• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೊಮ್ಮಗನಿಗೆ ಸುಟ್ಟು ಹಿಂಸಿಸಿದ್ದ ಅಜ್ಜಿ ಈಗ ಜೈಲುಪಾಲು

|

ಬೆಂಗಳೂರು, ಆ. 30: ಅಳಿಯನ ಮೇಲಿನ ಕೋಪಕ್ಕೆ ಮೊಮ್ಮಗನನ್ನು ಸುಟ್ಟು, ಹಿಂಸೆ ಕೊಡುತ್ತಿದ್ದ ಖತರ್ನಾಕ್ ಮುದುಕಿಯೊಬ್ಬಳು ಸುದ್ದಗುಂಟೆ ಪಾಳ್ಯ ಪೊಲೀಸರ ಅತಿಥಿಯಾಗಿದ್ದಾಳೆ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ವಾಸವಿರುವ ಅಜ್ಜಿ ಮೊಮ್ಮಗನಿಗೆ ಮನಬಂದಂತೆ ಥಳಿಸಿದ್ದಳು. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಜೊತೆಗೆ, ಅಜ್ಜಿ ವಿರುದ್ಧ ತೀವ್ರ ಆಕ್ರೋಶವೂ ವ್ಯಕ್ತವಾಗಿತ್ತು. ಮಾನವೀಯತೆಯೇ ಇಲ್ಲದವಳಂತೆ ಪುಟಾಣಿ ಮಗುವಿನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದ ಅಜ್ಜಿ, ಆ ಪುಟ್ಟ ಬಾಲಕನ ಕೈ ಹಾಗೂ ಮೈಮೇಲೆ ಸುಟ್ಟಿದ್ದಳು.

ಮೊಬೈಲ್ ಬಳಸುವ ಮಕ್ಕಳ ಬಗ್ಗೆ ಎಚ್ಚರ: 5 ಲಕ್ಷ ರೂ. ಹಣಕ್ಕಾಗಿ ಅಪಹರಣದ ನಾಟಕವಾಡಿದ ಬಾಲಕ

ಬಾಲಕನ ತಲೆಗೆ ರಾಕ್ಷಸಿಯಂತೆ ಮುಂಗೈಯಿಂದ ಮೊಟಕಿದ್ದಲ್ಲದೆ, ಬೆನ್ನಿಗೆ ಗುದ್ದುವ ದೃಶ್ಯ ಎದೆ ನಡುಗಿಸುವಂತಿತ್ತು. ತಕ್ಷಣ ಎಚ್ಚೆತ್ತು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದ ಸುದ್ದಗುಂಟೆ ಪೊಲೀಸರು ಅಜ್ಜಿಯನ್ನು ಬಂಧಿಸಿದ್ದಾರೆ. ಅಜ್ಜಿ ಬಂಧನದ ಜೊತೆಗೆ ಫ್ಯಾಮಿಲಿ ಫೈಟ್ ಕೂಡ ರಿವೀಲ್ ಆಗಿದ್ದು, ಅಪ್ಪ-ಅಮ್ಮನ ಜಗಳದಲ್ಲಿ ಎಂಟ್ರಿಯಾಗಿದ್ದ ಕಿರಾತಕಿ ಮುದುಕಿ ಮಗುವನ್ನು ಹಿಂಸೆ ಮಾಡುತ್ತಿದ್ದಳು ಎಂಬುದು ಈಗ ಬೆಳಕಿಗೆ ಬಂದಿದೆ.

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ಮಗು ಊಟ ಕೇಳಿದ್ದಕ್ಕೆ ಹಿಂಸೆ..?

ಮಗು ಊಟ ಕೇಳಿದ್ದಕ್ಕೆ ಹಿಂಸೆ..?

ಬಾಲಕನ ಮೇಲೆ ಹಲ್ಲೆ ಮಾಡಿರುವ ಅಜ್ಜಿಯನ್ನು ಮುಬೀನಾ ಅಂತಾ ಗುರುತಿಸಲಾಗಿದೆ. ಬಾಲಕ ಹೆಚ್ಚು ಊಟ ಕೇಳುತ್ತಾನೆ ಎಂದು ಆತನ ಅಜ್ಜಿ ಹಲ್ಲೆ ಮಾಡಿದ್ದಳಂತೆ. ಆದರೆ ಸತ್ಯ ಬೇರೆನೇ ಇತ್ತು. ಇನ್ನು ಹಲ್ಲೆ ಬಗ್ಗೆ ಬಾಲಕನ ಅಪ್ಪಇಮ್ರಾನ್ ಪಾಷ ಪ್ರಶ್ನಿಸಿದರೆ, ನಿನ್ನ ಮಕ್ಕಳ ಜೊತೆ ಮನೆ ಖಾಲಿ ಮಾಡು ಅನ್ನುತ್ತಿದ್ದಳು. ಅನಿವಾರ್ಯವಾಗಿ ಸುಮ್ಮನಿದ್ದ ಬಾಲಕನ ತಂದೆ ವೀಡಿಯೋ ಚಿತ್ರಿಸಿಕೊಂಡಿದ್ದಾನೆ. ಇನ್ನು ಘಟನೆ ನಡೆಯುವಾಗ ಮಗುವಿನ ಅಳುವಿನ ಸದ್ದು ಕೇಳಿದ ಸ್ಥಳೀಯರು ಬಾಲಕನನ್ನು ರಕ್ಷಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಲವ್ ಸ್ಟೋರಿ ಕಿಚ್ಚು ಹಚ್ಚಿತ್ತು

ಲವ್ ಸ್ಟೋರಿ ಕಿಚ್ಚು ಹಚ್ಚಿತ್ತು

ಹಲ್ಲೆಗೆ ಒಳಗಾಗಿರುವ ಬಾಲಕನ ತಂದೆ ಇಮ್ರಾನ್ ಪಾಷ ಹಾಗೂ ತಾಯಿ ಅಜೀರಾ ದಂಪತಿ ಗುರಪ್ಪನಪಾಳ್ಯದಲ್ಲಿ ವಾಸವಾಗಿದ್ದರು. ಪ್ರೀತಿಸಿ ಮದುವೆಯಾಗಿದ್ದ ಇವರ ಮದುವೆ ವಿಲನ್ ಅಜ್ಜಿಗೆ ಇಷ್ಟವಿರಲಿಲ್ಲವಂತೆ. ಅತ್ತೆ ಮತ್ತು ಅಳಿಯನ ನಡುವೆ ವೈಮನಸ್ಸಿತ್ತು. ಪತ್ನಿ ಅಜೀರಾ ಕೂಡ ತಾಯಿ ಜೊತೆ ಸೇರಿ ಗಂಡನ ಜೊತೆ ಜಗಳ ಮಾಡುತ್ತಿದ್ದಳು.

ಹೆತ್ತ ಮಗುವಿನ ಮೇಲೆ ಹಲ್ಲೆ

ಹೆತ್ತ ಮಗುವಿನ ಮೇಲೆ ಹಲ್ಲೆ

ಬಾಲಕನ ತಂದೆ ಹಾಗೂ ತನ್ನ ಪತಿ ಇಮ್ರಾನ್ ಪಾಷ ಇಲ್ಲದಿದ್ದ ವೇಳೆ ತಾನೇ ಹೆತ್ತ ಮಗುವಿನ ಮೇಲೆ ಅಜೀರಾ ಹಲ್ಲೆ ಮಾಡಿ ಕೋಪ ತೀರಿಸಿಕೊಳ್ಳುತ್ತಿದ್ದಳಂತೆ. ಹೀಗಾಗಿಯೇ ಮಗು ಅಜ್ಜಿ ಹಾಗೂ ತಾಯಿ ಹತ್ತಿರ ಸೇರುತ್ತಿರಲಿಲ್ಲ. ಹೀಗಾಗಿ ಮತ್ತಷ್ಟು ಕೋಪಗೊಂಡಿದ್ದ ಬಾಲಕನ ತಾಯಿ ಹಾಗೂ ಅಜ್ಜಿ ಹೇಯ ಕೃತ್ಯ ನಡೆಸಿದ್ದಾರೆ.

 ಹೆತ್ತ ಕರುಳು ಕರಗಲೇ ಇಲ್ಲ

ಹೆತ್ತ ಕರುಳು ಕರಗಲೇ ಇಲ್ಲ

ತನ್ನ ಮಗುವಿನ ಮೇಲೆ ಕಣ್ಣೆದುರೇ ಇಷ್ಟೆಲ್ಲಾ ಹಲ್ಲೆ ನಡೆಯುತ್ತಿದ್ದರೂ ತಾಯಿ ಸೈಲೆಂಟ್ ಆಗಿರುತ್ತಿದ್ದಳಂತೆ. ಮಗುವಿನ ಮೈ ಸುಟ್ಟು ಹಲ್ಲೆ ನಡೆಸುತ್ತಿದ್ದರೂ ಹೆತ್ತ ಕರುಳು ಕರಗಲಿಲ್ಲ. ಹೀನ ಕೃತ್ಯ ನೋಡುತ್ತಲೇ ಸುಮ್ಮನಿದ್ದ ಈಕೆ, ಗಂಡ ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಿದ್ದಳು. ಮೊಮ್ಮಕ್ಕಳು ಎತ್ತಿ ಆಡಿಸಬೇಕಿದ್ದ ಅಜ್ಜಿಯೇ ಅಕ್ಷರಶಃ ರಾಕ್ಷಸಿಯಂತೆ ಮೊಮ್ಮಗನ ಮೇಲೆ ಹಲ್ಲೆ ನಡೆಸಿದ್ದಾಳೆ. ಮಗುವಿನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಹಾಗೇ ರಾಕ್ಷಸಿ ಅಜ್ಜಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

English summary
An old woman who burned and tormented his grandson in anger over the son-in-law is arrested by police. Suddagunte Palya police was registerd a complaint after the video goes viral, which is shows the old woman's brutualty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X