ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

#AnswerMadiModi ಎಂದು ಮೋದಿಗೆ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆ

|
Google Oneindia Kannada News

ಬೆಂಗಳೂರು, ಜೂ. 20: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡು ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷಿ ಕಾಯ್ದೆಗಳು, ಮೇಕೆದಾಟು ಯೋಜನೆ, ಹಿಂದಿ ಹೇರಿಕೆ, ಬೆಂಗಳೂರು ಉಪನಗರ ರೈಲು ಯೋಜನೆ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ವಿಧಾನಸಭೆ ವಿರೋಧ ಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆಯನ್ನೇ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ #AnswerMadiModi ಹೆಸರಿನಲ್ಲಿ ಟ್ವೀಟ್ ಮಾಡಿ ಉತ್ತರಗಳನ್ನು ಕೇಳಿದ್ದಾರೆ.

ದೇಶದ ರೈತರ ಪ್ರತಿರೋಧಕ್ಕೆ ಮಣಿದು ಕರಾಳ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ. ಆದರೆ ರಾಜ್ಯ ಸರ್ಕಾರ ಇಲ್ಲಿಯವರೆಗೆ ಕಾಯ್ದೆಗಳನ್ನು ರದ್ದು ಮಾಡಿಲ್ಲ. ಇದು ನಿಮ್ಮ ಸೂಚನೆಯಂತೆ ನಡೆದಿದ್ದೋ? ಇಲ್ಲವೇ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯೇ? ಈ ಬಗ್ಗೆ ಉತ್ತರಿಸಿ ಮೋದಿ ಎಂದು ಸಿದ್ದರಾಮಯ್ಯ ಮೋದಿ ಅವರಿಗೆ ಪ್ರಶ್ನೆ ಮಾಡಿದ್ದಾರೆ.

PM Modi Karnataka Visit Live: 12 ಗಂಟೆಗೆ ಬೆಂಗಳೂರಿಗೆ ಮೋದಿ ಆಗಮನPM Modi Karnataka Visit Live: 12 ಗಂಟೆಗೆ ಬೆಂಗಳೂರಿಗೆ ಮೋದಿ ಆಗಮನ

ಬೆಂಗಳೂರು ನಗರಕ್ಕೆ ಕುಡಿಯುವ ನೀರುಣಿಸುವ ಮೇಕೆದಾಟು ಯೋಜನೆಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವುದಕ್ಕೆ ಏಕೆ? ಇದಕ್ಕೆ ಕಾರಣ ತಮಳುನಾಡು ಸರ್ಕಾರದ ಒತ್ತಡವೇ? ಕರ್ನಾಟಕದ ಬಗ್ಗೆ ಕೇಂದ್ರ ಸರ್ಕಾರದ ಪೂರ್ವಗ್ರಹವೇ? #AnswerMadiModi ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆಯನ್ನು ಎತ್ತಿದ್ದಾರೆ.

ಕರುನಾಡ ಪ್ರವಾಸದ ಬಗ್ಗೆ ಕನ್ನಡದಲ್ಲೇ ಟ್ವೀಟ್ ಮಾಡಿದ ಪ್ರಧಾನಿ ಮೋದಿಕರುನಾಡ ಪ್ರವಾಸದ ಬಗ್ಗೆ ಕನ್ನಡದಲ್ಲೇ ಟ್ವೀಟ್ ಮಾಡಿದ ಪ್ರಧಾನಿ ಮೋದಿ

ಹಿಂದಿ ಒತ್ತಾಯಪೂರ್ವಕವಾಗಿ ಹೇರಿಕೆ

ರಾಜ್ಯಗಳು ಪರಸ್ಪರ ಸಂಪರ್ಕ ಭಾಷೆಯಾಗಿ ಹಿಂದಿ ಬಳಕೆ ಮಾಡಬೇಕು ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಒತ್ತಾಯಪೂರ್ವಕವಾಗಿ ಹೇರಲು ಹೊರಟಿದ್ದಾರೆ. ಇದಕ್ಕೆ ನರೇಂದ್ರ ಮೋದಿ ಅವರೆ, ಕನ್ನಡದ ಅಸ್ಮಿತೆಯ ಬಗ್ಗೆ ನಿಮ್ಮ ನಿಲುವೇನು? ನಿಮ್ಮ ಮೌನ ಅಮಿತ್‌ ಶಾ ಅವರ ಹೇಳಿಕೆಗೆ ಸಹಮತವವೋ ಉತ್ತರಿಸಿ ಮೋದಿ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

ಇಷ್ಟೊಂದು ವಿಳಂಬವಾಗಲು ಕಾರಣವೇನು?

ಬೆಂಗಳೂರು ಜನತೆಯ ಬಹುಕಾಲದ ಬೇಡಿಕೆಯಾದ ಬೆಂಗಳೂರು ಉಪನಗರ ಯೋಜನೆ ನೆನೆಗುದಿಗೆ ಬೀಳಲು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಕಾರಣವಲ್ಲವೇ? ಈ ಯೋಜನೆ ಚಾಲನೆ ಇಷ್ಟೊಂದು ವಿಳಂಬವಾಗಲು ಕೇಂದ್ರ ಸರ್ಕಾರವೇ ಹೊಣೆಯಲ್ಲವೇ? ಮೂಲ ಯೋಜನೆ ಪ್ರಕಾರ ರೈಲು ಬೆಂಗಳೂರು ಉಪನಗರ ರೈಲು ಯೋಜನೆಯ ಶೇ. 20ರಷ್ಟು ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಬೇಕಾಗಿದೆ. ಈ 20% ವೆಚ್ಚವನ್ನು ಕೇಂದ್ರ ಸರ್ಕಾರ ನೀಡಿದೆಯೇ ಇಲ್ಲವೇ ಇದು ಇನ್ನೊಂದು ಜುಮ್ಲಾವೇ #AnswerMadiModi ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೇಳಿದ್ದಾರೆ.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ತಮಗೆ ಪತ್ರ ಬರೆದು ರಾಜ್ಯದ ನಿಮ್ಮದೇ ಬಿಜೆಪಿ ಸರ್ಕಾರ ಗುತ್ತಿಗೆ ಕಾಮಗಾರಿಗಳಲ್ಲಿ ಶೇ. 40ರಷ್ಟು ಕಮಿಷನ್‌ ಕೇಳುತ್ತಿದೆ ಎಂದು ಆರೋಪಿಸಿದ್ದಾರೆ. ನಾ ಖಾವೂಗಾ, ಖಾ ಖಾನೇದೂಂಗ ಎನ್ನುವ ನಿಮ್ಮ ಮಾತು ಸತ್ಯವೇ ಆಗಿದ್ದರೆ ಈ ಹಗರಣದ ತನಿಖೆ ಯಾವಾಗ ಮಾಡಿಸುತ್ತೀರಿ ಎಂದು ಮೋದಿ ಅವರನ್ನು ಕೇಳಿದ್ದಾರೆ.

ಪ್ರಸಕ್ತ ವರ್ಷದ ಜೂನ್‌ 30ಕ್ಕೆ ಜಿಎಸ್‌ಟಿ ಪರಿಹಾರ ಕೊನೆಗೊಂಡು ವರ್ಷಕ್ಕೆ ಕನಿಷ್ಟ ರು. 20 ಸಾವಿರ ಕೋಟಿ ನಷ್ಟವಾಗಲಿದೆ. ಜಿಎಸ್‌ಟಿ ಪರಿಹಾರವನ್ನು ಮೂರು ವರ್ಷ ಮುಂದುವರಿಸಬೇಕು ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ. ಈ ಬಗ್ಗೆ ನಿಮ್ಮ ನಿಲುವು ಏನು ಎಂದು ಮೋದಿ ಅವರನ್ನು ಸಿದ್ದು ಕೇಳಿದ್ದಾರೆ. ಪ್ರಸಕ್ತ ವರ್ಷ ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಹಾರವಾಗಿ 18,109 ಕೋಟಿ ರುಪಾಯಿ ಸಾಲ ಕೊಟ್ಟಿದೆ ಸಾಲವನ್ನು ರಾಜ್ಯದ ಜನರಿಂದಲೇ ಸೆಸ್‌ ಮೂಲಕ ಕೇಮದ್ರ ಸರ್ಕಾರ ಸಂಗ್ರಹಿಸುತ್ತದೆ. ಇದು ನಮ್ಮ ಜನರ ತಲೆಮೇಲಿನ ಹೆಚ್ಚುವರಿ ಹೊರೆಯಲ್ಲವೇ? #AnswerMadiModi ಎಂದು ಕೇಳಿದ್ದಾರೆ.

ದೇಶದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಸುಮಾರು 11 ಕೋಟಿ ಜನ ಉದ್ಯೋಗಿಗಳಿದ್ದರು. ನೋಟು ಅಮಾನ್ಯೀಕರಣ, ಜಿಎಸ್‌ಟಿ ಜಾರಿ ಹಾಗೂ ಕೊರೊನಾದಿಂದಾಗಿ ಕೈಗಾರಿಕೆಗಳು ಸ್ಥಗಿತಗೊಂಡು ಕೇವಲ 205-3 ಕೋಟಿ ಉದ್ಯೋಗಗಳು ಉಳಿದಿವೆ. ಈ ಉದ್ಯೋಗ ನಷ್ಟಕ್ಕೆ ಯಾರು ಹೊಣೆ ಎಂದಿದ್ದಾರೆ. 2013-14ರಲ್ಲಿ ಕೇಂದ್ರ ಸರ್ಕಾರದ ಬಜೆಟ್‌ ಗಾತ್ರ ರು 16,06000 ಕೋಟಿ ಇತ್ತು. ಈಗಿನ ಬಜೆಟ್‌ ಗಾತ್ರ 39,45,000 ಕೋಟಿಗೆ ಹೆಚ್ಚಾಗಿದೆ. ಆದರೆ ರಾಜ್ಯದ ತೆರಿಗೆ ಪಾಲು ಕಡಿಮೆಯಾಗುತ್ತಾ ಬಂದಿದೆ ಯಾಕೆ? ಎಂದು ಮೋದಿ ಅವರನ್ನು ಕೇಳಿದ್ದಾರೆ.

15ನೇ ಹಣಕಾಸು ಆಯೋಗ ಮಧ್ಯಂತರ ವರದಿಯಲ್ಲಿ ಕರ್ನಾಟಕ ರಾಜ್ಯಕ್ಕೆ ರು. 5,495 ಕೋಟಿ ವಿಶೇಷ ಅನುದಾನ ಶಿಫಾರಸು ಮಾಡಿತ್ತು. ಆದರೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ಈ ಶಿಫಾರಸ್ಸು ತಿರಸ್ಕರಿಸಿದ್ದು, ರಾಜ್ಯಕ್ಕೆ ಬಗೆದ ದ್ರೋಹವಲ್ಲವೇ? ಎಂದಿದ್ದಾರೆ. ಜಿಎಸ್‌ಟಿ ಜಾರಿಗೆ ಮೊದಲು ರಾಜ್ಯದ ತೆರಿಗೆ ಸಂಗ್ರಹದ ಬೆಳವಣಿಗೆ ದರ 13-14% ಇತ್ತು. 14 ಮತ್ತು 15ನೇ ಹಣಕಾಸು ಆಯೋಗದ ವರದಿಗಳ ನಡುವೆ ರಾಜ್ಯದ ತೆರಿಗೆ ಪಾಲು 1.07% ಕಡಿಮೆಯಾಯಿತು. ಈ ನಷ್ಟವನ್ನು ಕೇಂದ್ರ ಸರ್ಕಾರ ಭರಿಸಿ ಕೊಡಬೇಕಲ್ಲವೇ? ಎಂದು ಕೇಳಿದ್ದಾರೆ.

ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಕಟ್ಟಡ ಕಾಂಗ್ರೆಸ್‌ ನಿರ್ಮಿಸಿದ್ದು

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ 2 ದಿನಗಳ ನರೇಂದ್ರ ಮೋದಿ ಅವರ ಕರ್ನಾಟಕ ಭೇಟಿ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಸಾಕಷ್ಟು ತರಾಟೆಗೆ ತೆಗೆದುಕೊಂಡಿದ್ದಾರೆ. ಯೋಗ ದಿನಾಚರಣೆ ಮುಗಿಸಿ ಬೆಂಗಳೂರಿಗೆ ಬರಲಿರುವ ಮೋದಿ ಅವರು ನಗರದಲ್ಲಿ ನಿರ್ಮಿಸಲಾಗಿರುವ ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಕಟ್ಟಡವನ್ನು ಉದ್ಘಾಟಿಸಲಿದ್ದು, ಇದನ್ನು ಕಾಂಗ್ರೆಸ್‌ ಸರ್ಕಾರ ನಿರ್ಮಿಸಿದ್ದು ಎಂದು ಅವರು ನೆನೆಪಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರ ಈ ಸಮಾರಂಭಕ್ಕೆ ನಾನು ಶುಭ ಹಾರೈಸುವೆ ಈ ಕಟ್ಟಡಸ ಶಂಕುಸ್ಥಾಪನೆ ಮಾಡಿದ್ದು. ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ್‌ ಮುಖರ್ಜಿ . ಈ ಕಟ್ಟಡವನ್ನು ಆರು ತಿಂಗಳಲ್ಲೇ ಪೂರ್ಣಗೊಳಿಸಿದ್ದು, ನಮ್ಮ ಸರ್ಕಾರದ ಹೆಮ್ಮೆ. ಜ್ಞಾನಭಾರತಿ ಕ್ಯಾಂಪಸ್‌ನಲ್ಲಿಯೇ ಇದ್ದ ಕಟ್ಟಡದಲ್ಲಿಯೇ 2017ರ ಜೂನ್‌ನಲ್ಲಿ ಅರ್ಥಶಾಸ್ತ್ರದ ತರಗತಿಗಳು ಪ್ರಾರಂಭವಾಗಿತ್ತು ಎಂದು ತಿಳಿಸಿದ್ದಾರೆ.

125ನೇ ಜನ್ಮದಿನದಂದು ಅವರ ನೆನಪಿಗೆ ಅರ್ಥಪೂರ್ಣವಾದ ಸ್ಮಾರಕ

2017 ಅಕ್ಟೋಬರ್‌ 4ರಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಬೆಂಗಳೂರಿಗೆ ಬಂದು ಬಾಬಾಸಾಹೇಬ್‌ ಡಾ.ಬಿ.ಆರ್‌. ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಉದ್ಘಾಟಿಸಿದ್ದು, ನಾನು ಮುಖ್ಯಮಂತ್ರಿಯಾಗಿದ್ದು ಸಂದರ್ಭಧ ಸಾರ್ಥಕ ನೆನೆಪು ಎಂದಿರುವ ಸಿದ್ದರಾಮಯ್ಯ ಆರ್ಥಿಕ ತಜ್ಞ ಡಾ.ಬಿಆರ್. ಅಂಬೇಡ್ಕರ್ ಅವರ 125ನೇ ಜನ್ಮದಿನದಂದು ಅವರ ನೆನಪಿಗೆ ಅರ್ಥಪೂರ್ಣವಾದ ಸ್ಮಾರಕರೂಪದಲ್ಲಿ ಯೋಜನೆಯೊಂದನ್ನು ರೂಪಿಸಬೇಕೆಂಬ ನಮ್ಮ ಸರ್ಕಾರದ ಕನಸು ನನಸಾಗಿ ರೂಪುಗೊಂಡದ್ದು ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಎಂದು ತಿಳಿಸಿದ್ದಾರೆ.

Recommended Video

Modi ಕರ್ನಾಟಕಕ್ಕೆ ಬರುವ ಮುನ್ನ ಕನ್ನಡಿಗರ ಗಮನಸೆಳೆದರು | Oneindia Kannada

English summary
Former CM Siddaramaiah questions on agriculture laws, govt planning, Hindi intrusion and Bangalore suburban rail project. Against this backdrop, #AnswerMadiModi has tweeted under the name and asked for answers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X