ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Bengaluru Rains : ಬೆಂಗಳೂರಿನಲ್ಲಿ ಮತ್ತೊಮ್ಮೆ ಮಳೆ ಅವಾಂತರ: ಟ್ವಿಟರ್‌ನಲ್ಲಿ ಟ್ರೆಂಡ್!

|
Google Oneindia Kannada News

ಬೆಂಗಳೂರು, ಅ.20: ಬೆಂಗಳೂರಿನಲ್ಲಿ ಮಳೆ ಮತ್ತೊಮ್ಮೆ ಸದ್ದು ಮಾಡಿದೆ. ಬುಧವಾರ ರಾತ್ರಿ ಸುಮಾರು ನಾಲ್ಕೈದು ತಾಸುಗಳ ಕಾಲ ಸುರಿದ ಭಾರಿ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಮಳೆಯಿಂದಾಗಿ ರಸ್ತೆಯಲ್ಲಿ ಸಿಲುಕಿ ಪರದಾಡಿದ ಜನ ತಾವು ಕಂಡ ದೃಶ್ಯಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಧಾರಾಕಾರ ಮಳೆಯಿಂದಾಗಿ ನಗರದ ಎಲ್ಲಾ ಭಾಗಗಳಲ್ಲಿಯೂ ಜನ ತೊಂದರೆ ಅನುಭವಿಸಿದ್ದಾರೆ. ರಸ್ತೆಯಲ್ಲಿ ನೀರು ನಿಂತು ವಾಹನಗಳು ಜಖಂ ಗೊಂಡಿವೆ. ಇನ್ನು ದೀಪಾವಳಿ ರಜೆಗೆ ಮುಂಚಿತವಾಗಿ ತಮ್ಮ ತಮ್ಮ ಊರುಗಳಿಗೆ ತೆರಳಬೇಕೆಂದಿದ್ದ ಜನ ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣಗಳಲ್ಲಿ ಪರದಾಡಿ ಹಲವು ಸಮಸ್ಯೆ ಅನುಭವಿಸಿದ್ದಾರೆ. ಟ್ವಿಟರ್‌ನಲ್ಲಿ #BengaluruRain ಮತ್ತು #bengalururains ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗಿವೆ. ಮಳೆ ನೀರು ಸೃಷ್ಟಿಸಿದ ಅವಾಂತರಗಳ ಪೋಟೊ ಮತ್ತು ವಿಡಿಯೋಗಳನ್ನು ಜನರು ದಾಖಲಿಸಿದ್ದಾರೆ.

Another rain disaster in Bengaluru: trending on Twitter!

ಕೊಚ್ಚಿಹೋಗುತ್ತಿರುವ ಬೈಕ್‌ಗಳು:

ಭಾರಿ ಮಳೆಗೆ ರಸ್ತೆಯಲ್ಲಿ ನೀರು ಧಾರಾಕಾರ ಹರಿಯುತ್ತಿದ್ದು, ಬೈಕ್‌ಗಳೇ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದು ಮತ್ತು ಸವಾರರು ಅವುಗಳನ್ನು ರಕ್ಷಿಸಲು ಪರದಾಡುತ್ತಿರುವ ವಿಡಿಯೋವನ್ನು ಪತ್ರಕರ್ತ ಕಿರಣ್ ಪರಶರ್ ಟ್ವಿಟರ್‌ನಲ್ಲಿ ವಿಡಿಯೋ ಸಮೇತ ಹಂಚಿಕೊಂಡಿದ್ದಾರೆ.

ಕಳೆದ ಪ್ರವಾಹದ ನಂತರ ಮಾಡಿದ್ದೇನು?

ಕಳೆದ ತಿಂಗಳು ಸುರಿದ ಭಾರಿ ಮಳೆಗೆ ಮಹದೇವಪುರ ವಿಧಾನಸಭಾ ಕ್ಷೇತ್ರದ ಬೆಳ್ಳಂದೂರು ಭಾಗದ ಹಲವು ಪ್ರದೇಶಗಳು, ಅಪಾರ್ಟ್‌ಮೆಂಟ್, ವಿಲ್ಲಾಗಳಲ್ಲಿ ನೀರು ತುಂಬಿ ಜನ ಪ್ರಯಾಸ ಪಟ್ಟಿದ್ದರು. ಬುಧವಾರ ರಾತ್ರಿ ಮತ್ತೊಮ್ಮೆ ಈ ಅಪಾರ್ಟ್‌ಮೆಂಟ್‌ಗಲ್ಲಿ ನೀರು ಹರಿದು ಬಂದಿದ್ದು, ನಿವಾಸಿಗಳು ಆತಂಕಗೊಂಡಿದ್ದಾರೆ. ಅಪಾರ್ಟ್‌ಮೆಂಟ್, ವಿಲ್ಲಾಗಳಲ್ಲಿ ಅರ್ಧ ಕಾರುಗಳು ಮುಳುಗುವಷ್ಟು ನೀರು ತುಂಬಿಕೊಂಡಿದೆ. ಕಳೆದ ಪ್ರವಾಹದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಇಲ್ಲಿ ಮಾಡಿದ್ದೇನು ಎಂದು ನಾನು Unknowನು ಎಂಬ ಅಕೌಂಟ್‌ನಿಂದ ಫೋಟೋಗಳ ಸಮೇತ ಪ್ರಶ್ನಿಸಲಾಗಿದೆ.

ನಾನು ಈಗ ಕೆಲಸಕ್ಕೆ ಹೊರಡಬೇಕು. ಆದರೆ, ಮಳೆ ಬರುತ್ತಿರುವ ರೀತಿಯನ್ನು ನೋಡಿದರೆ ನಾನು ಬೆಳಗಿನ ಶಿಫ್ಟ್‌ ವೇಳೆಗೆ ತಲುಪಬಹುದು ಎಂದು ಡಾ. ದೀಪಕ್ ಕೃಷ್ಣಮೂರ್ತಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಆರ್‌ಟಿ ನಗರದಲ್ಲಿ ರಸ್ತೆ ಜಲಾವೃತಗೊಂಡಿದೆ. ಹಲವು ವಾಹನಗಳು ರಸ್ತೆಗಳಲ್ಲಿ ಸಿಲುಕಿಕೊಂಡಿರುವುದು ಕಂಡು ಬಂದಿದೆ. ರಸ್ತೆಗಳು ಜಲಾವೃತಗೊಂಡಿದ್ದರಿಂದ ಆಂಬ್ಯುಲೆನ್ಸ್ ಕೂಡ ಸಿಲುಕಿಕೊಂಡಿದೆ. ಆಹಾರ ವಿತರಣಾ ಹುಡುಗರು ಸಿಕ್ಕಿಹಾಕಿಕೊಂಡಿರುವುದು ನೋಡಬಹುದು ಎಂದು ಕಮ್ರನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

40% ಕಮಿಷನ್

ನೀವು ಸರಿಯಾದ ಸಮಯಕ್ಕೆ ನಿಯಮಿತವಗಿ ತೆರಿಗೆ ಪಾವತಿಸುತ್ತಿರಿ. ನಿಮ್ಮ ಶಾಸಕರು ನಿಮಗೆ ಈ ರೀತಿ ವಿಶ್ವದರ್ಜೆಯ ಸೌಲಭ್ಯಗಳನ್ನು ನೀಡುತ್ತಾರೆ.. 40% ಕಮಿಷನ್- ಎಂದು ಬಿಟಿಎಂ ಲೇಔಟ್ ರೆಸಿಡೆಂಟ್ ಎಂಬ ಅಕೌಂಟ್‌ನಿಂದ ರಿಟ್ವೀಟ್ ವಿಡಿಯೋವೊಂದು ಹಂಚಿಕೊಳ್ಳಲಾಗಿದೆ.

ಇದು ನದಿಯಲ್ಲ

ಇದು ನದಿಯಲ್ಲ, ನನ್ನ ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್ ಎಂದು ಅಪಾರ್ಟ್‌ಮೆಂಟ್‌ನೊಳಗೆ ಧಾರಾಕಾರ ನೀರು ಹರಿದು ಬರುತ್ತಿರುವ ವಿಡಿಯೋವೊಂದನ್ನು ಜೀಶನ್ ಕೊಹ್ಲಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಯಾವ ವರ್ಷ ಎಷ್ಟು ಮಳೆ:

2022ರಲ್ಲಿ ಇದುವರೆಗೆ 1706 ಮಿ.ಮೀ ಮಳೆಯಾಗಿದೆ. ಹಲವು ವರ್ಷಗಳಿಗೆ ಹೋಲಿಸಿದಾಗ ಇದು ಅತಿಹೆಚ್ಚು ಮಳೆಯಾದ ವರ್ಷ. 1990ರಿಂದ ಇದುವರೆಗಿನ ಟಾಪ್ 10 ಮಳೆಯಾದ ವರ್ಷಗಳನ್ನು ಬೆಂಗಳೂರು ವೆದರ್ ಎಂಬ ಅಕೌಂಟ್‌ನಿಂದ ಹಂಚಿಕೊಳ್ಳಲಾಗಿದೆ.

English summary
Rain has once again made noise in Bangalore. The heavy rain that fell for about four to five hours on Wednesday night created many disturbances. People who got stuck on the road due to rain shared the scenes they saw on Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X