ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಬ್ಬಂದಿ ಕೊರತೆ: ಕಂಡಕ್ಟರ್ ರಹಿತ ಬಸ್‌ ಸೇವೆಗೆ ಮಾರ್ಗ ಗುರುತಿಸುತ್ತಿರುವ ಬಿಎಂಟಿಸಿ

|
Google Oneindia Kannada News

ಬೆಂಗಳೂರು, ಜುಲೈ 31: ಸಿಬ್ಬಂದಿಯ ಕೊರತೆಯನ್ನು ತಪ್ಪಿಸಲು ಬಿಎಂಟಿಸ ಹೊಸ ವಿಧಾನ ಅಳವಡಿಕೆಗೆ ಮುಂದಾಗಿದೆ. ಕಂಡಕ್ಟರ್ ರಹಿತ ಬಸ್‌ ಸೇವೆಗಾಗಲಿ ಬಿಎಂಟಿಸಿ ಈಗಾಗಲೇ ಮಾರ್ಗಗಳನ್ನು ಗುರುತಿಸುತ್ತಿದೆ. ಕಂಡಕ್ಟರ್ ಇಲ್ಲದಿದ್ದರೂ ಸುಲಭವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವ 500 ಮಾರ್ಗಗಳನ್ನು ಗುರುತಿಸಲು ಬಿಎಂಟಿಸಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಸಿಬ್ಬಂದಿ, ಅದರಲ್ಲೂ ಚಾಲಕರ ಕೊರತೆ ಉಂಟಾಗಿದೆ. ಇದರಿಂದಾಗಿ 500 ಕ್ಕೂ ಬಿಎಂಟಿಸಿ ಹೆಚ್ಚು ಬಸ್‌ಗಳು ಡಿಪೋಗಳಲ್ಲೇ ನಿಲ್ಲುವಂತಾಗಿದೆ. ಕೋವಿಡ್‌ಗೂ ಮುನ್ನ ಇದ್ದ ವೇಳಾಪಟ್ಟಿಗೆ ಹೋಲಿಕೆ ಮಾಡಿದರೆ ಬಸ್‌ ಸೇವೆಗಳ ಸಂಖ್ಯೆ ಕಡಿಮೆಯಾಗಲು ಸಿಬ್ಬಂದಿ ಕೊರತೆ ಕಾರಣವಾಗಿದೆ.

ಕೆಎಸ್‌ಆರ್‌ಟಿಸಿ ಆಸ್ಪತ್ರೆ ಖಾಸಗೀಕರಣ: ಸಂಸದರ ವಿರುದ್ಧ ಎಎಪಿ ಕಿಡಿಕೆಎಸ್‌ಆರ್‌ಟಿಸಿ ಆಸ್ಪತ್ರೆ ಖಾಸಗೀಕರಣ: ಸಂಸದರ ವಿರುದ್ಧ ಎಎಪಿ ಕಿಡಿ

"ಕೋವಿಡ್‌ ಸಾಂಕ್ರಾಮಿಕದ ಮೊದಲಿನ ರೀತಿ ಸೇವೆಗಳನ್ನು ನೀಡಲು, ಬಿಎಂಟಿಸಿ ಸಂಸ್ಥೆಗೆ ಕನಿಷ್ಠ 2,000 ಸಿಬ್ಬಂದಿಯ ಅಗತ್ಯವಿದೆ. ಸಿಬ್ಬಂದಿಯ ನೇಮಕಕ್ಕೆ ಆರ್ಥಿಕ ಪರಿಸ್ಥಿತಿ ಅನುಕೂಲವಾಗಿಲ್ಲದ ಕಾರಣ, ಆಯ್ದ ಕೆಲವು ಮಾರ್ಗಗಳಲ್ಲಿ ಕಂಡಕ್ಟರ್ ರಹಿತ ಸೇವೆಗಳನ್ನು ನಿಯೋಜಿಸಲು ನಾವು ನಿರ್ಧರಿಸಿದ್ದೇವೆ. ದೀರ್ಘಾವಧಿಯಲ್ಲಿ ಚಾಲಕ-ಮಾತ್ರ ಸೇವೆಗಳಿಗೆ ಬದಲಾಯಿಸುವ ಏಕವ್ಯಕ್ತಿ ಸಮಿತಿಯ ಶಿಫಾರಸಿಗೆ ಇದು ಅನುಸಾರವಾಗಿದೆ." ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

 ಕಡಿಮೆ ಪ್ರಯಾಣಿಕರ ಮಾರ್ಗಗಳಲ್ಲಿ ಸೇವೆ

ಕಡಿಮೆ ಪ್ರಯಾಣಿಕರ ಮಾರ್ಗಗಳಲ್ಲಿ ಸೇವೆ

ಸಿಬ್ಬಂದಿ ಕೊರತೆಯಿಂದಾಗಿ ನಿಗಮವು ಈಗಾಗಲೇ ಕೆಲವು ಮಾರ್ಗಗಳಲ್ಲಿ ಕಂಡಕ್ಟರ್ ರಹಿತ ಬಸ್‌ಗಳನ್ನು ಆಶ್ರಯಿಸಿದೆ. ಆದರೆ, ಇದುವರೆಗೂ ಇದನ್ನು ಅಧಿಕೃತಗೊಳಿಸಿರಲಿಲ್ಲ. ಮಾರ್ಗದರ್ಶಿ ತತ್ವಗಳ ಆಧಾರದ ಮೇಲೆ ಅಧಿಕಾರಿಗಳು ಮಾರ್ಗಗಳನ್ನು ಹುಡುಕುತ್ತಿದ್ದಾರೆ.

ಹೆಚ್ಚಿನ ಜನಸಂದಣಿ ಇಲ್ಲದ ಮಾರ್ಗಗಳ ಬಸ್‌ಗಳು, ಚಾರ್ಟರ್ಡ್ ಸೇವೆಗಳನ್ನು ಒದಗಿಸಿದ ನಂತರ ಅರೆಕಾಲಿಕವಾಗಿ ಓಡುವ ಬಸ್‌ಗಳು ಮತ್ತು ಟಿಕೆಟ್‌ಗಳ ಸಂಖ್ಯೆ ಕಡಿಮೆ ಮಾರಾಟವಾಗುವ ಮಾರ್ಗಗಳನ್ನು ಆಯ್ಕೆ ಮಾಡಲಾಗುತ್ತದೆ.

ಬಿಎಂಟಿಸಿಯಿಂದ ಇನ್ನು ಪ್ರಯಾಣಿಕರಿಗೆ ಡಿಜಿಟಲ್‌ ಪಾಸ್‌ಬಿಎಂಟಿಸಿಯಿಂದ ಇನ್ನು ಪ್ರಯಾಣಿಕರಿಗೆ ಡಿಜಿಟಲ್‌ ಪಾಸ್‌

 ಹಲವು ಮಾರ್ಗಗಳಲ್ಲಿ ಪ್ರಾಯೋಗಿಕವಾಗಿ ಜಾರಿ

ಹಲವು ಮಾರ್ಗಗಳಲ್ಲಿ ಪ್ರಾಯೋಗಿಕವಾಗಿ ಜಾರಿ

"ವಾಯು ವಜ್ರ ಸೇವೆಗಳು ಹೆಚ್ಚಾಗಿ ಜನಸಂದಣಿಯಿಲ್ಲ. ಅದೇ ರೀತಿ, ಎಸಿ ಬಸ್‌ಗಳು ಸಂಚರಿಸುವ ಹಲವು ಮಾರ್ಗಗಳಲ್ಲಿ ಕಂಡಕ್ಟರ್ ಅಗತ್ಯವಿಲ್ಲ. ಪಾಸ್ ಹೊಂದಿರುವವರ ಸಂಖ್ಯೆ ಹೆಚ್ಚಾಗಿರುವ ಕೆಲವು ಮಾರ್ಗಗಳಿವೆ, ಇದರಿಂದಾಗಿ ಟಿಕೆಟ್ ಮಾರಾಟದಿಂದ ಬರುವ ಆದಾಯ ಕಡಿಮೆ ಇದೆ. 500 ಮಾರ್ಗಗಳಿಗೆ ಸ್ಕೇಲಿಂಗ್ ಮಾಡುವ ಮೊದಲು ನಾವು ಪ್ರಾಯೋಗಿಕ ಆಧಾರದ ಮೇಲೆ ಕೆಲವು ಮಾರ್ಗಗಳನ್ನು ಆಯ್ಕೆ ಮಾಡುತ್ತೇವೆ. ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಪ್ರಾಯೋಗಿಕ ಅಂಕಿ ಅಂಶಗಳನ್ನು ಅಧ್ಯಯನ ಮಾಡಲಾಗುತ್ತದೆ," ಎಂದು ಅಧಿಕಾರಿ ವಿವರಿಸಿದರು.

 ಚಾಲಕರಿಗೆ ಹೆಚ್ಚಿನ ವೇತನ

ಚಾಲಕರಿಗೆ ಹೆಚ್ಚಿನ ವೇತನ

ಕಂಡಕ್ಟರ್ ಇಲ್ಲದೆ ಇಂತಹ ಕಾರ್ಯಗಳನ್ನು ಕೈಗೊಳ್ಳುವ ಚಾಲಕರಿಗೆ ಸಂಬಳದ ಮೇಲೆ ಹೆಚ್ಚುವರಿ ಶೇಕಡ 3 ಮತ್ತು ದಿನಕ್ಕೆ 75 ರೂ.ಗಳನ್ನು ಪ್ರೋತ್ಸಾಹ ಧನ ನೀಡಲು ಬಿಎಂಟಿಸಿ ನಿರ್ಧರಿಸಿದೆ.

ಈ ವ್ಯವಸ್ಥೆಯು ಚಾಲಕರಿಗೆ ಸಂಬಳ ಮತ್ತು ಮಾರ್ಗದಿಂದ ಬರುವ ಆದಾಯದ ಆಧಾರದ ಮೇಲೆ ಸುಮಾರು 5,000 ರಿಂದ 6,000 ರೂಪಾಯಿಗಳನ್ನು ಗಳಿಸಲು ಸಹಾಯ ಮಾಡುತ್ತದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.

ಎಂ. ಆರ್ . ಶ್ರೀನಿವಾಸ ಮೂರ್ತಿ ನೇತೃತ್ವದ ಏಕಸದಸ್ಯ ಸಮಿತಿಯ ವರದಿಯಂತೆ ಬಿಎಂಟಿಸಿ ಸೇರಿದಂತೆ ನಾಲ್ಕು ರಸ್ತೆ ಸಾರಿಗೆ ನಿಗಮಗಳಲ್ಲಿ ಮಂಜೂರಾದ 1.24 ಲಕ್ಷ ಸಿಬ್ಬಂದಿಗೆ 16,969 ಸಿಬ್ಬಂದಿ ಕೊರತೆ ಇದೆ. ನಿಗಮಗಳು ಕಂಡಕ್ಟರ್‌ಗಳ ಅಗತ್ಯವನ್ನು ಕಡಿಮೆ ಮಾಡಲು ತಂತ್ರಜ್ಞಾನವನ್ನು ಪರಿಚಯಿಸಲು ಪ್ರಾರಂಭಿಸಬೇಕು ಎಂದು ವರದಿ ಶಿಫಾರಸು ಮಾಡಿದೆ. ಇದರಿಂದ ನಿರ್ವಾಹಕರನ್ನು ಖಾಲಿ ಹುದ್ದೆಗಳಿಗೆ ವರ್ಗಾಯಿಸಬಹುದು.

 ನೂತನ ತಂತ್ರಜ್ಞಾನ ಅಳವಡಿಕೆಗೆ ಬೇಕು ಸಮಯ

ನೂತನ ತಂತ್ರಜ್ಞಾನ ಅಳವಡಿಕೆಗೆ ಬೇಕು ಸಮಯ

ಸ್ವಯಂಚಾಲಿತ ಶುಲ್ಕ ಸಂಗ್ರಹಣೆಯಂತಹ ತಂತ್ರಜ್ಞಾನದ ಪರಿಚಯಕ್ಕೆ ಬಂಡವಾಳ ಹೂಡಿಕೆಯ ಜೊತೆಗೆ ಸಮಯ ಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

"ಪ್ರಯಾಣಿಕರು ದೂರದವರೆಗೆ ಪ್ರಯಾಣಿಸುವ ಅಂತರ-ನಗರ ಬಸ್ ಸೇವೆಗಿಂತ ಭಿನ್ನವಾಗಿ, ಮೂಲ ಮತ್ತು ಗಮ್ಯಸ್ಥಾನದ ಕೇಂದ್ರಗಳ ನಡುವೆ ಟಿಕೆಟಿಂಗ್ ಅಗತ್ಯವಿರುತ್ತದೆ. ಪ್ರತಿ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಆನ್‌ಬೋರ್ಡಿಂಗ್ ಮಾಡಲು ನಗರ ಸೇವೆಗಳಿಗೆ ತಂತ್ರಜ್ಞಾನದ ಅಗತ್ಯವಿದೆ. ಇದೆಲ್ಲದರ ಬಗ್ಗೆ ವಿವರವಾದ ಅಧ್ಯಯನ ಮಾಡಬೇಕಾಗಿದೆ ಮತ್ತು ಸ್ಥಳೀಯ ವಾಸ್ತವ ಸ್ಥಿತಿ ಅರ್ಥಮಾಡಿಕೊಳ್ಳಲು ಕೆಲವು ಪ್ರಾಯೋಗಿಕವಾಗಿ ಜಾರಿ ಮಾಡಿ ಅರಿತುಕೊಳ್ಳಬೇಕಿದೆ." ಎಂದು ಬಿಎಂಟಿಸಿ ಅಧಿಕಾರಿ ತಿಳಿಸಿದರು.

English summary
Amid Shortage Of Crew The BMTC will introduce conductor-less services on Some routes. officials working on identifying 500 routes where the absence of a conductor doesn’t make any negative impact. BMTC has a shortage of crew, especially drivers, which has resulted in more than 500 buses remaining off the road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X