ಅಶೋಕ ವಿವಿಯಿಂದ 100 ಪದವಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಧನ ಸಹಾಯ

ಬೆಂಗಳೂರು, ಮಾರ್ಚ್ 13: ದೇಶದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಅಶೋಕ ವಿಶ್ವವಿದ್ಯಾಲಯ 2019 ರ ಶೈಕ್ಷಣಿಕ ಸಾಲಿನಲ್ಲಿ ಪದವಿ ವ್ಯಾಸಂಗ ಮಾಡುವ 100 ವಿದ್ಯಾರ್ಥಿಗಳಿಗೆ ಸಂಪೂರ್ಣ ಹಣಕಾಸು ನೀಡುವುದಾಗಿ ಘೋಷಣೆ ಮಾಡಿದೆ.

ಸಾಮಾಜಿಕ ಅಥವಾ ಆರ್ಥಿಕ ಹಿನ್ನೆಲೆಯನ್ನು ಪರಿಗಣನೆಗೆ ತೆಗೆದುಕೊಳ್ಳದೇ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ನೀಡಲು ಅಶೋಕ ವಿಶ್ವವಿದ್ಯಾಲಯ ಬದ್ಧವಾಗಿದೆ. ಅಶೋಕ ವಿಶ್ವವಿದ್ಯಾಲಯಕ್ಕೆ ಕೇವಲ ಮೆರಿಟ್ ಆಧಾರದಲ್ಲಿ ಪ್ರವೇಶವನ್ನು ಕಲ್ಪಿಸಲಾಗುತ್ತದೆ ಮತ್ತು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಹಣಕಾಸು ನೆರವನ್ನು ನೀಡುತ್ತದೆ.

ಯಾವುದೇ ವಿದ್ಯಾರ್ಥಿಯು ಹಣಕಾಸು ಮುಗ್ಗಟ್ಟಿನಿಂದ ಶಿಕ್ಷಣವನ್ನು ಮೊಟಕುಗೊಳಿಸಬಾರದು.ಅಶೋಕ ವಿಶ್ವವಿದ್ಯಾಲಯ ಈಗಾಗಲೇ ಅಗತ್ಯವಿರುವ 2200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಣಕಾಸು ನೆರವು ನೀಡಿದೆ. ಈ ಮೂಲಕ ಉನ್ನತ ಶಿಕ್ಷಣಕ್ಕೆ ಅತಿ ಹೆಚ್ಚು ಆರ್ಥಿಕ ನೆರವು ನೀಡುತ್ತಿರುವ ಭಾರತದ ಮೊದಲ ವಿಶ್ವವಿದ್ಯಾಲಯ ಎನಿಸಿದೆ.

Ashoka University 2019 admissions : 100 Full Scholarships for UGs

ಪ್ರಗತಿಪರ ಶಿಕ್ಷಣ : ವಿಶ್ವದಾದ್ಯಂತ ಪ್ರಗತಿಪರ ಮತ್ತು ಬಹುವಿಷಯಗಳ ಶಿಕ್ಷಣ ಕ್ಷಿಪ್ರಗತಿಯಲ್ಲಿ ಮಾನ್ಯತೆ ಪಡೆಯುತ್ತಿದೆ ಮತ್ತು ಭಾರತದಲ್ಲಿ 21 ಶತಮಾನಕ್ಕೆ ಹೆಚ್ಚು ಸೂಕ್ತವಾದ ಶಿಕ್ಷಣವೆನಿಸಿದೆ. ಈ ನಿಟ್ಟಿನಲ್ಲಿ ಅಶೋಕ ವಿಶ್ವವಿದ್ಯಾಲಯ ತರಗತಿಯ ಒಳಗೆ ಮತ್ತು ಹೊರಗೆ ವಿವಿಧ ದೃಷ್ಟಿಕೋನಗಳನ್ನೊಳಗೊಂಡ ಪದವಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದೆ.

ಈ ಮೂಲಕ ವಿದ್ಯಾರ್ಥಿಗಳನ್ನು ನಿರ್ಣಾಯಕ ಚಿಂತಕರು, ಪರಿಣಾಮಕಾರಿಯಾದ ಸಂವಹನಕಾರರು ಮತ್ತು ಸಮಾಜದ ಮೇಲೆ ಪರಿಣಾಮ ಬೀರುವಂತಹ ನಾಯಕರನ್ನಾಗಿ ರೂಪಿಸುತ್ತಿದೆ. ವಿದ್ಯಾರ್ಥಿಗಳು ತಮ್ಮದೇ ಆದ ಪಠ್ಯಕ್ರಮವನ್ನು ವಿನ್ಯಾಸಗೊಳಿಸಲು ಮತ್ತು ತಮ್ಮದೇ ಆದ ಚಿಂತನೆಗಳನ್ನು ಅನ್ವೇಷಣೆ ಮಾಡಲು ಅಶೋಕ ವಿಶ್ವವಿದ್ಯಾಲಯ ಮುಕ್ತ ಅವಕಾಶವನ್ನು ನೀಡಿದೆ. ಅಶೋಕ ವಿಶ್ವವಿದ್ಯಾಲಯದ ಪ್ರವೇಶ ಪ್ರಕ್ರಿಯೆ ವಿನೂತನವಾಗಿರುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಮಾಡಿದ ಸಾಧನೆಯ ಹೊರತಾಗಿ ತಮ್ಮದೇ ಆದ ವಿನೂತನವಾದ ಗುರುತಿಸುವಿಕೆಗೆ ಅವಕಾಶ ಕಲ್ಪಿಸಿದೆ.

ವಿಶ್ವ-ದರ್ಜೆಯ ಬೋಧನಾ ವಿಭಾಗ : ಕಳೆದ ಹಲವಾರು ವರ್ಷಗಳಲ್ಲಿ ವಿಶ್ವದಾದ್ಯಂತದಿಂದ ಕೆಲವು ಅತ್ಯುತ್ತಮವಾದ ಶಿಕ್ಷಣ ತಜ್ಞರು ಮತ್ತು ವಿದ್ವಾಂಸರು ಅಶೋಕ ವಿಶ್ವವಿದ್ಯಾಲಯವನ್ನು ಸೇರಿಕೊಂಡಿದ್ದಾರೆ. ನಮ್ಮ ಬೋಧನ ವಿಭಾಗದ ಸದಸ್ಯರು ತಮ್ಮದೇ ಆದ ಕ್ಷೇತ್ರದಲ್ಲಿ ಅಪಾರ ಪರಿಣತಿ ಮತ್ತು ಸಾಮರ್ಥ್ಯವನ್ನು ಹೊಂದಿದ್ದು ತಮ್ಮ ಮೂಲ ಕಲ್ಪನೆಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಕಶಕ್ತಿಯಾಗಿದ್ದಾರೆ. ತರಗತಿಯ ಒಳಗೆ ಮತ್ತು ಹೊರಗೆ ಅತ್ಯದ್ಭುತವಾದ ಕಲಿಕಾ ವಾತಾವರಣ ಸೃಷ್ಟಿಸುತ್ತಿದ್ದಾರೆ. ಅವರ ಸಂಶೋಧನೆಗಳು ಮಾನವ ಜ್ಞಾನದ ಎಲ್ಲೆಯನ್ನು ಮೀರಿದ್ದಾಗಿದೆ.

ಪ್ರವೇಶಾತಿ ಕುರಿತು :ಪ್ರವೇಶಾತಿ ಪ್ರಕ್ರಿಯೆ 2019 ರ ಏಪ್ರಿಲ್ 9 ಕ್ಕೆ ಅಂತ್ಯಗೊಳ್ಳಲಿದೆ. ಅರ್ಜಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‍ಲೈನ್ ಆಗಿರುತ್ತದೆ. ಅರ್ಜಿ ಸಲ್ಲಿಕೆಗೆ ಅಶೋಕ ವಿಶ್ವವಿದ್ಯಾಲಯ ಯಾವುದೇ ಶುಲ್ಕ ವಿಧಿಸುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+