ಅಂತರಿಕ್ಷ್-ದೇವಾಸ್ ಕೇಸ್ : ಬೆಂಗಳೂರು ಮೂಲದ ಕಂಪನಿಗೆ ಭಾರಿ ದಂಡ
ಬೆಂಗಳೂರು, ಫೆಬ್ರವರಿ 03: ಫೆಮಾ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಬೆಂಗಳೂರು ಮೂಲದ ದೇವಾಸ್ ಮಲ್ಟಿಮೀಡಿಯಾ ಕಂಪನಿಗೆ 1585 ಕೋಟಿ ರು ದಂಡ ವಿಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ) ಪ್ರಕಟಣೆ ಹೊರಡಿಸಿದೆ.
ಇಸ್ರೋದ ಕೆಲವು ಮಾಜಿ ಉದ್ಯೋಗಿಗಳು ಸೇರಿಕೊಂಡು 2005ರಲ್ಲಿ ದೇವಾಸ್ ಎಂಬ ಸಂಸ್ಥೆ ಸ್ಥಾಪಿಸಿದ್ದರು. ಈ ಸಂಸ್ಥೆ ಹಾಗೂ ಇಸ್ರೋದ ವಾಣಿಜ್ಯ ವಿಭಾಗದ ಸಂಸ್ಥೆ ಅಂತರಿಕ್ಷ್ ಕಾರ್ಪೋರೇಷನ್ ಜತೆ ಒಪ್ಪಂದವಾಗಿತ್ತು. ಈ ಒಪ್ಪಂದ ಪ್ರಕಾರ, 2 ಉಪಗ್ರಹಗಳ ಬ್ಯಾಂಡ್ ವಿಡ್ತ್ ಅನ್ನು ಡಿಜಿಟಲ್ ಮಿಡಿಯಾ ಹಾಗೂ ಬ್ರಾಡ್ ಕಾಸ್ಟಿಂಗ್ ವಿಷಯಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ದೇವಾಸ್ ಮಲ್ಟಿಮೀಡಿಯಾದ ಡಿಜಿಟಲ್ ಮೀಡಿಯಾ ಹಾಗೂ ಬ್ರಾಡ್ ಕಾಸ್ಟಿಂಗ್ ಗೆ ನೀಡಬೇಕಿತ್ತು.

ಆದರೆ, ದೇವಾಸ್ ನ ನಿರ್ದೇಶಕರು, ವಿದೇಶಿ ವಿನಿಮಯ ಕಾಯ್ದೆ (ಫೆಮಾ) ಉಲ್ಲಂಘನೆ ಮಾಡಿ ಅಕ್ರಮವಾಗಿ 579 ಕೋಟಿ ರು ಹೂಡಿಕೆ ಮಾಡಿರುವುದು ಪತ್ತೆಯಾಗಿತ್ತು. 2012ರಲ್ಲಿ ಕಂಪನಿ ವಿರುದ್ಧ ಇಡಿ ದೂರು ದಾಖಲಿಸಿತ್ತು. ಇದಕ್ಕೆ ಇಡಿಯ ವಿಶೇಷ ಕೋರ್ಟ್ ಸಮ್ಮತಿ ನೀಡಿದೆ. ಹೀಗಾಗಿ, ದೇವಾಸ್ ಮಲ್ಟಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಡಿಎಂಪಿಎಲ್, ಫೆಮಾ ಹಾಗೂ ಎಫ್ಡಿಐ ನಿಮಯ ಉಲ್ಲಂಘಿಸಿರುವುದು ಸಾಬೀತಾಗಿದೆ. ಈ ನಿಟ್ಟಿನಲ್ಲಿ 1585.20 ಕೋಟಿ ರು ದಂಡ ವಿಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.












Click it and Unblock the Notifications