ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಂಬಿಡೆಂಟ್ ಹಗರಣ: ಜನಾರ್ದನ ರೆಡ್ಡಿ ಆಪ್ತ ಅಲಿಖಾನ್‌ಗೆ 8 ದಿನ ಸಿಸಿಬಿ ಆತಿಥ್ಯ

|
Google Oneindia Kannada News

ಬೆಂಗಳೂರು, ನವೆಂಬರ್ 23: ಆಂಬಿಡೆಂಟ್ ಕಂಪನಿ ಚಿಟ್ ಫಂಡ್ ಹಗರಣ ಕುರಿತಂತೆ ಪ್ರಮುಖ ಆರೋಪಿಯಾಗಿದ್ದ ಅಲಿಖಾನ್‌ನನ್ನು ನ್ಯಾಯಾಲಯ 8 ದಿನಗಳ ಕಾಲ ಸಿಸಿಬಿಗೆ ಒಪ್ಪಿಸಿದೆ.

ಪ್ರಕರಣದ ತನಿಖಾಧಿಕಾರಿಯನ್ನು ಬದಲಾಯಿಸಿದ ನಂತರ ಹೊಸದಾಗಿ ಪ್ರಕರಣದ ತನಿಖೆ ಆರಂಭಿಸಿದ ಎಸಿಬಿ ಬಾಲರಾಜ್ ಇದುವರೆಗಿನ ತನಿಖೆಯ ವಿಚಾರಗಳನ್ನು ಇತರೆ ತನಿಖಾ ತಂಡದ ಸಿಬ್ಬಂದಿಗಳಿಂದ ಪಡೆದುಕೊಂಡಿದ್ದಾರೆ.

ಆಂಬಿಡೆಂಟ್ ಕೇಸ್ : ಅಲಿಖಾನ್ ಜಾಮೀನು ಅರ್ಜಿ ವಜಾ, ಕೋರ್ಟ್‌ಗೆ ಶರಣು ಆಂಬಿಡೆಂಟ್ ಕೇಸ್ : ಅಲಿಖಾನ್ ಜಾಮೀನು ಅರ್ಜಿ ವಜಾ, ಕೋರ್ಟ್‌ಗೆ ಶರಣು

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಆರೋಪಿ ಅಲಿಖಾನ್‌ನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ ಸಿಸಿಬಿ ಅಧಿಕಾರಿಗಳು ಈತನಿಂದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಅಗತ್ಯ ಮಾಹಿತಿ ಸಾಕ್ಷ್ಯಗಳನ್ನು ಸಂಗ್ರಹಿಸಬೇಕು ಇದಕ್ಕಾಗಿ 14 ದಿನಗಳ ಪೊಲೀಸ್ ಕಸ್ಟಡಿ ಬೇಕು ಎಂದು ಕೇಳಿದ್ದರು.

ಆಂಬಿಡೆಂಟ್ ಕಂಪನಿ 950 ಕೋಟಿ ಚಿಟ್ ಫಂಡ್ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಧಿಸಿ ಜಾಮೀನಿನ ಮೇಲೆ ಬಿಡಲಾಗಿದೆ. ಹಾಗೆಯೇ ಅಲಿಖಾನ್ ನನ್ನು 1 ನೇ ಎಸಿಎಂಎಂ ಕೋರ್ಟ್ ನ್ಯಾಯಾಲಯಕ್ಕೆ ಒಪ್ಪಿಸಿದೆ.

ಜನಾರ್ದನ ರೆಡ್ಡಿ ಬಂಟ ಅಲಿಖಾನ್ ಮೊಬೈಲ್‌ಗಾಗಿ ಬಾವಿಯಲ್ಲಿ ಹುಡುಕಾಟಜನಾರ್ದನ ರೆಡ್ಡಿ ಬಂಟ ಅಲಿಖಾನ್ ಮೊಬೈಲ್‌ಗಾಗಿ ಬಾವಿಯಲ್ಲಿ ಹುಡುಕಾಟ

ಆಂಬಿಡೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು ಸಾಕ್ಷ್ಯ ನಾಶದ ಕಾರಣದಿಂದ ಬಾವಿಗೆ ಎಸೆದಿದ್ದ ಅಲಿಖಾನ್ ಮೊಬೈಲ್‌ನ್ನು ವಶಕ್ಕೆ ಪಡೆಯಲು ಸಿಸಿಬಿ ತನಿಖಾ ತಂಡ ಮುಂದಾಗಿದೆ.

ಅಲಿಖಾನ್ ಮೊಬೈಲ್‌ ತನಿಖೆ ಬಹಳ ಮುಖ್ಯ

ಅಲಿಖಾನ್ ಮೊಬೈಲ್‌ ತನಿಖೆ ಬಹಳ ಮುಖ್ಯ

ಆಂಬಿಡೆಂಟ್ ಚಿಟ್ ಫಂಡ್ ಹಗರಣ ತನಿಖೆಗೆ ಅಲಿಖಾನ್ ಮೊಬೈಲ್ ಸಿಗುವುದು ಅತ್ಯಂತ ಮುಖ್ಯವಾಗಿದೆ.ಪೊಲೀಸರು ಆತನನ್ನು ಬಂಧಿಸಲು ತೆರಳಿದ್ದ ವೇಳೆಯಲ್ಲ ಆತನ ತನ್ನ ಮೊಬೈಲ್‌ನ್ನು ಸಹಚರ ಜಯರಾಂ ಕೈಗೆ ಕೊಟ್ಟಿದ್ದ. ಜಯರಾಂ ಮೊಬೈಲ್‌ನ್ನು ನೀರಿಗೆ ಎಸೆದಿದ್ದಾನೆ ಎಂದು ಸಿಸಿಬಿ ಅಧಿಕಾರಿಗಳು ಕಳೆದ ವಾರ ನ್ಯಾಯಾಲಯಕ್ಕೆ ತಿಳಿಸಿದ್ದರು.

ವಕೀಲರ ವಾದವೇನು

ವಕೀಲರ ವಾದವೇನು

ಆರೋಪಿಯ ಚರ ಮತ್ತು ಸ್ಥಿರ ಆಸ್ತಿ ಮುಟ್ಟುಗೋಲಿಗೆ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ ಪ್ರಮುಖ ಆರೋಪಿ ಫರೀದ್ ಜಾಮೀನಿನ ಮೇಲೆ ಹೊರಗೆ ಇದ್ದಾನೆ. ಈ ಹಂತದಲ್ಲಿ ಅಲಿಖಾನ್ ಅವರನ್ನು ವಶಕ್ಕೆ ಪಡೆಯುವುದರಲ್ಲಿ ಅರ್ಥವಿಲ್ಲ. 18 ಕೋಟಿ ಹಣವನ್ನು ವಾಪಸ್ ಕೊಡುವುದಾಗಿ ನ್ಯಾಯಾಲಯದ ಮುಂದೆ ಪ್ರಮಾಣವನ್ನೂ ಮಾಡಿದ್ದಾರೆ. ಸಿಸಿಬಿಗೆ ಹಣ ಮತ್ತು ಆಸ್ತಿ ಜಪ್ತಿ ಮಾಡುವ ಅಧಿಕಾರವಿಲ್ಲ ಎಂದು ಹೇಳಿದ್ದಾರೆ.

ಜನಾರ್ದನ ರೆಡ್ಡಿಗೆ ಆಂಬಿಡೆಂಟ್ 20 ಕೋಟಿ ಕೊಟ್ಟಿದ್ದೇಕೆ? ಡೀಟೇಲ್ಸ್ ಇಲ್ಲಿದೆಜನಾರ್ದನ ರೆಡ್ಡಿಗೆ ಆಂಬಿಡೆಂಟ್ 20 ಕೋಟಿ ಕೊಟ್ಟಿದ್ದೇಕೆ? ಡೀಟೇಲ್ಸ್ ಇಲ್ಲಿದೆ

ನ್ಯಾಯಾಲಯದ ಪ್ರತಯುತ್ತರವೇನು?

ನ್ಯಾಯಾಲಯದ ಪ್ರತಯುತ್ತರವೇನು?

ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ, ತನಿಖೆಗೆ ನ್ಯಾಯಾಲಯ ಅಡ್ಡಿ ಪಡಿಸುವುದು ಸಾಧ್ಯವಿಲ್ಲ, ತನಿಖೆಯ ಈ ಹಂತದಲ್ಲಿ ಸಿಸಿಬಿ ಅಧಿಕಾರಿಗಳು ಏನು ಕೇಳುತ್ತಿದ್ದಾರೆ ಎನ್ನುವುದನ್ನು ನಾವೇ ಊಹಿಸುವುದು ಸರಿಯಾಗುವುದಿಲ್ಲ ಎಂದು ತಿಳಿಸಿದೆ.

ಅಲಿಖಾನ್ ವಿಚಾರಣೆ

ಅಲಿಖಾನ್ ವಿಚಾರಣೆ

ಅಲಿಖಾನ್‌ನನ್ನು ವಶಕ್ಕೆ ಪಡೆದ ಸಿಸಿಬಿ ಅಧಿಕಾರಿಗಳು ವೈದ್ಯ ಪರೀಕ್ಷೆ ನಂತರ ತೀವ್ರ ವಿಚಾರಣೆ ಆರಂಭಿಸಿದರು. ತಾನು ಸಿಬಿಐ ಅಧಿಕಾರಿಗಳ ವಿಚಾರಣೆಯನ್ನೇ ಎದುರಿಸಿದವನು ಇದು ಯಾವ ಲೆಕ್ಕ ಎನ್ನುವ ಭಾವದಲ್ಲಿ ಆತ ಇದ್ದಂತಿದ್ದ, ತನಿಖೆಗೆ ಸಹಕಾರ ನೀಡದಿದ್ದರೆ ನ್ಯಾಯಾಲಯದ ಗಮನಕ್ಕೆ ತರುತ್ತೇನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನಾರ್ದನ ರೆಡ್ಡಿಗೆ ಪ್ರತಿ ದೀಪಾವಳಿ ಅಮಾವಾಸ್ಯೆ ಕಂಟಕ ಪ್ರಾಯವೇ? ಹೀಗೊಂದು ಜಿಜ್ಞಾಸೆ ಜನಾರ್ದನ ರೆಡ್ಡಿಗೆ ಪ್ರತಿ ದೀಪಾವಳಿ ಅಮಾವಾಸ್ಯೆ ಕಂಟಕ ಪ್ರಾಯವೇ? ಹೀಗೊಂದು ಜಿಜ್ಞಾಸೆ

English summary
Prime accused of Ambident fraud case was handed over to Bengaluru central crime bureau for eight as police have sought before the court of custody for further investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X