ಯುಪಿಎಗೆ ಸೋಲು ಕಟ್ಟಿಟ್ಟ ಬುತ್ತಿ : ಅನಂತ್ ಕುಮಾರ್
ಬೆಂಗಳೂರು,
ಏ. 5 : ಯುಪಿಎ ಸರ್ಕಾರವೂ ಹಲವು ಹಗರಣಗಳಲ್ಲಿ ಮುಂಚೂಣಿಯಲ್ಲಿದ್ದು, ಈ ಬಾರಿ ಖಚಿತವಾಗಿ ಸೋಲು ಅನುಭವಿಸುತ್ತದೆ ಎಂದು ಬೆಂಗಳುರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಹೇಳಿದ್ದಾರೆ. ಶುಕ್ರವಾರ ಜೆ.ಪಿ.ನಗರ ಮತ್ತು ಪುಟ್ಟೇನಹಳ್ಳಿಯಲ್ಲಿ ಪಾದಯಾತ್ರೆ ನಡೆಸಿ, ಮನೆ ಮನೆಗೆ ತೆರಳಿ ಅವರು ಮತ ಯಾಚಿಸಿ ಮಾತನಾಡಿದರು. id="toptextpromo"> id='are-slot-1' class='oiad oi-axt oiadv'>ಪಾದಯಾತ್ರೆಯಲ್ಲಿ
ಮಾತನಾಡಿದ ಅನಂತ್ ಕುಮಾರ್, "ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ನಮಗೆ ಮುಖ್ಯ. ನಿಮ್ಮ ಸೇವೆಗಾಗಿ ನಾವು ಸದಾ ಸಿದ್ಧ. ಈ ಬಾರಿ ನರೇಂದ್ರ ಮೋದಿ ಅವರನ್ನು ಗೆಲ್ಲಿಸಿ ದೇಶದ ಭವಿಷ್ಯವನ್ನು ಉಜ್ವಲಗೊಳಿಸಿ" ಎಂದು ಮನವಿ ಮಾಡಿದರು. ಶಾಸಕ ಸತೀಶ್ ರೆಡ್ಡಿ, ಪಕ್ಷದ ಮುಖಂಡರಾದ ಮೋಹನ್ ರಾಜು, ಜಲ್ಲಿ ರಮೇಶ್ ಮುಂತಾದವರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಚಿತ್ರಗಳಲ್ಲಿ ನೋಡಿ ಅನಂತ್ ಕುಮಾರ್ ಪ್ರಚಾರ [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ] id='are-slot-2' class='oiad oi-axt oiadv'>
ಕಾಂಗ್ರೆಸ್ ಪಕ್ಷಕ್ಕೆ ಸೋಲು ಖಚಿತ
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಶುಕ್ರವಾರ ಜೆ.ಪಿ.ನಗರ ಮತ್ತು ಪುಟ್ಟೇನಹಳ್ಳಿಯಲ್ಲಿ ಪಾದಯಾತ್ರೆ ಮನೆ-ಮನೆ ಪ್ರಚಾರ ನಡೆಸಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಡಳಿತ ಪಕ್ಷ ಇಷ್ಟು ವರ್ಷವೂ ಭ್ರಷ್ಟ ಸರ್ಕಾರ ನಡೆಸಿದೆ. ಇಂತಹ ಪಕ್ಷಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದರು.

ಪರಮೇಶ್ವರ್ ಗೆ ಟಾಂಗ್
ಕರ್ನಾಟಕದಲ್ಲಿ ಆಡಳಿತ ಪಕ್ಷದ ಅಧ್ಯಕ್ಷರಾದವರು ಮತ್ತೊಂದು ಪಕ್ಷದ ಮುಖಂಡ ಹಾಗೂ ಹಿರಿಯ ರಾಜಕಾರಣಿಯೊಬ್ಬರ ಸಾವನ್ನೂ ಬಯಸುವಷ್ಟು ಕೆಳಮಟ್ಟಕ್ಕೆ ಇಳಿದಿರುವುದು ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಿ ರೈತನ ಸಾವಿನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ದುರಂತ ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.

ಕಾರ್ಮಿಕರ ಸಮಸ್ಯೆ ಆಲಿಸಿದರು
ಬೊಮ್ಮನಹಳ್ಳಿಯಲ್ಲಿ ಪ್ರಚಾರದ ಸಮಯದಲ್ಲಿ ವಿವಿಧ ಗಾರ್ಮೆಂಟ್ ಫ್ಯಾಕ್ಟರಿ, ಐಟಿ ಕಂಪೆನಿಗಳ ಉದ್ಯೋಗಿಗಳನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿದ ಅನಂತ್ ಕುಮಾರ್ ಬಿಜೆಪಿ ಬೆಂಬಲಿಸಿ ಎಂದರು.

ಗಾರ್ಮೆಂಟ್ಸ್ ಕಾರ್ಮಿಕರ ಭೇಟಿ
ಬೊಮ್ಮನಹಳ್ಳಿಯ ಗಾರ್ಮೆಂಟ್ಸ್ ಗೆ ಭೇಟಿ ನೀಡಿದ ಅನಂತ್ ಕುಮಾರ್ ಮತ್ತು ಆರ್.ಅಶೋಕ್ ಕಾರ್ಮಿಕರ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಚುನಾವಣೆಯಲ್ಲಿ ತಮ್ಮನ್ನೇ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಮೋದಿ ಪ್ರಧಾನಿಯಾಗಬೇಕು
ದೇಶಕ್ಕೆ ಸಮರ್ಥ ನಾಯಕತ್ವ ಬೇಕಾಗಿದೆ. ಆದ್ದರಿಂದ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿಸಲು ಎಲ್ಲರೂ ಬಿಜೆಪಿಗೆ ಬೆಂಬಲ ನೀಡಿ ಎಂದು ಅನಂತ್ ಕುಮಾರ್ ಮನವಿ ಮಾಡಿದರು.


Click it and Unblock the Notifications
