ್ನು ವಹಿಸಿದ್ದೇವೆ' ಎಂದು ಹೇಳಿದೆ.

ವಿಮಾನ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ಉದ್ಬವಿಸುವ ಸಮಸ್ಯೆಗಳು ಬಹು ದೊಡ್ಡ ಚರ್ಚೆಯ ವಿಷಯವಾಗಿದೆ. ಕೋವಿಡ್ ಸಾಂಕ್ರಾಮಿಕದ ಎರಡು ವರ್ಷಗಳ ನಂತರ ಪ್ರಯಾಣದ ನಿರ್ಬಂಧಗಳನ್ನು ತೆಗೆದುಹಾಕಿದ್ದರಿಂದ, ಹೊರ ದೇಶಗಳಿಗೆ ಹೊರಟ ಪ್ರವಾಸಿಗರಿಂದ ವಿಮಾನ ನಿಲ್ದಾಣಗಳು ಜನರಿಂದ ತುಂಬಿ ತುಳುಕಲು ಪ್ರಾರಂಭಿಸಿದವು. ಕಳೆದ ತಿಂಗಳು, ದೆಹಲಿ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳು ಅಸ್ತವ್ಯಸ್ತವಾಗಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ವಿಮಾನ ನಿಲ್ದಾಣಗಳು ಉದ್ದನೆಯ ಸರತಿ ಸಾಲುಗಳಿಗೆ ಸಾಕ್ಷಿಯಾಗಿದ್ದು, ಪ್ರಯಾಣಿಕರು ಕೌಂಟರ್‌ಗಳಲ್ಲಿ ಕಾಯಬೇಕಾಗಿತ್ತು.
ಸಿಐಎಸ್‌ಎಫ್‌ನಲ್ಲಿ ಸಿಬ್ಬಂದಿ ಕೊರತೆಯಿದೆ ಎಂದು ಬೆಂಗಳೂರು ವಿಮಾನ ನಿಲ್ದಾಣದ ಮೂಲವೊಂದು ಎನ್‌ಡಿಟಿವಿಗೆ ತಿಳಿಸಿದೆ.

'ಬೆಂಗಳೂರು ವಿಮಾನ ನಿಲ್ದಾಣದ ಮೇಲೆ ಯಾವುದೇ ನಿಯಂತ್ರಣವಿಲ್ಲ. ಇದನ್ನು ಸಿಐಎಸ್‌ಎಫ್ ಉತ್ತಮವಾಗಿ ನಿರ್ವಹಿಸಬೇಕು. ನಾವು ಹಣವನ್ನು ನೀಡುತ್ತಿದ್ದೇವೆ' ಎಂದು ವಿಮಾನ ನಿಲ್ದಾಣದ ಮೂಲವೊಂದು ತಿಳಿಸಿವೆ.
ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ಅವರು ಹೊಸ ಸ್ಕ್ಯಾನರ್‌ಗಳನ್ನು ಪಡೆಯುತ್ತಿದ್ದಾರೆ ಮತ್ತು ಪ್ರಯಾಣಿಕರು ಇನ್ನು ಮುಂದೆ ಲಗೇಜ್ ಸ್ಕ್ರೀನಿಂಗ್‌ಗಾಗಿ ಲ್ಯಾಪ್‌ಟಾಪ್‌ಗಳು, ಫೋನ್‌ಗಳು ಮತ್ತು ಚಾರ್ಜರ್‌ಗಳನ್ನು ಹೊರತೆಗೆಯುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications