ಬಿಬಿಎಂಪಿ ಆರೋಗ್ಯ ಕೇಂದ್ರಗಳಲ್ಲೇ ಮಕ್ಕಳ ಆರೋಗ್ಯ ರಕ್ಷಿಸುವ ನ್ಯೂಮೋನಿಯಾ ಲಸಿಕೆ

ಬೆಂಗಳೂರು, ಆಗಸ್ಟ್ 19: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂದು ಸೂಕ್ಷ್ಮರೋಗಾಣುಶಾಸ್ತ್ರಜ್ಞರು ಮತ್ತು ಸಂಶೋಧಕರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಇದರ ಮಧ್ಯೆ ಮಕ್ಕಳನ್ನು ಕಾಡುವ ನ್ಯೂಮೋನಿಯಾ ಕಾಂಜುಗೇಟ್ ಲಸಿಕೆಗಾಗಿ ಪೋಷಕರು ಪರದಾಡುವ ಅಗತ್ಯವಿಲ್ಲ. ಏಕೆಂದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಕೇಂದ್ರಗಳಲ್ಲೇ ಲಸಿಕೆ ಸಿಗಲಿದೆ.

ಭಾರತದಲ್ಲಿ ಸಾರ್ವತ್ರಿಕ ಪ್ರತಿರಕ್ಷಣಾ ಯೋಜನೆ ಅಡಿಯಲ್ಲಿ ಬಲುದುಬಾರಿ ಎನಿಸಿರುವ ನ್ಯೂಮೋನಿಯಾ ಕಾಂಜುಗೇಟ್ ಲಸಿಕೆಯನ್ನು ಸಪ್ಟೆಂಬರ್ ತಿಂಗಳಿನಿಂದ ವಿತರಣೆ ಮಾಡಲಾಗುತ್ತದೆ. ಬಿಬಿಎಂಪಿ ಪ್ರತಿ ತಿಂಗಳು ಶಿಶುಗಳಿಗೆ 15,400 ಡೋಸ್ ಲಸಿಕೆ ನೀಡುವ ಗುರಿಯನ್ನು ನಿಗದಿಪಡಿಸಿದೆ.

ಪ್ರತಿವರ್ಷ ನಗರದಲ್ಲಿ 1.2 ಲಕ್ಷ ಜನನಗಳು ವರದಿಯಾಗುತ್ತವೆ. ಮಕ್ಕಳಲ್ಲಿ ನ್ಯುಮೋಕೊಕಲ್ ನ್ಯುಮೋನಿಯಾ ಮತ್ತು ಮೆದುಳಿನ ಜ್ವರವನ್ನು ತಡೆಯುವ ಉದ್ದೇಶದಿಂದ ಲಸಿಕೆ ವಿತರಿಸಲಾಗುತ್ತದೆ. ನಗರ ಪ್ರದೇಶಗಳಲ್ಲಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಇದೇ ಲಸಿಕೆಗಾಗಿ ಹಣವಂತರು ಮತ್ತು ಗಣ್ಯರು ಸಾವಿರಾರು ರೂಪಾಯಿ ಹಣ ಪಾವತಿಸುತ್ತಾರೆ.

1 ಲಕ್ಷದಲ್ಲಿ 25 ಮಕ್ಕಳು ಸಾವು

1 ಲಕ್ಷದಲ್ಲಿ 25 ಮಕ್ಕಳು ಸಾವು

ವಿಶ್ವ ಆರೋಗ್ಯ ಸಂಸ್ಥೆಯ 2015ರ ಅಂಕಿ-ಅಂಶಗಳನ್ನು ಉಲ್ಲೇಖಿಸಿ, ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾ (ನ್ಯುಮೋಕೊಕಲ್ ನ್ಯುಮೋನಿಯಾವನ್ನು ಉಂಟುಮಾಡುವ ಬ್ಯಾಕ್ಟೀರಿಯಾ) ಪ್ರತಿ 1 ರಿಂದ 5 ವರ್ಷದೊಳಗಿನ ಪ್ರತಿ 1 ಲಕ್ಷ ಮಕ್ಕಳಲ್ಲಿ 10 ರಿಂದ 25 ಮಕ್ಕಳ ಸಾವಿಗೆ ಕಾರಣವಾಗುತ್ತದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಿ ರಂದೀಪ್ ಹೇಳಿದ್ದಾರೆ. ಶ್ವಾಸಕೋಶ, ರಕ್ತ, ಕೇಂದ್ರ ನರಮಂಡಲ ಮತ್ತು ಮಧ್ಯಮ ಕಿವಿಯಲ್ಲಿ ರೋಗದ ಲಕ್ಷಣಗಳನ್ನು ಕಾಣಬಹುದಾಗಿದೆ.

ಬಾಲ್ಯದಲ್ಲಿ ಮಕ್ಕಳ ಸಾವಿನ ಪ್ರಮಾಣ ನಿಯಂತ್ರಿಸಲು ಕ್ರಮ

ಬಾಲ್ಯದಲ್ಲಿ ಮಕ್ಕಳ ಸಾವಿನ ಪ್ರಮಾಣ ನಿಯಂತ್ರಿಸಲು ಕ್ರಮ

ಮಕ್ಕಳ ಸಾವಿಗೆ ನ್ಯುಮೋನಿಯಾ ರೋಗವು ಪ್ರಮುಖ ಕಾರಣವಾಗಿರುತ್ತದೆ. ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಲಸಿಕೆ ವಿತರಣೆ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಸಪ್ಟೆಂಬರ್ 1ರ ವೇಳೆಗೆ ಲಸಿಕೆಯ ಬಾಟಲಿಗಳು ಬೆಂಗಳೂರು ತಲುಪುವ ನಿರೀಕ್ಷೆಯಲ್ಲಿದ್ದು, ಲಸಿಕೆ ವಿತರಣೆ ಕುರಿತು ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಲು ನಾವು ಮೂರು ದಿನಗಳ ಹಿಂದೆ ಕೇಳಿದ್ದೇವೆ. ಪಿಎಚ್‌ಸಿ ಪ್ರಕಾರ, ಆಶಾಗಳು ಮತ್ತು ಎಎನ್‌ಎಂಗಳಿಗೆ ನಿರೀಕ್ಷಿತ ತಾಯಂದಿರ ವಿತರಣಾ ದಿನಾಂಕ ತಿಳಿಸಲಾಗಿದೆ, ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಿ ರಂದೀಪ್ ಹೇಳಿದ್ದಾರೆ.

ದುಬಾರಿ ಎನಿಸಿದ ನ್ಯೂಮೋನಿಯಾ ಕಾಂಜುಗೇಟ್ ಲಸಿಕೆ

ದುಬಾರಿ ಎನಿಸಿದ ನ್ಯೂಮೋನಿಯಾ ಕಾಂಜುಗೇಟ್ ಲಸಿಕೆ

ಖಾಸಗಿ ಆಸ್ಪತ್ರೆಗಳು ಮಗುವಿನ ಆರು ತಿಂಗಳ ಅವಧಿಯಲ್ಲಿ ನ್ಯೂಮೋನಿಯಾ ಕಾಂಜುಗೇಟ್ ಲಸಿಕೆಯ ಮೂರು ಡೋಸ್ ಅನ್ನು ನೀಡುತ್ತವೆ. 10ನೇ ವಾರ, 14ನೇ ವಾರ ಹಾಗೂ 18ನೇ ತಿಂಗಳಿನಲ್ಲಿ ಬೂಸ್ಟರ್ ಶಾಟ್ ನೀಡಲಾಗುತ್ತದೆ. ಇದರ ಹೊರತಾಗಿ ಸರ್ಕಾರದ ಯುಐಪಿ ಕಾರ್ಯಕ್ರಮದಡಿ ಮೂರು ಡೋಸ್ ನೀಡಲಾಗುತ್ತದೆ. 6ನೇ ಹಾಗೂ 14ನೇ ವಾರದಲ್ಲಿ ಮತ್ತು 9ನೇ ತಿಂಗಳಲ್ಲಿ ಬೂಸ್ಟರ್ ಶಾಟ್ ನೀಡಲಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ.

Recommended Video

    David Warner ಹಂಚಿಕೊಂಡ ಹೊಸ ವಿಡಿಯೋ ನೋಡಿ ಕನ್ನಡಿರು ಖುಷ್ | Oneindia Kannada
    ಮೂರು ಡೋಸ್ ಲಸಿಕೆಗೆ 11,000 ರೂಪಾಯಿ

    ಮೂರು ಡೋಸ್ ಲಸಿಕೆಗೆ 11,000 ರೂಪಾಯಿ

    ಖಾಸಗಿ ಆಸ್ಪತ್ರೆಗಳಲ್ಲಿ ಇದೇ ಲಸಿಕೆಯ ಮೂರು ಡೋಸ್ ಪಡೆದುಕೊಳ್ಳುವುದಕ್ಕೆ ಕನಿಷ್ಠ 4,485 ರೂಪಾಯಿಯಿಂದ 11,403 ರೂಪಾಯಿವರೆಗೂ ನೀಡಬೇಕಾಗುತ್ತದೆ. ಅಲ್ಲಿಗೆ ಒಂದು ಡೋಸ್ ಲಸಿಕೆಗೆ 1,495 ರೂ.ಯಿಂದ 3,801 ರೂಪಾಯಿ ಆಗಿರುತ್ತದೆ. ಲಸಿಕೆಗಳ ವೆಚ್ಚವು ಮೊದಲ ಬಾರಿಗೆ ಸರ್ಕಾರದ ವ್ಯಾಪ್ತಿಗೆ ಬಂದಿವೆ ಎಂದು ಅವರು ತಿಳಿಸಿದ್ದಾರೆ.

    ಆಸ್ಪತ್ರೆಗಳು ಮತ್ತು ವೈದ್ಯರು ಹೇಳುವುದೇನು?:

    * ಮಗು ಹುಟ್ಟಿದ ಮೊದಲ ವರ್ಷದಲ್ಲಿ ಮೂರು ಡೋಸ್ ಮತ್ತು 18 ತಿಂಗಳಲ್ಲಿ ಬೂಸ್ಟರ್ ಶಾಟ್ ನೀಡುವುದಕ್ಕೆ ಭಾರತೀಯ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಶಿಫಾರಸು ಮಾಡಿದೆ. "ನ್ಯುಮೊಕೊಕಲ್ ರೋಗವು ಜೀವಕ್ಕೆ ಅಪಾಯಕಾರಿ" ಎಂದು ಮಣಿಪಾಲ್ ಆಸ್ಪತ್ರೆಗಳಲ್ಲಿ ನವಜಾತಶಾಸ್ತ್ರಜ್ಞ ಡಾ ನಾಗೇಶ್ ಹೇಳಿದ್ದಾರೆ. "ಆಕ್ರಮಣಕಾರಿ ರೋಗಾಣುಗಳು ರಕ್ತದಲ್ಲಿ ಸೋಂಕು ಹರಡಬಹುದು, ಜೊತೆಗೆ ಮೆದುಳು, ಎದೆ ಅಥವಾ ಕಿವಿಗಳಿಗೆ ತೀವ್ರವಾಗಿ ಸೋಂಕು ತಗಲುವಂತೆ ಮಾಡುತ್ತವೆ. ನ್ಯುಮೊಕೊಕಲ್ ಕಾಂಜುಗೇಟ್ ಲಸಿಕೆ ಮಕ್ಕಳ ಸಾವಿ ಪ್ರಮಾಣವನ್ನು ತಗ್ಗಿಸುತ್ತದೆ ಎಂದಿದ್ದಾರೆ.

    * ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅವಧಿಯಲ್ಲಿ ಮಕ್ಕಳಿಗೆ ನ್ಯುಮೋಕೊಕಲ್ ರೋಗದ ವಿರುದ್ಧ ಲಸಿಕೆ ಹಾಕುವುದಕ್ಕೆ ಫೋರ್ಟಿಸ್ ಆಸ್ಪತ್ರೆಯ ಶಿಶುವೈದ್ಯ ಡಾ. ಯೋಗೀಶ್ ಕುಮಾರ್ ಬೆಂಬಲ ಸೂಚಿಸಿದ್ದಾರೆ. ಏಕೆಂದರೆ ನ್ಯುಮೋನಿಯಾ ಮಕ್ಕಳಲ್ಲಿನ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಹಾಗೂ ಇದರಿಂದಾಗಿ ಮಕ್ಕಳಲ್ಲಿ ಕೋವಿಡ್ -19 ಸೋಂಕಿನ ಅಪಾಯ ಹೆಚ್ಚಾಗುತ್ತದೆ ಎಂದಿದ್ದಾರೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+