Get Updates
Get notified of breaking news, exclusive insights, and must-see stories!

ಬಿಬಿಎಂಪಿ ಕಣದಲ್ಲಿ ಜೆಡಿಎಸ್ಸಿನ ಅಶ್ವಿನಿ ಎಂಕಾಂ ವಿದ್ಯಾರ್ಥಿನಿ

ಬೆಂಗಳೂರು, ಆಗಸ್ಟ್, 14 : ಚುನಾವಣೆ ಎಂದರೆ ಸಾಕು ಯುವಜನಾಂಗದವರು ಮೂಗು ಮುರಿಯುವುದೇ ಹೆಚ್ಚು. ಅಂತಹದ್ದರಲ್ಲಿ ಯುವತಿಯೊಬ್ಬಳು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಲ್ಲರಿಗೂ ಮಾದರಿಯಾಗಿದ್ದಾಳೆ.

ಒಂದು ಓಟು ಹಾಕಿ ಎಂದು ಜನರ ಬಳಿ ತೆರಳುವ ಅಶ್ವಿನಿ.ಟಿ ಕೇವಲ 22ರ ಹರೆಯದ ಯುವತಿ . ಈ ವರ್ಷದ ಬಿಬಿಎಂಪಿ ಚುನಾವಣೆಯ ಅತ್ಯಂತ ಕಿರಿಯ ಅಭ್ಯರ್ಥಿ ಎಂಬ ಖ್ಯಾತಿಯೂ ಇವರ ಪಾಲಿಗಿದೆ.[ಬೆಂಗಳೂರು ನಗರವನ್ನು ಹಾಂಕಾಂಗ್ ನಂತೆ ಮಾಡ್ತೇವೆ: ಜೆಡಿಎಸ್]

All of 22, this political novice means business, Ashwini is JDS candidate in Deepanjali ward

ಅಶ್ವಿನಿ ಎಂ.ಕಾಂ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ಪ್ರಸ್ತುತ ದೀಪಂಜಲಿ ನಗರ (ವಾರ್ಡ್ ನಂ.158) ದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಯಾವುದೇ ರಾಜಕೀಯ ಹಿನ್ನೆಲೆ ಹೊಂದಿರದ ಈಕೆ ಸ್ವಯಂಪ್ರೇರಿತರಾಗಿ ರಾಜಕೀಯ ಅಂಗಳದಲ್ಲಿ ಪಾದಾರ್ಪಣೆ ಮಾಡಿದ್ದಾರೆ.

ತಮ್ಮ ವಾರ್ಡಿನಲ್ಲಿನ ತೊಂದರೆ, ಜನರ ಯೋಚನಾ ಲಹರಿ ಅದರಲ್ಲೂ ಯುವಜನಾಂಗದವರು ರಾಜಕೀಯ ಬಗ್ಗೆ ತೋರಿರುವ ಅಸಡ್ಡೆ ಮನೋಭಾವವನ್ನು ಬದಲಿಸಬೇಕಿದೆ. ಯುವಜನಾಂಗ ಸ್ವಯಂಪ್ರೇರಣೆಯಿಂದ ರಾಜಕೀಯ ಪ್ರವೇಶ ಮಾಡುವಂತೆ ಮಾಡಬೇಕು.

ರಾಜಕಾರಣಿಗಳ ಕುರಿತಾಗಿ ತೋರಿರುವ ನಿರ್ಲಕ್ಷ ಭಾವವನ್ನು ತೊಲಗಿಸಬೇಕು. ರಾಜಕಾರಣಿಗಳಲ್ಲಿ ಎಲ್ಲರೂ ಭ್ರಷ್ಟರಲ್ಲ, ರಾಜಕೀಯ
ನೀಚರ ಪ್ರಪಂಚವಲ್ಲ ಎಂದು ತೋರಿಸಿಕೊಡಬೇಕು. ಪ್ರತಿನಿತ್ಯ ಚರ್ಚೆಯಲ್ಲಿರುವ ಭ್ರಷ್ಟಾಚಾರ ನಿರ್ಮೂಲನೆಗಾಗಿ ಪಣ ತೊಟ್ಟು ಕಾರ್ಯ ಮಾಡಲಿದ್ದೇನೆ ಎಂದರು.

ರಾಜಕೀಯ ಪಯಣಕ್ಕೆ ಬಹಳ ಸಂತೋಷದಿಂದ ನನ್ನ ಸ್ನೇಹಿತರು, ಉಪನ್ಯಾಸಕರು ಬೆಂಬಲ ತೋರಿದ್ದು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿ ಯುವಜನಾಂಗಕ್ಕೆ ಮಾದರಿಯಾಗುವಂತೆ ಸಲಹೆ ನೀಡಿದ್ದಾರೆ.

ನನ್ನ ಬೆಂಬಲಿಸಿದವರೆಲ್ಲರ ಆಶಯದಂತೆ ಕಾರ್ಯೋನ್ಮುಖರಾಗುತ್ತೇನೆ. ಅಕಸ್ಮಾತ್ ಈ ಚುನಾವಣೆಯಲ್ಲಿ ಗೆದ್ದರೆ ನನ್ನ ವಿದ್ಯಾಭ್ಯಾಸ ಸ್ಥಗಿತಗೊಳಿಸಿ ರಾಜಕೀಯದಲ್ಲಿಯೇ ಮುಂದುವರೆಯಲು ಇಚ್ಛಿಸಿದ್ದೇನೆ ಎಂದು ಅಶ್ವಿನಿ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+