ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಲಿಸುವ ರೈಲಿನಿಂದ ಯೋಧನ ತಳ್ಳಿ ಕೊಲೆ ಮಾಡಿದ ದರೋಡೆಕೋರರು

|
Google Oneindia Kannada News

ಬೆಂಗಳೂರು, ಆಗಸ್ಟ್ 28: ಚಲಿಸುವ ರೈಲಿನಿಂದ ಯೋಧನನ್ನು ತಳ್ಳಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಯೋಧರೊಬ್ಬರು ತನ್ನ ಕುಟುಂಬದೊಂದಿಗೆ ಮದ್ದೂರಿಗೆ ಪ್ರಯಾಣಿಸುತ್ತಿದ್ದರು, ದರೋಡೆಕೋರರು ಸೈನಿಕರ ಮೊಬೈಲ್ ದೋಚುವ ಸಲುವಾಗಿ ಸೈನಿಕರನ್ನು ರೈಲಿನಿಂದ ತಳ್ಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇಂದಿನಿಂದ ಮಂಗಳೂರು- ಬೆಂಗಳೂರು ರೈಲು ಸಂಚಾರ ಪುನರಾರಂಭಇಂದಿನಿಂದ ಮಂಗಳೂರು- ಬೆಂಗಳೂರು ರೈಲು ಸಂಚಾರ ಪುನರಾರಂಭ

ಭಾನುವಾರ ಬೆಳಿಗ್ಗೆ ಅವರು ವಾಶ್ ರೂಂಗೆ ಹೋಗುತ್ತಿದ್ದಾಗ ನಾಯಂಡಹಳ್ಳಿ ಬಳಿ ಈ ಘಟನೆ ನಡೆದಿದೆ. ಮಾದೇಗೌಡ ರಜೆಯಲ್ಲಿದ್ದರು ಮತ್ತು ಅವರ ಪತ್ನಿ ಮತ್ತು ಅವರ ನಾಲ್ಕು ವರ್ಷದ ಮಗನೊಂದಿಗೆ ತಮ್ಮ ಊರಿಗೆ ಮರಳುತ್ತಿದ್ದರು.

Army Man Pushed Out Of Moving Train In Nayandahalli

ಬೆಳಿಗ್ಗೆ 7.20 ರ ಸುಮಾರಿಗೆ ದಂಪತಿಗಳು ಬೆಂಗಳೂರು ನಗರ ನಿಲ್ದಾಣದಲ್ಲಿ ಟ್ಯುಟಿಕೋರಿನ್ ಎಕ್ಸ್‌ಪ್ರೆಸ್ ರೈಲು ಹತ್ತಿದರು. ರೈಲು ಚಲಿಸುತ್ತಿರುವಾಗ, ಮಾದೇಗೌಡ ವಾಶ್‌ರೂಮ್‌ಗೆ ಹೋಗಬೇಕೆಂದು ಹೋದವರು ಮರಳಿ ಬರಲಿಲ್ಲ.

ಎಷ್ಟೊತ್ತಾದರೂ ಪತಿ ಬರದಿದ್ದಾಗ ಗಾಬರಿಗೊಂಡ ಪತ್ನಿ ದೀಪಾ ಹುಡುಕಾಡಿದಾಗ, ರೈಲಿನಿಂದ ಒಬ್ಬ ವ್ಯಕ್ತಿಯು ಬಿದ್ದಿರುವ ಮಾತನ್ನು ಕೇಳಿದರು. ಗಂಡನ ಮೊಬೈಲ್‌ಗೆ ಸಾಕಷ್ಟು ಬಾರಿ ಕರೆ ಮಾಡಿದಳು, ಆಗ ದರೋಡೆಕೋರರ ಗುಂಪೊಂದು ಪತಿಯನ್ನು ರೈಲಿನಿಂದ ಕೆಳಗೆ ತಳ್ಳಿರುವ ವಿಷಯವನ್ನು ಕೇಳಿ ಸಿಡಿಲೇ ಬಂದು ಬಡಿದಂತೆ ಭಾಸವಾಗಿತ್ತು.

English summary
Army Man Pushed Out Of Moving Train In Nayandahalli,A 28-year-old army man, travelling with his family to Maddur, was allegedly pushed off a moving train by a group of men who attempted to rob him of his mobile phone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X