Breaking:ಅಕ್ತರ್ ನಂತರ ತಮಿಳುನಾಡಲ್ಲಿ ಮತ್ತೊಬ್ಬ ಶಂಕಿತ ಉಗ್ರನ ಬಂಧನ

ಬೆಂಗಳೂರು, ಜುಲೈ 25: ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದ ಶಂಕಿತ ಉಗ್ರ ಅಕ್ತರ್ ಹುಸೇನ್ ಸಂಪರ್ಕದಲ್ಲಿದ್ದ ಜುಬಾ ಎಂಬ ಇನ್ನೊಬ್ಬ ಶಂಕಿತ ಉಗ್ರನನ್ನು ಸಿಸಿಬಿ ಅಧಿಕಾರಿಗಳ ತಂಡ ತಮಿಳುನಾಡಿನಲ್ಲಿ ಸೋಮವಾರ ಬಂಧಿಸಿದೆ.

ಬಂಧಿತ ಉಗ್ರ ಜುಬಾ ಆಲ್‌ಖೈದಾ ಸಂಘಟನೆ ಜತೆಗೆ ನಂಟು ಹೊಂದಿದ್ದ ಎಂದು ಶಂಕಿಸಲಾಗಿದೆ. ಈತ ಬೆಂಗಳೂರಿನಲ್ಲಿ ಸೆರೆ ಸಿಕ್ಕ ಅಕ್ತರ್ ಹುಸೇನ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ. ತಿಲಕ್ ನಗರದ ಪೊಲೀಸರು ಅಕ್ತರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆತನಿಂದ ಪೊಲೀಸರು ಹಲವು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

ಈ ವೇಳೆ ಅಕ್ತರ್ ನೊಂದಿಗೆ ಸಂಪರ್ಕದಲ್ಲಿದ್ದ ಜುಬಾ ಎಂಬ ಉಗ್ರನನ್ನು ಕೇಂದ್ರ ತನಿಖಾ ಸಂಸ್ಥೆಗಳ ಸಹಕಾರದಲ್ಲಿ ಸಿಸಿಬಿ ಅಧಿಕಾರಿಗಳ ನಾಲ್ಕು ತಂಡ ತಮಿಳುನಾಡಿನಲ್ಲಿ ಬಂಧಿಸಿದೆ. ಸದ್ಯ ಅಲ್ಲಿಂದ ಆತನನ್ನು ಬೆಂಳೂರಿಗೆ ಕರೆ ತರಲಾಗುತ್ತಿದೆ. ಅಕ್ತರ್ ಹುಸೇನ್ ಮತ್ತು ಜುಬಾ ಹಲವರ ಗುಂಪು ಮಾಡಿಕೊಂಡಿದ್ದರು.

Another suspected terrorist Jubhe arrested in Tamil Nadu

ತಮಿಳುನಾಡಿನಲ್ಲಿ ಸಿಸಿಬಿಯ ಡಿಸಿಪಿ ಆಗಿರುವ ಡಾ. ಎಸ್‌. ಡಿ. ಶರಣಪ್ಪ ನೇತೃತ್ವದಲ್ಲಿ ನಾಲ್ಕು ತಂಡಗಳು ಕಾರ್ಯಾಚರಣೆ ನಡೆಸಿವೆ. ಇವರ ಜತೆ ಕೇಂದ್ರ ತನಿಖಾ ತಂಡಗಳು ಸಹ ಕೈಜೋಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಅಕ್ತರ್‌ನನ್ನು ವಿಚಾರಣೆ ನಡೆಸಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಈ ವೇಳೆ ಎನ್‌ಐಎ ನ್ಯಾಯಾಲಯ ಆತನನ್ನು ಹತ್ತು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿ ಸೊಮವಾರ ಆದೇಶ ಹೊರಡಿಸಿದೆ. ಅಕ್ತರ್ ಬಂಧನ ವೇಳೆ ಸಾಕಷ್ಟು ವಿದ್ಯುತ್ ಉಪಕರಣ ಪತ್ತೆಯಾಗಿವೆ. ಆತ ಅಸ್ಸಾಂ, ಚೆನ್ನೈಮುಂತಾದ ಕಡೆ ನಂಟು ಹೊಂದಿದ್ದು, ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಅಧಿಕಾರಿಗಳು ಕೋರ್ಟ್‌ಗೆ ತಿಳಿಸಿದ್ದರು, ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. 10 ದಿನ ಸಿಸಿಬಿ ವಶಕ್ಕೆ ಅಕ್ತರ್ ನನ್ನು ನೀಡಿ ನ್ಯಾಯಾಲಯ ಆದೇಶಿಸಿದೆ.

Another suspected terrorist Jubhe arrested in Tamil Nadu

ಅಲ್ಲದೇ ಬಂಧನಕ್ಕೊಳಗಾಗಿರುವ ಅಕ್ತರ್ ಹುಸೇನ್‌ ಸಹೋದರ ಆದಿಲ್ ಹುಸೇನ್‌ ನನ್ನು ಪೊಲೀಸರು ವಿಚಾರಣೆ ಒಳಪಡಿಸಿದ್ದಾರೆ. ಒಟ್ಟಾರೆ ಬಂಧಿತರಾಗಿರುವವರ ಸಂಪರ್ಕದಲ್ಲಿರುವವರ ಪತ್ತೆಗೆ ಸಿಸಿಬಿ ಪ್ರಯತ್ನ ನಡೆಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+