ವೈದ್ಯರಿಂದಲೇ ಬ್ಲ್ಯಾಕ್ ಫಂಗಸ್ ಔಷಧಿ ಕಳವು: ಏನಾಗುತ್ತಿದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ?
ಬೆಂಗಳೂರು, ಜೂನ್ 2: ಮೊದಲೇ ಔಷಧಿ ಅಭಾವದಿಂದ ಪರದಾಡುತ್ತಿರುವ ವೇಳೆ, ಜೀವ ಕಾಪಾಡಬೇಕಾಗಿದ್ದ ವೈದ್ಯರೇ ಆಮಿಷಕ್ಕೆ ಒಳಗಾಗಿ ಔಷಧಿಯನ್ನು ಕಳವು ಮಾಡಿದರೇ?
ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳಿಗೆಂದು ತೆಗೆದಿಡಲಾಗಿದ್ದ ಔಷಧಿಯು ಕಳ್ಳತನವಾಗಿದ್ದು, ವಿ.ವಿ.ಪುರಂ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ವೈದ್ಯರನ್ನು ಬಿಟ್ಟು ಬೇರೆಯವರಿಗೆ ಪ್ರವೇಶವಿರದ ಸ್ಟೋರ್ ರೂಂನಲ್ಲಿ ಇಡಲಾಗಿದ್ದ ಲಿಪೋಸೋಮಲ್ ಆಂಪೊಟೆರಿಸಿನ್ ಬಿ ಔಷಧಿಯ ಹತ್ತು ವಯಾಲ್ಸ್ ಕಳುವಾಗಿದೆ.
ಆಸ್ಪತ್ರೆಯ ಮೆಡಿಕಲ್ ಆಫೀಸರ್ ಡಾ.ಶ್ರೀನಿವಾಸ್ ಅವರು ಈ ಸಂಬಂಧ ಠಾಣೆಗೆ ದೂರು ನೀಡಿದ್ದು, ಪೊಲೀಸರು ಕೆಲವು ವೈದ್ಯರನ್ನು ವಿಚಾರಣೆ ನಡೆಸಿದ್ದಾರೆ.

ಬ್ಲ್ಯಾಕ್ ಫಂಗಸ್ ರೋಗಿಗಳಿಗಾಗಿ ಈ ವಯಾಲ್ಸ್
ಬ್ಲ್ಯಾಕ್ ಫಂಗಸ್ ರೋಗಿಗಳಿಗಾಗಿ ಈ ವಯಾಲ್ಸ್ ಅನ್ನು ಸ್ಟೋರ್ ರೂಂನಲ್ಲಿ ತೆಗೆದಿಡಲಾಗಿತ್ತು. ಈ ವಯಾಲ್ಸ್ ಬೆಲೆ ಸುಮಾರು ಏಳು ಸಾವಿರ ರೂಪಾಯಿ. ಕಾಳಸಂತೆಕೋರರಿಗೆ ಈ ವಯಾಲ್ಸ್ ಮಾರಾಟವಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವಿ ವಿ ಪುರಂ ಪೋಲಿಸರಿಂದ ವಿಚಾರಣೆ
ವಯಾಲ್ಸ್ ಇರುವ ಬಗ್ಗೆ ಮಾಹಿತಿ ವೈದ್ಯರಿಗೆ ಬಿಟ್ಟು ಇನ್ಯಾರಿಗೂ ಇರುವುದಿಲ್ಲ. ಹಾಗಾಗಿ, ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಸೇರಿ ಈ ಕೆಲಸವನ್ನು ಮಾಡಿರಬಹುದು ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆ ಆಯಾಮದಲ್ಲಿ ವಿಚಾರಣೆಯೂ ನಡೆಯುತ್ತಿದೆ.

ವಯಾಲ್ಸ್ ಕಳವು ಮೇ 30ರಂದು ನಡೆದ ಘಟನೆಯಾಗಿದೆ
ಆಸ್ಪತ್ರೆಯ ಆಫೀಸರ್ ಡಾ.ಶ್ರೀನಿವಾಸ್ ನೀಡಿದ ದೂರಿನ ಅನ್ವಯ, ವಯಾಲ್ಸ್ ಕಳುವಾದ ದಿನ/ಸಮಯ ಯಾರು ಪಾಳಿಯಲ್ಲಿ ಇದ್ದರೋ ಅವರನ್ನು ಮೊದಲು ಪೊಲೀಸರು ವಿಚಾರಣೆ ನಡೆಸಲು ಆರಂಭಿಸಿದ್ದಾರೆ. ಇದು ಮೇ 30ರಂದು ನಡೆದ ಘಟನೆಯಾಗಿದೆ.
Recommended Video

ಹತ್ತು ವಯಾಲ್ಸ್ ಗಳು ಕಳುವಾಗಿದ್ದು ಬೆಳಕಿಗೆ ಬಂದಿದೆ
ಮೇ 30ರಂದು 'ಲಿಪೋಸೋಮಲ್ ಆಂಪೊಟೆರಿಸಿನ್ ಬಿ' ವಯಾಲ್ಸ್ 43 ಸಂಖ್ಯೆಯಲ್ಲಿದ್ದವು. ಅಂದು ರಾತ್ರಿ ಏಳೂವರೆ ಸುಮಾರಿಗೆ ವೈದ್ಯರ ಮುಂದೆಯೇ ಇದನ್ನು ಪರಿಶೀಲಿಸಿ ಲಾಕ್ ಮಾಡಲಾಗಿತ್ತು. ಇದಾದ ಸ್ವಲ್ಪ ಹೊತ್ತಿನಲ್ಲಿ ಮತ್ತೊಂದು ಪಾಳಿಯ ವೈದ್ಯರು ಬಂದು ಸ್ಟಾಕ್ ಚೆಕ್ ಮಾಡಿದಾಗ ಹತ್ತು ವಯಾಲ್ಸ್ ಗಳು ಕಳುವಾಗಿದ್ದು ಬೆಳಕಿಗೆ ಬಂದಿದೆ.












Click it and Unblock the Notifications