ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದೆ, ಬಿಬಿಎಂಪಿ ಏನ್ಮಾಡ್ತಿದೆ?

By ದಿವ್ಯಶ್ರೀ. ವಿ,ಬೆಂಗಳೂರು
|
Google Oneindia Kannada News

ಬೆಂಗಳೂರು ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ, ಈ ನಾಯಿಗಳ ಹಾವಳಿಯಿಂದ ಎಷ್ಟೋ ಮಕ್ಕಳು ಬಲಿಯಾಗುತ್ತಿದ್ದಾರೆ, ಇದರ ಬಗ್ಗೆ ಬಿಬಿಎಂಪಿ ಗಮನ ಕೊಡದೆ ಏನು ಮಾಡುತ್ತಿದೆ ಎನ್ನುವುದೇ ಒಂದು ಯಕ್ಷ ಪ್ರಶ್ನೆ. ಇನ್ನೊಂದು ಕಡೆ ಪ್ರಾಣಿ ದಯಾ ಸಂಘ ಸಂಸ್ಥೆಗಳು ಇದಕ್ಕೆಲ್ಲ ಪರಿಹಾರ ನೀಡದೆ ಏನು ಮಾಡುತ್ತಿದೆ ಎನ್ನುವುದು ಗೊತ್ತಿಲ್ಲ, ಇಷ್ಟೆಲ್ಲಾ ಬೇಜವಾಬ್ದಾರಿ ಮತ್ತು ಜನ ಸಾಮಾನ್ಯರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎನ್ನುವುದು ಬೇಸರ ತಂದಿದೆ.

ಬೀದಿ ನಾಯಿಗಳಿಗೆ ಸರಿಯಾದ ಲಸಿಕೆ ಸಿಗದೆ ಎಷ್ಟೋ ನಾಯಿಗಳು ಅನಾರೋಗ್ಯ ಕುತ್ತಾಗಿರುತ್ತೆ, ಇದರಿಂದ ಜನರ ಆರೋಗ್ಯಕ್ಕೂ ಹಾನಿಕಾರಕ, ನಾನು ನೋಡಿರುವ ಹಾಗೆ ಬೆಂಗಳೂರಲ್ಲಿನ ತ್ಯಾಗರಾಜ ನಗರದಲ್ಲಿ ಬೆಳ್ಳಂಬೆಳಗ್ಗೆ 6 ಗಂಟೆ ಸಮಯದಲ್ಲಿ 15ಕ್ಕೂ ಹೆಚ್ಚು ಬೀದಿನಾಯಿಗಳು ಇರುತ್ತದೆ, ಈ ರಸ್ತೆಗೆ ಮಕ್ಕಳಷ್ಟೇ ಅಲ್ಲ ದೊಡ್ಡವರು ಕೂಡ ಓಡಾಡುವುದಕ್ಕೆ ಹೆದರಿಕೊಳ್ಳುತ್ತಾರೆ.

ಲಾಕ್ ಡೌನ್ ನ ಏಕತಾನತೆ: ನಾಯಿಗಳಲ್ಲೂ ಸೃಷ್ಟಿಸಿತು ಖಿನ್ನತೆಲಾಕ್ ಡೌನ್ ನ ಏಕತಾನತೆ: ನಾಯಿಗಳಲ್ಲೂ ಸೃಷ್ಟಿಸಿತು ಖಿನ್ನತೆ

Appeal to BBMP to curb Stray Dog menace in Bengaluru south

ಬರಿ ಇದು ಒಂದೇ ಏರಿಯಾ ಅಲ್ಲ ಬೆಂಗಳೂರಿನಲ್ಲಿರುವ ಬನಶಂಕರಿ, ಪದ್ಮನಾಭನಗರ, ಕುಮಾರಸ್ವಾಮಿ ಲೇಔಟ್ ಇನ್ನೂ ಹಲವಾರು ಏರಿಯಾಗಳಲ್ಲೂ ಬೀದಿ ನಾಯಿಗಳ ಹಟ್ಟಹಾಸ ಏರಿಕೆಯಾಗಿದೆ, ದಯವಿಟ್ಟು ಇದಕ್ಕೆ ಬಿಬಿಎಂಪಿ ಅಧಿಕಾರಿಗಳು ಮತ್ತು ಪ್ರಾಣಿ ದಯಾ ಸಂಘ ಗಮನ ಹರಿಸಿ ಸರಿಯಾದ ಕ್ರಮವನ್ನು ಆದಷ್ಟು ಬೇಗ ಕೈಗೊಂಡು ಜನರನ್ನೂ ರಕ್ಷಿಸಬೇಕು, ನಗರದ ಜನರು ಕೂಡ ಅವರವರ ಏರಿಯಾದಲ್ಲಿ ನಾಯಿಗಳ ಆರ್ಭಟ ಹೆಚ್ಚಿದಲ್ಲಿ ದಯವಿಟ್ಟು ಬಿಬಿಎಂಪಿ ಅಧಿಕಾರಿಗಳಿಗೆ ಅಥವಾ ಪ್ರಾಣಿ ದಯಾ ಸಂಘ ದ ಸಹಾಯವಾಣಿ ಸಂಖ್ಯೆ ಗೆ ಕರೆ ಮಾಡಿ ತಿಳಿಸಿ ಎಂದು ವಿನಂತಿಸುತ್ತೇನೆ.

Recommended Video

ಹೇಳ್ದೆ ಕೇಳ್ದೆ ಕೊಟ್ರು ನೋಡಿ Ramuluge Shock!! | Oneindia Kannada

ಬಿಬಿಎಂಪಿ ಸಹಾಯವಾಣಿ: +91 6364893322

English summary
Citizen appeal to BBMP to curb Stray Dog menace in N.R Colony, Thyagaraj Nagar, KS Layout and many areas in Bengaluru south.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X